ETV Bharat / bharat

'ಕರಾಳ ಭವಿಷ್ಯ'.. ದೇಶದಲ್ಲಿ 9.5 ಲಕ್ಷ ಆತ್ಮಹತ್ಯೆಗಳಿಗೆ ಮೋದಿ ಸರ್ಕಾರವೇ ಕಾರಣ: ಕಾಂಗ್ರೆಸ್ ಆರೋಪ

ರೈತರು ಬಲವಂತವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರದ "ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿ ಮತ್ತು ರೈತ ವಿರೋಧಿ" ನೀತಿಗಳಿಂದಾಗಿ 78,303 ರೈತರು ಸೇರಿದಂತೆ 9.5 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಆರೋಪಿಸಿದ್ದಾರೆ.

Cong blames Modi govt
ಕಾಂಗ್ರೆಸ್
author img

By

Published : Nov 8, 2021, 10:38 AM IST

ನವದೆಹಲಿ: ಕಳೆದ 7 ವರ್ಷಗಳಲ್ಲಿ ದೇಶಾದ್ಯಂತ 9.5 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 'ಅಚ್ಛೇ ದಿನ್' ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಅದನ್ನು ಸಾಧಿಸಲು ಏನನ್ನೂ ಮಾಡಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಹತಾಶೆಯ ಕಥೆ:

ಈ ಬಗ್ಗೆ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ಪ್ರತಿಕ್ರಿಯಿಸಿ "ಆತ್ಮಹತ್ಯೆಗೆ ಸಂಬಂಧಿಸಿದ ಅಂಕಿ-ಅಂಶಗಳ ವರದಿಯು ಭಾರತವನ್ನು ಹಾಳುಮಾಡುತ್ತಿರುವ ಅಭೂತಪೂರ್ವ ದುರಂತವನ್ನು ಒತ್ತಿಹೇಳುತ್ತದೆ. ಸರ್ಕಾರದ ತೀವ್ರ ನಿರಾಸಕ್ತಿ ಮತ್ತು ಅಸೂಕ್ಷ್ಮತೆಗೆ ಒಳಗಾಗಿರುವ ದುರದೃಷ್ಟಕರ ನಾಗರಿಕರು ಕೊನೆಯ ಭರವಸೆಯನ್ನು ಕಳೆದುಕೊಂಡು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದು 'ಅನ್ನದಾತ' (ರೈತರು), ದುಡಿಯುವ ಕಾರ್ಮಿಕರು, ದಿನಗೂಲಿಗಳು, ಗೃಹಿಣಿಯರು, ನಿರುದ್ಯೋಗಿ ವಿದ್ಯಾವಂತ ಯುವಕರ ಅಂತ್ಯವಿಲ್ಲದ ಹತಾಶೆಯ ಕಥೆಯಾಗಿದೆ ಎಂದಿದ್ದಾರೆ.

ರಂದೀಪ್ ಸುರ್ಜೇವಾಲಾ
ರಂದೀಪ್ ಸುರ್ಜೇವಾಲಾ

7 ವರ್ಷಗಳಲ್ಲಿ 9,58,275 ಮಂದಿ ಆತ್ಮಹತ್ಯೆ:

ಆಕಾಂಕ್ಷಿಗಳಿಗೆ ಅವಕಾಶಗಳು ಆತ್ಮಹತ್ಯೆಯ ಖಿನ್ನತೆಯ ಮೋರಿಗಳಾಗಿ ಮಾರ್ಪಟ್ಟಿವೆ. 'ಆತ್ಮಹತ್ಯೆಯ ಹತಾಶತೆ', ಮೋದಿ ಸರ್ಕಾರದ 'ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿ ಮತ್ತು ರೈತ ವಿರೋಧಿ' ನೀತಿಗಳಿಂದಾಗಿ, ಕಳೆದ 7 ವರ್ಷಗಳಲ್ಲಿ 2014-2020ರ ನಡುವೆ ಮೋದಿ ಸರ್ಕಾರದ ವಿಫಲ ಮತ್ತು ಸಂವೇದನಾಶೀಲ ನೀತಿಗಳಿಂದ 9,58,275 ನಾಗರಿಕರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವನವನ್ನು ಅಂತ್ಯಗೊಳಿಸಿದರು ಎಂದು ಸುರ್ಜೇವಾಲಾ ಆರೋಪಿಸಿದರು.

ಭಾರತದಲ್ಲಿ 'ಆತ್ಮಹತ್ಯೆ ಮತ್ತು ಅಪಘಾತದ ಸಾವುಗಳು' ಕುರಿತು ಇತ್ತೀಚಿನ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (NCRB) ವರದಿಯನ್ನು ಉಲ್ಲೇಖಿಸಿದ ಕಾಂಗ್ರೆಸ್​​, ತನ್ನ ಜನವಿರೋಧಿ ನೀತಿಗಳನ್ನು ಮರೆಮಾಚುವ ಪ್ರಯತ್ನದಲ್ಲಿ, ಬಿಜೆಪಿ ಸರ್ಕಾರ ಜನರಲ್ಲಿ ಒಡಕು, ನಕಾರಾತ್ಮಕತೆ, ಹತಾಶೆಯನ್ನು ಶಾಶ್ವತಗೊಳಿಸಲು ಪ್ರಯತ್ನಿಸುತ್ತಿದೆ ಎಂದಿದೆ.

ಆತ್ಮಹತ್ಯೆ ಪ್ರಕರಣಗಳ ಅಂಕಿ-ಅಂಶ:

ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ಶೇ.55ರಷ್ಟು ವಿದ್ಯಾರ್ಥಿಗಳು, ಶೇ.58ರಷ್ಟು ನಿರುದ್ಯೋಗಿಗಳಲ್ಲಿ, ಶೇ.139.37ರಷ್ಟು ರೈತರು, ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರು ಸೇರಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ವರದಿಯ ಪ್ರಕಾರ ಆತ್ಮಹತ್ಯೆ ಪ್ರಕರಣಗಳು ಶೇ. 16.24 ರಷ್ಟು ಹೆಚ್ಚಾಗಿದೆ.

ರೈತರು ಬಲವಂತವಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕಳೆದ 7 ವರ್ಷಗಳಲ್ಲಿ ಮೋದಿ ಸರ್ಕಾರದ "ಕ್ರೋನಿ ಕ್ಯಾಪಿಟಲಿಸ್ಟ್ ಸ್ನೇಹಿ ಮತ್ತು ರೈತ ವಿರೋಧಿ" ನೀತಿಗಳಿಂದಾಗಿ78,303 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರಲ್ಲಿ 35,122 ರೈತ ಕಾರ್ಮಿಕರಿದ್ದಾರೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

2019 ರಿಂದ 2020 ರವರೆಗೆ ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಶೇ.19 ರಷ್ಟು ಹೆಚ್ಚಳವಾಗಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಇಲ್ಲದಿರುವುದನ್ನು ಉಲ್ಲೇಖಿಸಿ ಸರ್ಕಾರ ಅಕ್ಷರಶಃ ರೈತರನ್ನು ಆತ್ಮಹತ್ಯೆಗೆ ತಳ್ಳಿದೆ. ಮತ್ತು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ಖಾಸಗಿ ವಿಮಾ ಕಂಪನಿಗಳಿಗೆ ಲಾಭದಾಯಕವಾಗಿದೆ. ಮುಖ್ಯವಾಗಿ ಮೂರು ಕೃಷಿ ಕಾನೂನುಗಳು ರೈತರಿಗೆ ಮಾರಕವಾಗಿವೆ.

ಭಾರತದ ಭವಿಷ್ಯ ಕತ್ತಲೆಯಾಗಿದೆ:

ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳ ಬಲವಂತದ ಆತ್ಮಹತ್ಯೆಗಳಿಂದಾಗಿ ಭಾರತದ ಭವಿಷ್ಯವು ಕತ್ತಲೆಯಾಗಿದೆ. ಮೋದಿ ಸರ್ಕಾರದ 2014 ರಿಂದ 2020 ರ ಅವಧಿಯಲ್ಲಿ 69,407 ವಿದ್ಯಾರ್ಥಿಗಳು ತಮ್ಮ ಜೀವನವನ್ನು ಕೊನೆಗೊಳಿಸಬೇಕಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದರು.

OXFAM ವರದಿಯನ್ನು ಉಲ್ಲೇಖಿಸಿದ ಸುರ್ಜೆವಾಲಾ, ನೂರು ಶ್ರೀಮಂತ ಭಾರತೀಯರ ಸಂಪತ್ತು 13 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ ಮತ್ತು 12 ಕೋಟಿ ಭಾರತೀಯರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. 2014 ರಿಂದ 2020ರ ನಡುವೆ 1,52,127 ಗೃಹಿಣಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2014ಕ್ಕೆ ಹೋಲಿಸಿದರೆ 2020ರಲ್ಲಿ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣವು ಶೇ. 16 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.