ETV Bharat / bharat

ಮಾನನಷ್ಟ ಮೊಕದ್ದಮೆ: ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೇಳಿದ ರಾಹುಲ್​ ಗಾಂಧಿ - 2014 ರಲ್ಲಿ ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್​ ಗಾಂಧಿ ಆರ್​​ಎಸ್​​ಎಸ್​ ವಿರುದ್ಧ ಮಾಡಿದ್ದ ಆರೋಪ ಪ್ರಕರಣ

2014 ರಲ್ಲಿ ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್​ ಗಾಂಧಿ ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೈವಾಡವಿದೆ ಎಂದು ಹೇಳಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ

Defamation case: Rahul Gandhi seeks permanent exemption from appearance in Maha court
ಮಾನನಷ್ಟ ಮೊಕ್ಕದ್ದಮೆ: ಖುದ್ದು ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೇಳಿದ ರಾಹುಲ್​ ಗಾಂಧಿ
author img

By

Published : May 11, 2022, 3:23 PM IST

Updated : May 11, 2022, 3:34 PM IST

ಥಾಣೆ( ಮಹಾರಾಷ್ಟ್ರ): ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾತಿಗೆ ಶಾಶ್ವತ ವಿನಾಯಿತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಥಾಣೆಯ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ಕೋರ್ಟ್​ನಲ್ಲಿ ಈ ಸಂಬಂಧ ರಾಹುಲ್​​​ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ ವಿ ಪಲಿವಾಲ್, ದೂರುದಾರ ಸ್ಥಳೀಯ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರಿಗೆ ಈ ಸಂಬಂಧದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದು, ಮುಂದಿನ ವಿಚಾರಣೆಯನ್ನು ಮೇ 18ಕ್ಕೆ ಮುಂದೂಡಿದ್ದಾರೆ.

ಏನಿದು ಪ್ರಕರಣ?: 2014 ರಲ್ಲಿ ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್​ ಗಾಂಧಿ ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕೈವಾಡವಿದೆ ಎಂದು ಹೇಳಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ರಾಹುಲ್​ ಅವರ ಈ ಮಾತಿನ ವಿರುದ್ಧ ಆರ್​​ಎಸ್​ಎಸ್​ ಕಾರ್ಯಕರ್ತ ರಾಜೇಶ್​ ಕುಂಟೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರಾಹುಲ್​ ಗಾಂಧಿ ಅವರ ಈ ಹೇಳಿಕೆ ಆರ್‌ಎಸ್‌ಎಸ್‌ನ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಕುಂಟೆ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್​​​​​​​ನಲ್ಲಿದ್ದು, ಪದೇ ಪದೇ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ರಾಹುಲ್​ ಗಾಂಧಿ ಪರ ವಕೀಲರು ಜೆಎಂಎಫ್‌ಸಿ ಕೋರ್ಟ್​​​ಗೆ ಅರ್ಜಿ ಸಲ್ಲಿಸಿದ್ದಾರೆ. ತಾವು ಸಂಸತ್​​​​​​​​​​​ ಸದಸ್ಯರಾಗಿರುವ (ಕೇರಳದ ವಯನಾಡ್‌ನಿಂದ) ಕಾರಣ ತಮ್ಮ ಕ್ಷೇತ್ರಕ್ಕೆ ಆಗಾಗ ಭೇಟಿ ನೀಡಬೇಕಾಗುತ್ತದೆ ಹಾಗೂ ಪಕ್ಷದ ಕೆಲಸಕ್ಕೆ ಹಾಜರಾಗಬೇಕಿರುವುದರಿಂದ ಸದಾ ಬ್ಯೂಸಿ ಇರುತ್ತೇನೆ. ಆದ್ದರಿಂದ ಘನ ನ್ಯಾಯಾಲಯವು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ರಾಹುಲ್​ ಗಾಂಧಿ ಕೋರಿದ್ದಾರೆ.

ರಾಹುಲ್​ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ಈ ಅರ್ಜಿ ಸಲ್ಲಿಸಿದ್ದು, ಅಗತ್ಯ ಬಿದ್ದಾಗ ವಿಚಾರಣೆಯಲ್ಲಿ ತಮ್ಮ ಪರ ವಕೀಲರಿಂದ ಪ್ರತಿನಿಧಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ.

ವಿಚಾರಣೆ 18ಕ್ಕೆ ಮುಂದೂಡಿದ ಕೋರ್ಟ್​: ಇನ್ನು ಮಂಗಳವಾರ ದೂರುದಾರ ರಾಜೇಶ್​ ಕುಂಟೆ ಅವರು ಅಸ್ವಸ್ಥರಾಗಿರುವ ಕಾರಣ, ಹಾಜರಾತಿಯಿಂದ ವಿನಾಯಿತಿ ಕೋರಿದರು. ಅದನ್ನು ಮಾನ್ಯ ಮಾಡಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು 18ಕ್ಕೆ ಮುಂದೂಡಿತು.

ಇದನ್ನು ಓದಿ:ಚಂಪಾವತ್​ ಗೆಲ್ಲಲು ಬಿಜೆಪಿ ಮಾಸ್ಟರ್​ ಪ್ಲಾನ್​: ಸಿಎಂ ಗೆಲ್ಲಿಸಿಕೊಳ್ಳಲು ಯೋಗಿ ಆದಿತ್ಯನಾಥಗೆ ಹೊಣೆ

Last Updated : May 11, 2022, 3:34 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.