ETV Bharat / bharat

ಕೇರಳದಲ್ಲಿ ಕೊರೊನಾ 2ನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಳ: ಆರೋಗ್ಯ ಇಲಾಖೆಗೆ ಹೆಚ್ಚಿದ ಒತ್ತಡ - ಕೇರಳ ಕೊರೊನಾ ವರದಿ

ಕೇರಳದಲ್ಲಿ ಕೋವಿಡ್​ನಿಂದ ಗುಣಮುಖರಾಗುವವರ ಪ್ರಮಾಣ ಕಡಿಮೆಯಾಗುತ್ತಿರುವುದು ಕೇರಳ ಎದುರಿಸುತ್ತಿರುವ ಮತ್ತೊಂದು ಸವಾಲು. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ ಇದುವರೆಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೇ ಕಡಿಮೆಯೇ ಇತ್ತು. ಆದರೆ 2ನೇ ಅಲೆಯಲ್ಲಿ ಸೋಂಕಿನ ಹೆಚ್ಚಳದ ಪ್ರಮಾಣಕ್ಕನುಗುಣವಾಗಿ ಸಾವಿನ ಪ್ರಮಾಣ ಹೆಚ್ಚುತ್ತಿದೆ.

kerala
kerala
author img

By

Published : May 5, 2021, 10:08 PM IST

ತಿರುವನಂತಪುರ: ಕೇರಳದಲ್ಲಿ ಕೋವಿಡ್​ ಸೋಂಕು ಹರಡುವಿಕೆಯು ನಿರಂತರವಾಗಿ ಹೆಚ್ಚುತ್ತಿದೆ, ಇದು ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಎಲ್ಲಾ ಬಗೆಯ ಒತ್ತಡವನ್ನುಂಟು ಮಾಡುತ್ತಿದೆ.

ಸದ್ಯ ಭಾರತದಲ್ಲಿ ಕೋವಿಡ್​ ಪ್ರಕರಣಗಳ ಹೆಚ್ಚಳ ಸಂಖ್ಯೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ನಂತರ ಮೂರನೇ ಸ್ಥಾನದಲ್ಲಿ ಕೇರಳ ಇದೆ. ಕೇರಳದಲ್ಲಿ 3,56,872 ಸಕ್ರಿಯ ಕೋವಿಡ್​ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 6,59,013 ಸೋಂಕು ಪ್ರಕರಣಗಳಿದ್ದು, ಕರ್ನಾಟಕದಲ್ಲಿ 4,44,754 ಸಕ್ರಿಯ ಪ್ರಕರಣಗಳಿವೆ.

ಮತ್ತೊಂದು ಆತಂಕಕಾರಿ ಸಂಗತಿಯೆಂದರೆ, ಎರ್ನಾಕುಲಂ ಜಿಲ್ಲೆಯು ದೇಶದಲ್ಲಿ ಅತಿ ಹೆಚ್ಚು, ಸಕ್ರಿಯ ಕೋವಿಡ್​ ಪ್ರಕರಣಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 54,867 ಕ್ಕೇರಿದೆ. ಎರ್ನಾಕುಲಂನಲ್ಲಿ ಮಂಗಳವಾರ ವರದಿಯಾದ ಹೊಸ ಕೋವಿಡ್​ ಪ್ರಕರಣಗಳ ಸಂಖ್ಯೆ 5000 ಕ್ಕಿಂತ ಹೆಚ್ಚಿದೆ. ಕೋವಿಡ್​ ರೋಗಿಗಳ ಸಂಖ್ಯೆಯು ಏರುತ್ತಿರುವುದು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಮುಳುಗಿಸುತ್ತದೆ ಎಂಬುದರ ಸ್ಪಷ್ಟ ಸೂಚಕವಾಗಿದೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚುವ ಅಂದಾಜಿರುವುದರಿಂದ ಕೇರಳ ರಾಜ್ಯಾಡಳಿತ ಅಗತ್ಯ ಪೂರ್ವಸಿದ್ಧತೆಯಲ್ಲಿ ತೊಡಗಿದೆ.

ಇನ್ನು ಕೋವಿಡ್​ನಿಂದ ಗುಣಮುಖರಾಗುವವರ ಪ್ರಮಾಣ ಕಡಿಮೆಯಾಗುತ್ತಿರುವುದು ಕೇರಳ ಎದುರಿಸುತ್ತಿರುವ ಮತ್ತೊಂದು ಸವಾಲು. ಪ್ರಸ್ತುತ, ಕೇರಳವು ಕೊರೊನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ 6 ನೇ ಸ್ಥಾನದಲ್ಲಿದೆ. ರಾಜ್ಯದ ಕೋವಿಡ್​ ವರದಿ ಪ್ರಕಾರ ಕೇರಳದಲ್ಲಿ 17,01,979 ವ್ಯಕ್ತಿಗಳು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದವರು ಇದುವರೆಗೆ 5507 ಜನ. ಇದು ಭಾರತದ ರಾಜ್ಯವೊಂದರಲ್ಲಿ ಕೋವಿಡ್​ನಿಂದ ಮೃತಪಟ್ಟವರ ಅತೀ ಕಡಿಮೆ ಸಂಖ್ಯೆಯಾಗಿದೆ.

ಆದಾಗ್ಯೂ, ಎರಡನೇ ಅಲೆಯು ರಾಜ್ಯವನ್ನು ಕಂಗೆಡಿಸಿದೆ. ಇತ್ತೀಚೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಕಳೆದ 5 ದಿನಗಳಲ್ಲಿ 248 ಜನ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ. ಈ ಐದು ದಿನಗಳಲ್ಲಿ ವರದಿಯಾದ ಹೊಸ ಕೋವಿಡ್​ ಪಾಸಿಟಿವ್​​ ಪ್ರಕರಣಗಳ ಸಂಖ್ಯೆ 1,67,995 ಆಗಿದೆ.ಹೆಚ್ಚುತ್ತಿರುವ ಪ್ರಕರಣಗಳೊಂದಿಗೆ ಸಾವಿನ ಪ್ರಮಾಣವು ಪ್ರಮಾಣಾನುಗುಣವಾಗಿ ಹೆಚ್ಚುತ್ತಿದೆ ಎಂಬುದು ಆತಂಕಕಾರಿ.

ಕಟ್ಟುನಿಟ್ಟಾದ ಕೋವಿಡ್​ ನಿಯಂತ್ರಣ ಮತ್ತು ನಿರ್ಬಂಧಗಳನ್ನು ಹೇರುವ ಮೂಲಕ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಕೇರಳ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಹೀಗೆ ಪ್ರಕರಣಗಳು ಹೆಚ್ಚುತ್ತಾ ಹೋದರೆ ಅವುಗಳನ್ನು ತಡೆಯಲು ರಾಜ್ಯವು ಸಂಪೂರ್ಣ ಲಾಕ್‌ಡೌನ್‌ನಂತಹ ಹೆಚ್ಚು ಕಠಿಣ ನಿಯಮಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.