ETV Bharat / bharat

ಹೆಣ್ಣು ಮಗು ಹುಟ್ಟಿರುವ ಸಂಭ್ರಮ.. ಗ್ರಾಹಕರಿಗೆ ಹೆಚ್ಚುವರಿ 'ಉಚಿತ ಪೆಟ್ರೋಲ್'​​ ನೀಡಿದ ಬಂಕ್ ಮಾಲೀಕ..

ಮನೆಯಲ್ಲಿ ಹೆಣ್ಣು ಮಗು ಜನನವಾಗುತ್ತಿದ್ದಂತೆ ಪೆಟ್ರೋಲ್​ ಪಂಪ್​ಗೆ ಬರುತ್ತಿರುವ ಗ್ರಾಹಕರಿಗೆ ಹೆಚ್ಚುವರಿಯಾಗಿ ಪೆಟ್ರೋಲ್​ ನೀಡುವ ನಿರ್ಧಾರ ಕೈಗೊಂಡಿದ್ದಾರೆ.. ಮಗಳು ಹುಟ್ಟಿದ್ದಕ್ಕಾಗಿ 100 ರೂಪಾಯಿಗೆ 105 ರೂ. ಪೆಟ್ರೋಲ್​ ನೀಡಲಾಗ್ತಿದೆ..

girl birth and discount on petrol
girl birth and discount on petrol
author img

By

Published : Oct 16, 2021, 5:29 PM IST

ಬೆತುಲ್(ಮಧ್ಯಪ್ರದೇಶ): ದೇಶದಲ್ಲಿ ಪ್ರತಿದಿನ ಪೆಟ್ರೋಲ್​​-ಡೀಸೆಲ್​​ ಬೆಲೆ ಗಗನಮುಖಿಯಾಗ್ತಿದೆ. ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಪೆಟ್ರೋಲ್​ ಪಂಪ್​ ಮಾಲೀಕನೋರ್ವ ಗ್ರಾಹಕರಿಗೆ ಹೆಚ್ಚುವರಿಯಾಗಿ ಉಚಿತ ಪೆಟ್ರೋಲ್​​ ನೀಡಿದ್ದಾರೆ.

ಹೆಣ್ಣು ಮಗುವಿನ ಆಗಮನ, ಗ್ರಾಹಕರಿಗೆ ಹೆಚ್ಚುವರಿ ಪೆಟ್ರೋಲ್​ ನೀಡಿದ ಬಂಕ್ ಮಾಲೀಕರು..

ಮಧ್ಯಪ್ರದೇಶದ ಬೆತುಲ್​​ದಲ್ಲಿ ಪೆಟ್ರೋಲ್​ ಪಂಪ್​ ಇಟ್ಟುಕೊಂಡಿರುವ ಮಾಲೀಕನೋರ್ವ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಮಾತ್ರ ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿರುವ ಖುಷಿ.

ರಾಜೇಂದ್ರ ಸೈನಿ ಸೊಸೆ ಶಿಖಾ ಅಕ್ಟೋಬರ್​​​ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳ ಜನನವಾಗುತ್ತಿದ್ದಂತೆ ಸೈನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಬ್ಬದಲ್ಲಿ ಹೆಣ್ಣು ಮಗು ಹುಟ್ಟಿರುವ ಕಾರಣ ಲಕ್ಷ್ಮಿಯ ಜನನವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ: ಪಾಕ್​ ಜೆರ್ಸಿಯಲ್ಲಿ ಭಾರತದ ಹೆಸರು ಉಲ್ಲೇಖ.. ಸುಖ್ಯಾಂತ ಕಂಡ ವಿವಾದ

ಗ್ರಾಹಕರಿಗೆ ಹೆಚ್ಚುವರಿ ಪೆಟ್ರೋಲ್​!

ಮನೆಯಲ್ಲಿ ಹೆಣ್ಣು ಮಗು ಜನನವಾಗುತ್ತಿದ್ದಂತೆ ಪೆಟ್ರೋಲ್​ ಪಂಪ್​ಗೆ ಬರುತ್ತಿರುವ ಗ್ರಾಹಕರಿಗೆ ಹೆಚ್ಚುವರಿಯಾಗಿ ಪೆಟ್ರೋಲ್​ ನೀಡುವ ನಿರ್ಧಾರ ಕೈಗೊಂಡಿದ್ದಾರೆ.. ಮಗಳು ಹುಟ್ಟಿದ್ದಕ್ಕಾಗಿ 100 ರೂಪಾಯಿಗೆ 105 ರೂ. ಪೆಟ್ರೋಲ್​ ನೀಡಲಾಗ್ತಿದೆ.

ಈ ಆಫರ್​​​​ ಅಕ್ಟೋಬರ್​​ 13 ರಿಂದ 15ರವರೆಗೆ ಬೆಳಗ್ಗೆ 9 ರಿಂದ 11 ಹಾಗೂ ಸಂಜೆ 5 ರಿಂದ 7ರವರೆಗೆ ನೀಡಲಾಗಿತ್ತು. ಇದರ ಹೊರತಾಗಿ ಕೂಡ 100 ರೂ.ಗಿಂತಲೂ ಹೆಚ್ಚಿನ ಪೆಟ್ರೋಲ್​ ಹಾಕಿಸಿಕೊಳ್ಳುವವರಿಗೆ ಶೇ.10ರಷ್ಟು ಹೆಚ್ಚಿನ ಪೆಟ್ರೋಲ್​ ಹಾಕಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ರಾಜೇಂದ್ರ ಸೈನಿ, ಮನೆಯಲ್ಲಿ ಹೆಣ್ಣು ಮಗು ಹುಟ್ಟಿದೆ. ಕೋವಿಡ್ ಕಾರಣದಿಂದಾಗಿ ಬೇರೆ ರೀತಿಯಾಗಿ ಸಂಭ್ರಮಾಚರಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.