ರೇವಾ (ಮಧ್ಯಪ್ರದೇಶ): ಜಿಲ್ಲೆಯ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಆಸ್ಪತ್ರೆ ಎದುರು ಧರಣಿ ನಡೆಸಿದ್ದಾರೆ.
ಸಿಧಿ ಜಿಲ್ಲೆಯ ಸ್ತುತಿ ಮಿಶ್ರಾ ಅವರ ಪತ್ನಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಐಸಿಯುಗೆ ದಾಖಲಾಗಿದ್ದರು. ಆದರೆ, ಐಸಿಯು ಹಾಗೂ ಇತರ ವಾರ್ಡ್‌ಗಳಿಗೆ ನಾಲ್ಕು ಗಂಟೆಯಾದರೂ ವಿದ್ಯುತ್ ಪೂರೈಕೆಯಾಗಿರಲಿಲ್ಲ. ಹೀಗಾಗಿ ಆಮ್ಲಜನಕದ ಕೊರತೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂದು ಮಹಿಳೆಯ ಕಟುಂಬಸ್ಥರು ದೂರಿದ್ದಾರೆ.
ಆಸ್ಪತ್ರೆಯ ಸಿಎಂಒ ಡಾ ಯತ್ನೇಶ್ ತ್ರಿಪಾಠಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ಕೇವಲ ಎರಡು ನಿಮಿಷ ವಿದ್ಯುತ್ ಕಡಿತಗೊಂಡಿತ್ತು. ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋರ್ಬಿ ದುರಂತ: ಗುಜರಾತ್ನ ಎಲ್ಲ ಸೇತುವೆಗಳ ಸಮೀಕ್ಷೆಗೆ ಹೈಕೋರ್ಟ್ ಆದೇಶ