ETV Bharat / bharat

ಅಗ್ನಿಪಥ ರೋಷಾಗ್ನಿಗೆ ಕೃಷಿ ಬಿಕ್ಕಟ್ಟಿನ ಕೋಪಾಗ್ನಿಯೇ ಕಾರಣ..? - ಅಗ್ನಿವೀರ್ ಯೋಜನೆಯ ಉಪಯೋಗಗಳು

ರಾಷ್ಟ್ರೀಯ ಸಾಂಖ್ಯಿಕ ಸಚಿವಾಲಯದ ಅಂಕಿ - ಸಂಖ್ಯೆಗಳ ಪ್ರಕಾರ, 2021ರಲ್ಲಿ ನಡೆದ 77ನೇ ಸುತ್ತಿನ ಸಮೀಕ್ಷೆಯಂತೆ- ಭಾರತದಲ್ಲಿ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ತಲಾದಾಯ 10,218 ರೂಪಾಯಿಗಳಾಗಿತ್ತು. ಅದೇ ಸಮಯಕ್ಕೆ ಬಿಹಾರದ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ತಲಾದಾಯ ದೇಶದಲ್ಲೇ ಅತ್ಯಂತ ಕನಿಷ್ಠ 3,558 ರೂಪಾಯಿಗಳಾಗಿತ್ತು. ಪಶ್ಚಿಮ ಬಂಗಾಳ 3,980 ರೂಪಾಯಿ, ಉತ್ತರಾಖಂಡ 4,701 ರೂಪಾಯಿ, ಜಾರ್ಖಂಡ್ 4,721, ಉತ್ತರ ಪ್ರದೆಶ 4,923 ಮತ್ತು ಒಡಿಶಾದಲ್ಲಿ 4,976 ರೂಪಾಯಿಗಳಾಗಿತ್ತು.

Decoding Agnipath protests: Case of agricultural distress spilling over

author img

By

Published : Jun 22, 2022, 12:37 PM IST

ನವದೆಹಲಿ: ಭಾರತೀಯ ಸೈನಿಕ ಎಂದರೆ ಆತನೊಬ್ಬ ಸಮವಸ್ತ್ರದಲ್ಲಿರುವ ರೈತ ಎಂದು ಹೇಳಲಾಗುತ್ತದೆ. ಇತ್ತೀಚೆಗೆ ದೇಶಾದ್ಯಂತ ಗ್ರಾಮೀಣ ರೈತಾಪಿ ವರ್ಗದಿಂದ ಬಂದ ಯುವ ಸಮುದಾಯ ಪ್ರತಿಭಟನೆ ಹಾಗೂ ಹಿಂಸಾಚಾರ ನಡೆಸಿದ್ದು ಯಾಕೆ ಎಂಬ ಪ್ರಶ್ನೆಗೆ ಈ ಮಾತಿನಲ್ಲಿ ಉತ್ತರವಿದೆ. ಭಾರತದ ರೈತರ ಪ್ರಮುಖ ಸಂಘಟನೆಯೊಂದರ ಅಂಗ ಸಂಘಟನೆಯಾದ ಸಂಯುಕ್ತ ಕಿಸಾನ್​ ಮೋರ್ಚಾ (ಎಸ್​ಕೆಎಂ), ಅಗ್ನಿಪಥ ಮಿಲಿಟರಿ ನೇಮಕಾತಿ ಯೋಜನೆ ವಿರೋಧಿಸಿ ಜೂನ್ 24 ರಂದು ದೇಶವ್ಯಾಪಿ ಬಂದ್​ಗೆ ಕರೆ ನೀಡಿದ್ದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಕೃಷಿ ಕೂಲಿ ಕಾರ್ಮಿಕರು ಈಗಾಗಲೇ ಹಲವಾರು ಸಮಸ್ಯೆಗಳ ಸುಳಿಯಲ್ಲಿ ನರಳುತ್ತಿರುವುದಕ್ಕೂ ಈಗ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳಿಗೂ ನೇರವಾದ ಸಂಬಂಧವಿದೆ. ಬಹುದೊಡ್ಡ ಸಂಖ್ಯೆಯಲ್ಲಿ ಜನ ಬೀದಿಗಿಳಿಯುತ್ತಿರುವುದನ್ನು ಗಮನಿಸಿ. ಗ್ರಾಮೀಣ ಭಾಗದಲ್ಲಿ ಸದ್ಯ ಇರುವ ಸಂಕಷ್ಟದ ಸ್ಥಿತಿಯ ಪ್ರತಿಬಿಂಬ ಇದಾಗಿದೆ.

ಸಮೀಕ್ಷೆ ಹೇಳೋದೇನು?: 2016ರ ಆರ್ಥಿಕ ಸಮೀಕ್ಷೆಯ ಪ್ರಕಾರ, ದೇಶದ 17 ರಾಜ್ಯಗಳಲ್ಲಿ ಪ್ರತಿ ಕೃಷಿ ಕುಟುಂಬವೊಂದರ ಸರಾಸರಿ ವಾರ್ಷಿಕ ಆದಾಯ ಕೇವಲ 20,000 ರೂಪಾಯಿಗಳಾಗಿದೆ. ಬಹುತೇಕ ಅರ್ಧ ಭಾರತದಲ್ಲಿ ಈ ಪರಿಸ್ಥಿತಿ ಇದೆ. ರೈತನೊಬ್ಬ ತಿಂಗಳಿಗೆ 1700 ರೂಪಾಯಿಗಳಿಗೂ ಕಡಿಮೆ ಸಂಪಾದಿಸುತ್ತಾನೆಂದರೆ ಆತನ ಮಕ್ಕಳು ಕೃಷಿಯತ್ತ ಒಲವು ಬೆಳೆಸಿಕೊಳ್ಳಲು ಹೇಗೆ ಸಾಧ್ಯ?" ಎನ್ನುತ್ತಾರೆ ಕೃಷಿ ಮತ್ತು ಆಹಾರ ನೀತಿ ವಿಶ್ಲೇಷಕ ದೇವಿಂದರ್ ಶರ್ಮಾ.

ರೈತರಿಗೆ ಸಿಗಬೇಕಾದ ನ್ಯಾಯಯುತ ಆದಾಯವನ್ನು ನಾವು ಈವರೆಗೂ ನಿರಾಕರಿಸುತ್ತಲೇ ಬಂದಿದ್ದೇವೆ. ಕೃಷಿ ವಲಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದೇವೆ. ಆರ್ಥಿಕ ಸುಧಾರಣೆಗಳಿಗಾಗಿ ಇಂಥ ಕುತಂತ್ರ ಮಾಡಲಾಗುತ್ತಿದೆ. ಕೈಗಾರಿಕೆಗಳಿಗೆ ಹಣ ನೀಡಲು ಕೃಷಿ ವಲಯವನ್ನು ಬಲಿ ಕೊಡಲಾಗುತ್ತಿದೆ." ಎಂಬುದು ದೇವಿಂದರ್ ಶರ್ಮಾ ಅವರ ಅಭಿಪ್ರಾಯವಾಗಿದೆ.

ಹೆಚ್ಚುತ್ತಿರುವ ನಿರುದ್ಯೋಗವೇ ಪ್ರತಿಭಟನೆಗೆ ಕಾರಣವಾಯ್ತೇ?: ಸದ್ಯ ನಡೆಯುತ್ತಿರುವ ಪ್ರತಿಭಟನೆಗಳು ಕೃಷಿ ಕ್ಷೇತ್ರದ ಸಂಕಷ್ಟವನ್ನು ತೋರಿಸುತ್ತಿವೆ. ಕೃಷಿ ವಲಯದ ಬಿಕ್ಕಟ್ಟಿನಿಂದ ಬಹುದೊಡ್ಡ ಜನಸಂಖ್ಯೆಯು ಕೈಯಲ್ಲಿ ಕೆಲಸವಿಲ್ಲದ ಸ್ಥಿತಿಗೆ ತಲುಪಿದೆ. ಕೃಷಿ ಕ್ಷೇತ್ರವನ್ನು ಅಗತ್ಯಕ್ಕಿಂತ ಹೆಚ್ಚು ಜನ ಅವಲಂಬಿಸಿರುವ ಪ್ರದೇಶಗಳಲ್ಲಿ ಪ್ರತಿಭಟನೆಗಳು ಹೆಚ್ಚಾಗಿವೆ.

ಇಂಥ ಸಂದರ್ಭದಲ್ಲಿ ಸೇನಾಪಡೆಯಲ್ಲಿ ಸೇವೆ ಸಲ್ಲಿಸುವುದು ಉಪಜೀವನದ ಮಾರ್ಗವಾಗಿದೆ ಹಾಗೂ ಸೇನೆಗೆ ಸೇರುವುದು ಪ್ರತಿಷ್ಠೆಯ ವಿಷಯವೂ ಆಗಿದೆ. ಸೈನಿಕನೊಬ್ಬನಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು ಸಹ ಈ ಕ್ಷೇತ್ರವನ್ನು ಆಕರ್ಷಕವಾಗಿಸಿವೆ." ಎನ್ನುತ್ತಾರೆ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ವಿಶ್ಲೇಷಕ ಕುಮಾರ ಸಂಜಯ್ ಸಿಂಗ್.

ಕೈಗಾರಿಕಾ ಉತ್ಪನ್ನಗಳ ಬೆಲೆಗಳು ಹೆಚ್ಚಾದಂತೆ ಕೃಷಿ ಉತ್ಪನ್ನಗಳ ಬೆಲೆಗಳು ಹೆಚ್ಚಾಗಲಿಲ್ಲ. ಹಸಿರು ಕ್ರಾಂತಿಯ ಆಧರಿಸಿದ ಕೃಷಿಯಿಂದ ಗೊಬ್ಬರ, ಕೀಟನಾಶಕ ಹಾಗೂ ಹೆಚ್ಚು ಇಳುವರಿ ನೀಡುವ ಬೀಜಗಳ ಬಳಕೆಯಿಂದ ಕೃಷಿಯ ಒಟ್ಟಾರೆ ವೆಚ್ಚ ಜಾಸ್ತಿಯಾಗುತ್ತ ನಡೆದಿದೆ ಎನ್ನುತ್ತಾರೆ ಸಿಂಗ್.

ಬಿಹಾರದಲ್ಲಿ ಕನಿಷ್ಠ ತಲಾದಾಯ: ರಾಷ್ಟ್ರೀಯ ಸಾಂಖ್ಯಿಕ ಸಚಿವಾಲಯದ ಅಂಕಿ-ಸಂಖ್ಯೆಗಳ ಪ್ರಕಾರ, 2021ರಲ್ಲಿ ನಡೆದ 77ನೇ ಸುತ್ತಿನ ಸಮೀಕ್ಷೆಯಂತೆ- ಭಾರತದಲ್ಲಿ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ತಲಾದಾಯ 10,218 ರೂಪಾಯಿಗಳಾಗಿತ್ತು. ಅದೇ ಸಮಯಕ್ಕೆ ಬಿಹಾರದ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ತಲಾದಾಯ ದೇಶದಲ್ಲೇ ಅತ್ಯಂತ ಕನಿಷ್ಠ 3,558 ರೂಪಾಯಿಗಳಾಗಿತ್ತು. ಪಶ್ಚಿಮ ಬಂಗಾಳ 3,980 ರೂಪಾಯಿ, ಉತ್ತರಾಖಂಡ 4,701 ರೂಪಾಯಿ, ಜಾರ್ಖಂಡ್ 4,721, ಉತ್ತರ ಪ್ರದೆಶ 4,923 ಮತ್ತು ಒಡಿಶಾದಲ್ಲಿ 4,976 ರೂಪಾಯಿಗಳಾಗಿತ್ತು.

ಇದನ್ನು ಓದಿ:ಬಿಜೆಪಿಗೆ ಲಾಭ ತರುತ್ತಾ ಏಕನಾಥ್ ಶಿಂದೆ ಬಂಡಾಯ? ಮ್ಯಾಜಿಕ್ ನಂಬರ್​​​ಗೆ ಇನ್ನೆಷ್ಟು ದೂರ..?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.