ETV Bharat / bharat

ಅನುಮಾನಾಸ್ಪದವಾಗಿ ಇಬ್ಬರು ಮಕ್ಕಳು ಸೇರಿ ಉದ್ಯಮಿ ದಂಪತಿಯ ಮೃತ ದೇಹಗಳು ಪತ್ತೆ - ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆ

ಮನೆಗೆ ಹೊರಗೆ ಚಿಲಕ ಹಾಕಿದ್ದು, ಒಳಗೆ ದೀಪಗಳು ಉರಿಯುತ್ತಿರುವುದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಮನೆಯೊಳಗೆ ತಪಾಸಣೆ ನಡೆಸಿದಾಗ ನಾಲ್ವರು ಮೃತದೇಹಗಳು ಪತ್ತೆಯಾಗಿವೆ.

Mystery shrouds the death of four members of a family
ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಶವಗಳು ಪತ್ತೆ
author img

By

Published : May 14, 2022, 5:19 PM IST

ರಾಯ್​ಪುರ (ಛತ್ತೀಸ್‌ಗಢ): ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಟಿಲ್ಡಾ ಪ್ರದೇಶದಲ್ಲಿ ನಡೆದಿದೆ. ಮನೆಗೆ ಹೊರಗೆ ಚಿಲಕ ಹಾಕಿದ್ದು, ಒಳಗೆ ದೀಪಗಳು ಉರಿಯುತ್ತಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಉದ್ಯಮಿ ಪಂಕಜ್ ಜೈನ್, ಅವರ ಪತ್ನಿ ರುಚಿ ಮತ್ತು ಇಬ್ಬರು ಪುತ್ರರಾದ ಬಿಟ್ಟು ಮತ್ತು ಭಯು ಎಂದು ಗುರುತಿಸಲಾಗಿದೆ. ಪಂಕಜ್ ಜೈನ್ ಶವ ನೆಲದ ಮೇಲೆ ಬಿದ್ದಿದ್ದು, ಆತನ ಶವದ ಪಕ್ಕದಲ್ಲಿ ರಾಡ್​ವೊಂದು ಕೂಡ ಪತ್ತೆಯಾಗಿದೆ. ಇತ್ತ, ಆತನ ಪತ್ನಿಯ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದು, ಕೊಠಡಿಯೊಂದರಲ್ಲಿ ಇಬ್ಬರು ಮಕ್ಕಳ ಮೃತ ದೇಹಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ ಇದೊಂದು ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸುತ್ತಿದ್ದು, ಮತ್ತು ಸ್ಥಳೀಯರಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ಧಾರೆ.

ಇದನ್ನೂ ಓದಿ: ಫಾರ್ಮುಲಾಗಾಗಿ ಮೈಸೂರು ನಾಟಿ ವೈದ್ಯನ ಕೊಲೆ: ಸಿನಿಮಾ ಸ್ಟೈಲಲ್ಲಿ ನಡೆದ ಪ್ರಕರಣ ಭೇದಿಸಿದ ಕೇರಳ ಪೊಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.