ETV Bharat / bharat

ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಸೋಂಕಿಗೆ ಬಲಿ : ಹಣವಿಲ್ಲದೇ ತಾನೇ ಗುಂಡಿ ತೋಡಿ ಶವಸಂಸ್ಕಾರ ಮಾಡಿದ ಮಗಳು

author img

By

Published : May 8, 2021, 8:22 PM IST

ಈ ಘಟನೆ ಎಲ್ಲರಿಗೂ ಮರುಕ ಹುಟ್ಟಿಸುವಂತಾಗಿದೆ. ಬಿಶಾನ್ಪುರದಲ್ಲಿ ಯಾರು ಸಹಾಯಕ್ಕೆ ಬಾರದಿದ್ದಕ್ಕೆ ಮಾನವೀಯತೆ ಎಲ್ಲಿ ಹೋಯಿತು ಎಂದು ಎಲ್ಲರು ಪ್ರಶ್ನಿಸುವಂತಾಗಿದೆ..

daughter-cremated-covid-infected-mother-in-araria
ಹಣವಿಲ್ಲದೇ ತಾನೇ ಗುಂಡಿ ತೋಡಿ ಶವಸಂಸ್ಕಾರ ಮಾಡಿದ ಮಗಳು

ಬಿಹಾರ : ಕೊರೊನಾದಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದ ಮೂವರು ಮಕ್ಕಳು ತಾವೇ ಪಿಪಿಇ ಕಿಟ್​ ಧರಿಸಿ ಗುಂಡಿ ತೋಡಿ ಅಂತ್ಯಕ್ರಿಯೆ ನಡೆಸಿರುವ ಮನಕಲಕುವ ಘಟನೆ ಬಿಹಾರದಲ್ಲಿ ನಡೆದಿದೆ.

ಅರೇರಿಯಾ ಜಿಲ್ಲೆಯ ರಾಣಿಗಂಜ್​ನಲ್ಲಿ ಈ ಘಟನೆ ನಡೆದಿದೆ. 4 ದಿನಗಗಳ ಅಂತರದಲ್ಲಿ ತಂದೆ-ತಾಯಿಯನ್ನು ಮಕ್ಕಳು ಕಳೆದುಕೊಂಡಿದ್ದಾರೆ. ಬೀರೇಂದ್ರ ಮೆಹ್ತಾ(40) 4 ದಿನಗಳ ಹಿಂದೆ ಕೊರೊನಾದಿಂದ ಮೃತಪಟ್ಟಿದ್ದ.

ಈತನ ಪತ್ನಿ ಪ್ರಿಯಾಂಕಾ ದೇವಿ(32)ಗೂ ಸೋಂಕು ತಗುಲಿದ್ದರಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಪ್ರಿಯಾಂಕಾ ದೇವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕೊರೊನಾದಿಂದ ಮೃತಪಟ್ಟ ಕಾರಣ ಯಾರೂ ಸಹ ಅಂತ್ಯಕ್ರಿಯೆ ಮಾಡಲು ಮುಂದಾಗಿಲ್ಲ. ಮಕ್ಕಳ ಬಳಿ ಹಣವಿಲ್ಲದ ಕಾರಣ ಹಿರಿಯ ಮಗಳು ಸೋನಿ ಕುಮಾರಿ ಗುಂಡಿ ತೋಡಿ ಪಿಪಿಇ ಕಿಟ್​ ಧರಿಸಿ ತಾಯಿಯ ದೇಹವನ್ನು ಸಮಾಧಿ ಮಾಡಿ ಅಂತಿಮ ವಿಧಿಗಳನ್ನು ನೆರವೇರಿಸಿದ್ದಾಳೆ.

ಈ ಘಟನೆ ಎಲ್ಲರಿಗೂ ಮರುಕ ಹುಟ್ಟಿಸುವಂತಾಗಿದೆ. ಬಿಶಾನ್ಪುರದಲ್ಲಿ ಯಾರು ಸಹಾಯಕ್ಕೆ ಬಾರದಿದ್ದಕ್ಕೆ ಮಾನವೀಯತೆ ಎಲ್ಲಿ ಹೋಯಿತು ಎಂದು ಎಲ್ಲರು ಪ್ರಶ್ನಿಸುವಂತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.