ETV Bharat / bharat

ಜಮ್ಮು- ಕಾಶ್ಮೀರ: ಡಿಡಿಸಿ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

author img

By

Published : Nov 28, 2020, 9:30 AM IST

Updated : Nov 28, 2020, 12:13 PM IST

ಡಿಡಿಸಿ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. ಕೋವಿಡ್-19 ಮಾರ್ಗಸೂಚಿ, ನಿಯಮ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಬರುವವರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ

DDC polls commence in Kashmir
ಜಮ್ಮು-ಕಾಶ್ಮೀರ: ಡಿಡಿಸಿ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಜಮ್ಮು ಕಾಶ್ಮೀರ: ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದೆ. ಮತದಾನದ ಹಿನ್ನೆಲೆ ಬಿಗಿಭದ್ರತೆ ಕೈಗೊಳ್ಳುವುದರ ಜೊತೆಗೆ ಇಂಟರ್​​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಡಿಡಿಸಿ ಚುನಾವಣೆಯ ಮೊದಲ ಹಂತದ ಮತದಾನ ಆರಂಭ

ಭಾರತೀಯ ಸಂವಿಧಾನದ 370ನೇ ವಿಧಿ ರದ್ಧತಿ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಡಿಡಿಸಿ ಚುನಾವಣೆ ಪ್ರಕ್ರಿಯೆ 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಇಂದಿನಿಂದ ಡಿಸೆಂಬರ್​ 19ರವರೆಗೆ ನಡೆಯಲಿದೆ. ಮುಂಜಾನೆ 7ಕ್ಕೆ ಪ್ರಾರಂಭವಾದ ಮತದಾನ ಮಧ್ಯಾಹ್ನ 2 ಗಂಟೆಗೆ ಮುಕ್ತಾಯಗೊಳ್ಳಲಿದೆ. ಡಿಸೆಂಬರ್ 22ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮತದಾನಕ್ಕೆ ಸರ್ವ ಸಿದ್ಧತೆ

ಇದನ್ನು ಓದಿ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂಟರ್​ನೆಟ್ ಸೇವೆ ಸ್ಥಗಿತ..!

ಕೇಂದ್ರಾಡಳಿತ ಪ್ರದೇಶದ 280 ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಕೋವಿಡ್-19 ಮಾರ್ಗಸೂಚಿ, ನಿಯಮ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಮತ ಚಲಾಯಿಸಲು ಬರುವವರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ

  • Jammu and Kashmir: Voting underway for the first phase of District Development Council (DDC) elections in the Union Territory

    Visuals from Shamasabad in Khansahib Tehsil of Budgam district pic.twitter.com/sh8MfYTzBK

    — ANI (@ANI) November 28, 2020 " class="align-text-top noRightClick twitterSection" data=" ">

ಇಂಟರ್​ನೆಟ್ ಕಟ್​:

ಡಿಡಿಸಿ ಚುನಾವಣೆ ಹಿನ್ನೆಲೆ ಶೋಪಿಯಾನ್ ಜಿಲ್ಲೆಯನ್ನು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿದ್ದು, ಇಂಟರ್​ನೆಟ್​​ ಸೇವೆ ಕಡಿತಗೊಳಿಸಲಾಗಿದೆ. ಇಂಟರ್​ನೆಟ್ ಸೇವೆಯನ್ನು ಸ್ಥಗಿತಗೊಳಿಸಲು ಅಧಿಕಾರಿಗಳು ಯಾವುದೇ ಕಾರಣ ನೀಡಿಲ್ಲ. ಆದ್ರೆ ಯಾವುದೇ ದುಷ್ಕೃತ್ಯ ನಡೆಯಬಾರದೆಂಬ ಕಾರಣದಿಂದ ಈ ಕ್ರಮ ಕೈಗೊಂಡಿರಬಹುದೆಂದು ಅಂದಾಜಿಸಲಾಗಿದೆ. ಶೋಪಿಯಾನ್ ಮತ್ತು ಪುಲ್ವಾಮಾವನ್ನು ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಿ, ಭದ್ರತೆ ಒದಗಿಸಲಾಗಿದೆ.

Last Updated : Nov 28, 2020, 12:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.