ETV Bharat / bharat

ದೇಶಕ್ಕೆ ನರೇಂದ್ರ ಮೋದಿ ಹೆಸರಿಡುವ ದಿನ ದೂರವಿಲ್ಲ; ಮಮತಾ ಬ್ಯಾನರ್ಜಿ - ಪಶ್ಚಿಮ ಬಂಗಾಳ ಚುನಾವಣೆ 2021

ದೇಶದಲ್ಲಿ ನೀಡಲಾಗುತ್ತಿರುವ ಕೋವಿಡ್​ ಲಸಿಕೆ ಪ್ರಮಾಣ ಪತ್ರದ ಮೇಲೆ ಮೋದಿ ಚಿತ್ರವಿದ್ದು, ಕಾಲೇಜ್​ ಹಾಗೂ ಕ್ರೀಡಾಂಗಣಕ್ಕೂ ಅವರ ಹೆಸರಿಡಲಾಗಿದೆ. ಇದನ್ನೆಲ್ಲ ನೋಡಿದ್ರೆ ದೇಶಕ್ಕೆ ಮೋದಿ ಹೆಸರಿಡುವ ದಿನ ದೂರವಿಲ್ಲ ಎಂದು ಮಮತಾ ಕಿಡಿ ಕಾರಿದ್ದಾರೆ.

CM Mamata Banerjee
CM Mamata Banerjee
author img

By

Published : Mar 8, 2021, 7:18 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಕಾವು ರಂಗೇರುತ್ತಿದ್ದು, ಇದೀಗ ಬಿಜೆಪಿ-ಟಿಎಂಸಿ ನಡುವಿನ ಆರೋಪ-ಪ್ರತ್ಯಾರೋಪಗಳು ಬಲು ಜೋರಾಗಿ ನಡೆಯುತ್ತಿವೆ. ನಿನ್ನೆಯಷ್ಟೇ ಮಮತಾ ಬ್ಯಾನರ್ಜಿ ಮೇಲೆ ನಮೋ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ದೀದಿ ತಿರುಗೇಟು ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ, ಈಗಾಗಲೇ ದೇಶದಲ್ಲಿ ಕೋವಿಡ್​ ವ್ಯಾಕ್ಸಿನ್​ ಪ್ರಮಾಣ ಪತ್ರದಲ್ಲಿ ಮೋದಿ ಚಿತ್ರವಿದೆ. ಅವರ ಹೆಸರಿನಲ್ಲಿ ಕಾಲೇಜು​ಗಳಿವೆ, ಕ್ರೀಡಾಂಗಣಕ್ಕೆ ನಮೋ ಹೆಸರು ಇಡಲಾಗಿದೆ. ದೇಶದಲ್ಲಿ ಲಭ್ಯವಾಗುತ್ತಿರುವುದು ಕೋವಿಡ್ ಲಸಿಕೆ ಅಲ್ಲ, ಮೋದಿ ಲಸಿಕೆ ಎಂದು ವಾಗ್ದಾಳಿ ನಡೆಸಿರುವ ದೀದಿ, ದೇಶದ ಹೆಸರು ನರೇಂದ್ರ ಮೋದಿ ಎಂದು ಬದಲಾಯಿಸುವ ದಿನಗಳು ದೂರ ಇಲ್ಲ ಎಂದು ಕಿಡಿಕಾರಿದ್ದಾರೆ.

  • He got his picture on the vaccine (certificates), it's not a COVID vaccine, it's a Modi vaccine. He has colleges in his name, stadiums in his name, vaccine in his name. It's just a matter of time, he will soon rename India after his name: West Bengal CM Mamata Banerjee in Kolkata pic.twitter.com/xqSFLNOXUv

    — ANI (@ANI) March 8, 2021 " class="align-text-top noRightClick twitterSection" data=" ">

ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲೇ ದೀದಿಗೆ ಬಿಗ್​ ಶಾಕ್: ಮತ್ತೆ ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ! ​

ಅಮಿತ್ ಶಾ ಹಾಗೂ ನರೇಂದ್ರ ಮೋದಿ ಇಬ್ಬರು ಸಿಂಡಿಕೇಟ್​ ಮಂತ್ರಿಗಳು ಬಂಗಾಳಕ್ಕೆ ಬಂದು ಸುಳ್ಳು ಹೇಳುತ್ತಿದ್ದಾರೆ. ನಾನು ಪ್ರಧಾನ ಮಂತ್ರಿಯ ಕುರ್ಚಿ ಗೌರವಿಸುತ್ತೇನೆ. ಆದರೆ ಪ್ರಧಾನ ಮಂತ್ರಿ ಹೇಳುವ ಸುಳ್ಳು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಎಂದಿದ್ದಾರೆ. ಈ ಇಬ್ಬರು ರಾಜ್ಯದಲ್ಲಿ ನಮ್ಮ ಸರ್ಕಾರದ ಕುರಿತು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ನೀಡುವ ಪ್ರಮಾಣ ಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರವಿದ್ದು, ಅದಕ್ಕಾಗಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣೆ ಆಯೋಗ ಈಗಾಗಲೇ ಭಾವಚಿತ್ರ ತೆಗೆದು ಹಾಕುವಂತೆ ಸೂಚನೆ ಸಹ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.