ETV Bharat / bharat

ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾಗೆ ಜೀವ ಬೆದರಿಕೆ; ಕೈಲಾಶ್ ಬಹದ್ದೂರ್ ಸಿಂಗ್ ವಿರುದ್ಧ ದೂರು - ಕೈಲಾಶ್ ಸಿಂಗ್​​

ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಕೈಲಾಶ್ ಬಹದ್ದೂರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ.

DK Arora
DK Arora
author img

By

Published : Sep 20, 2021, 1:41 PM IST

ಲಖನೌ (ಉತ್ತರ ಪ್ರದೇಶ): ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಕೈಲಾಶ್ ಬಹದ್ದೂರ್ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಈ ಸಂಬಂಧ ರೇರಾ ಮೇಲ್ಮನವಿ ನ್ಯಾಯ ಮಂಡಳಿ ಸದಸ್ಯ ರಾಜೀವ್ ಮಿಶ್ರಾ, ನಗರದ ಪಿಜಿಐ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅರೋರಾ ಅವರಿಗೆ 9415132767 ಸಂಖ್ಯೆಯಿಂದ ವಾಟ್ಸ್​ಆ್ಯಪ್ ಮೆಸೇಜ್ ಬಂದಿತ್ತು. ಅದರಲ್ಲಿ ‘ಡಿ.ಕೆ. ಅರೋರಾ, ನಾನು ಸುಂದರ್​ಲಾಲ್​​ ಅಮ್ಮನಾಗಿ, ನರಳಲು ಸಾಧ್ಯವಿಲ್ಲ. ನಾನು ಪ್ರತಾಪ್​ಗಡದ ಕೈಲಾಶ್ ಸಿಂಗ್​​. ನಾನು ನ್ಯಾಯಾಲಯಕ್ಕೆ ಬಂದು ನಿನ್ನನ್ನು ಶೂಟ್ ಮಾಡುತ್ತೇನೆ’ ಎಂದು ಉಲ್ಲೇಖಿಸಿದ್ದರು. ಜೀವ ಬೆದರಿಕೆ ಬಂದ ಬಳಿಕ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಅರೋರಾ ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ.

ರಾಜೀವ್​ ಮಿಶ್ರಾ, ಪ್ರಕರಣ ದಾಖಲಿಸುವಾಗ ಅರೋರಾರಿಗೆ ನ್ಯಾಯಾಲಯದಲ್ಲಿ ಭದ್ರತೆ ಹೆಚ್ಚಿಸಬೇಕು ಎಂದು ಉಲ್ಲೇಖಿಸಿದ್ರು. ಅಲಹಾಬಾದ್ ಹೈಕೋರ್ಟ್‌ನ ಲಖನೌನ ಬೆಂಚ್‌ನ ಹಿರಿಯ ನ್ಯಾಯಾಧೀಶರಿಗೂ ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ. ಐಪಿಸಿ ಸೆಕ್ಷನ್ 506, 507 ರ ಅಡಿಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಪಿಜಿಐ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನನಗೆ ಯಾವುದೇ ಸುಂದರ್​ಲಾಲ್​​ ಗೊತ್ತಿಲ್ಲ. ಯಾಕೆ ಬೆದರಿಕೆ ಹಾಕಲಾಗಿದೆ ಎಂದು ತಿಳಿದಿಲ್ಲ ಅಂತಾ ಅರೋರಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಹಾಕದೆ ಮೀಟರ್​ನಲ್ಲಿ ಲೆಕ್ಕ ತೋರಿಸಿದ ಬಂಕ್ ಸಿಬ್ಬಂದಿ.. ಮೋಸದಾಟ ಬಯಲು

ಪಿಜಿಐ ಪೊಲೀಸ್ ಅಧಿಕಾರಿ ಆನಂದ ಪ್ರಕಾಶ್ ಶುಕ್ಲಾ ಈ ವಿಷಯವನ್ನು ಗಂಭೀರವಾಗಿ ತನಿಖೆ ಮಾಡಲಾಗುತ್ತಿದ್ದು, ಶೀಘ್ರವೇ ಅಪರಾಧಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.