ETV Bharat / bharat

ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.:  ಪ್ರಸ್ತಾವನೆ ಅನುಮೋದಿಸಿದ ರಕ್ಷಣಾ ಸಚಿವಾಲಯ - ಡ್ರೋನ್‌ಗಳು ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಕಾರ್ಬೈನ್‌ಗಳು ಸೇರಿದಂತೆ ಇತರೆ ಖರೀಧಿಗೆ ಅನುಮತಿ

28,732 ಕೋಟಿ ಮೊತ್ತದ ಸಶಸ್ತ್ರ ಪಡೆಗಳ ಖರೀದಿಗೆ ಸಚಿವಾಲಯ ಅನುಮೋದನೆ ನೀಡಿದೆ. ಇದು ಆತ್ಮನಿರ್ಭರ ಭಾರತದ ಅನುಸರಣೆಯಾಗಿದೆ.

ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂಪಾಯಿ ಪ್ರಸ್ತಾವನೆ ಅನುಮೋದಿಸಿ ರಕ್ಷಣಾ ಸಚಿವಾಲಯ

author img

By

Published : Jul 26, 2022, 9:49 PM IST

ನವದೆಹಲಿ: ಡ್ರೋನ್‌ಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಕಾರ್ಬೈನ್‌ಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ 28,732 ಕೋಟಿ ರೂ.ಗಳ ಖರೀದಿ ಪ್ರಸ್ತಾವನೆಗಳಿಗೆ ರಕ್ಷಣಾ ಸಚಿವಾಲಯ ಇಂದು ಅನುಮೋದನೆ ನೀಡಿದೆ. 28,732 ಕೋಟಿ ಮೊತ್ತದ ಸಶಸ್ತ್ರ ಪಡೆಗಳ ಬಂಡವಾಳ ಸ್ವಾದೀನ ಪ್ರಸ್ತಾವನೆಗಳಿಗೆ ಅಗತ್ಯತೆಯ ಸ್ವೀಕಾರವನ್ನು ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್​ನಲ್ಲಿ ನೀಡಲಾಗಿದೆ. ಇದು ಆತ್ಮನಿರ್ಭರ ಭಾರತ್​ಗೆ ಮತ್ತಷ್ಟು ಉತ್ತೇಜನವನ್ನು ನೀಡಲಿದೆ.

ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಪಡೆಗಳಿಗೆ ಶತ್ರು ಸ್ನೈಪರ್‌ಗಳ ಬೆದರಿಕೆಯ ವಿರುದ್ಧ ರಕ್ಷಣೆ ಪಡೆಯಲು ಮತ್ತು ಭಯೋತ್ಪಾದನಾ ನಿಗ್ರಹ ಸನ್ನಿವೇಶಗಳಲ್ಲಿ ನಿಕಟ ಯುದ್ಧ ಕಾರ್ಯಾಚರಣೆಗಳಲ್ಲಿ ಭಾಗಿಯಾಗಲು ಭಾರತೀಯ ಗುಣಮಟ್ಟದ BIS VI ಮಟ್ಟದ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಎಲ್​ಎಸಿ ಮತ್ತು ಪೂರ್ವ ಗಡಿಗಳಲ್ಲಿ ಸಾಂಪ್ರದಾಯಿಕ ಮತ್ತು ಹೈಬ್ರಿಡ್ ಯುದ್ಧ ಹಾಗೂ ಭಯೋತ್ಪಾದನೆ ನಿಗ್ರಹದ ಪ್ರಸ್ತುತ ಸಂಕೀರ್ಣ ಸ್ಥಿತಿಯನ್ನು ಎದುರಿಸಲು ಸುಮಾರು 4 ಲಕ್ಷ ಕ್ಲೋಸ್ ಕ್ವಾರ್ಟರ್ ಬ್ಯಾಟಲ್ ಕಾರ್ಬೈನ್‌ಗಳ ಇಂಡಕ್ಷನ್​ಗೂ ಈ ಅನುಮೋದನೆ ದೊರೆತಿದೆ. ಇದು ಭಾರತದಲ್ಲಿನ ಸಣ್ಣ ಶಸ್ತ್ರಾಸ್ತ್ರ ಉತ್ಪಾದನಾ ಉದ್ಯಮಕ್ಕೆ ಪ್ರಮುಖ ಪ್ರಚೋದನೆ ಒದಗಿಸಲು ಮತ್ತು ಆತ್ಮನಿರ್ಭರ ಭಾರತವನ್ನು ಪ್ರೋತ್ಸಾಹಿಸಲು ಯೋಜಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಪ್ರಪಂಚದಾದ್ಯಂತದ ಇತ್ತೀಚಿನ ಸಂಘರ್ಷಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಡ್ರೋನ್ ತಂತ್ರಜ್ಞಾನವು ದೊಡ್ಡ ಶಕ್ತಿ ಎಂದು ಸಾಬೀತಾಗಿದೆ. ಅಂತೆಯೇ, ಆಧುನಿಕ ಯುದ್ಧದಲ್ಲಿ ಭಾರತೀಯ ಸೇನೆಯ ಸಾಮರ್ಥ್ಯ ಹೆಚ್ಚಿಸಲು, ಸ್ವಾಯತ್ತ ಕಣ್ಗಾವಲು ಮತ್ತು ಸಶಸ್ತ್ರ ಡ್ರೋನ್ ಸಮೂಹಗಳ ಸಂಗ್ರಹಣೆಗಾಗಿಯೂ ಅನುಮೋದನೆ ದೊರೆತಿದೆ.

ಇನ್ನು ಭಾರತೀಯ ಉದ್ಯಮದ ಮೂಲಕ ಕೋಲ್ಕತ್ತಾ ಭಾಗದ ಹಡಗುಗಳಲ್ಲಿ ವಿದ್ಯುತ್ ಉತ್ಪಾದನೆ ಅನ್ವಯಕ್ಕಾಗಿ ನವೀಕರಿಸಿದ 1250KW ಸಾಮರ್ಥ್ಯದ ಸಾಗರ ಅನಿಲ ಟರ್ಬೈನ್ ಜನರೇಟರ್ ಅನ್ನು ಸಂಗ್ರಹಿಸುವ ನೌಕಾಪಡೆಯ ಪ್ರಸ್ತಾವನೆಯನ್ನೂ ಸಹ ಈ ವೇಳೆ ರಕ್ಷಣಾ ಸ್ವಾಧೀನ ಮಂಡಳಿ ಅನುಮೋದಿಸಿದೆ. ಇದು ಗ್ಯಾಸ್ ಟರ್ಬೈನ್ ಜನರೇಟರ್‌ಗಳ ಸ್ಥಳೀಯ ಉತ್ಪಾದನೆಗೆ ಪ್ರಮುಖ ಉತ್ತೇಜನ ನೀಡಲಿದೆ.

ಇದನ್ನೂ ಓದಿ: ಕೇರಳದಲ್ಲೊಂದು ಅಪರೂಪದ ಘಟನೆ: ಪತಿಗೆ ಅಧಿಕಾರ ಹಸ್ತಾಂತರಿಸಿದ ಪತ್ನಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.