ಪುಣೆ(ಮಹಾರಾಷ್ಟ್ರ): ಕೌಟುಂಬಿಕ ಕಲಹ ಹಿನ್ನೆಲೆ ಸೊಸೆಯೇ ತನ್ನ ಅತ್ತೆಯ ಕತ್ತು ಹಿಸುಕಿ ಕೊಂದಿರುವ ಘಟನೆ ಪುಣೆ ಜಿಲ್ಲೆಯ ತಲೆಗಾಂವ್ ಪ್ರದೇಶದಲ್ಲಿ ನಡೆದಿದೆ.
ಬೇಬಿ ಗೌತಮ್ ಶಿಂಧೆ (50) ಕೊಲೆಯಾದ ಮಹಿಳೆ, ಆರೋಪಿ ಪೂಜಾ ಮಿಲಿಂದ್ ಶಿಂಧೆ ಮತ್ತು ಈಕೆಯ ಮಗ ಮಿಲಿಂದ್ ಶಿಂಧೆ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆಯ ಶವವನ್ನು ಪೊದೆಯಲ್ಲಿ ಎಸೆಯುವಾಗ ಸಿಸಿಟಿವಿಯಲ್ಲಿ ಇವರ ದುಸ್ಕೃತ್ಯ ಸೆರೆಯಾಗಿದೆ.
ಪೊಲೀಸರ ಪ್ರಕಾರ, ತಲೆಗಾಂವ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಅತ್ತೆ- ಸೊಸೆ ನಡುವೆ ಆಗಾಗ್ಗೆ ಸಣ್ಣಪುಟ್ಟ ವಾಗ್ವಾದ ನಡೆಯುತ್ತಿದ್ದವಂತೆ. ಇದರ ಸೇಡು ಇಟ್ಟುಕೊಂಡಿದ್ದ ಸೊಸೆಯು ಅತ್ತೆಯನ್ನು ಕುಪ್ಪಸದಿಂದ ಕತ್ತು ಬಿಗಿದು ಕೊಂದಿದ್ದಾಳೆ.
ದೇಹವನ್ನು ಚೀಲದಲ್ಲಿ ತುಂಬಿ, ನಂತರ ಶವವನ್ನು ಟೆರೇಸ್‌ನಲ್ಲಿ ಇರಿಸಿದ್ದಾರೆ. ಇದಾದ ಬಳಿಕ ಸಾಕ್ಷ್ಯ ನಾಶಕ್ಕೆ ತಾಯಿ-ಮಗ ಶವವನ್ನು ಪೊದೆಯಲ್ಲಿ ಮುಚ್ಚಿಟ್ಟಿದ್ದಾರೆ.
ಶವ ಎಸೆಯುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ಘಟನೆ ಬೆಳಕಿಗೆ ಬಂದಿದೆ. ಮೃತದೇಹ ಎಸೆದ ನಂತರ ಆರೋಪಿಯ ಮಗ ಮಿಲಿಂದ್ ಶಿಂಧೆ ಟೆರೇಸ್‌ನಲ್ಲಿ ಹಾಗೂ ಮನೆಯಲ್ಲಿ ಅಂಟಿಕೊಂಡಿದ್ದ ರಕ್ತವನ್ನು ತೊಳೆದು ಸ್ವಚ್ಛಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.