ನವದೆಹಲಿ: ಭಾರತ ಅಮೆರಿಕ ಸಹಭಾಗಿತ್ವವನ್ನು ಬಲಪಡಿಸುವ ಅಧ್ಯಕ್ಷ ಜೋ ಬೈಡನ್ ಅವರ ಉದ್ದೇಶವನ್ನು ಭಾರತದಲ್ಲಿನ ಅಮೆರಿಕದ ಹಂಗಾಮಿ ಯುಎಸ್ ರಾಯಭಾರಿ ಡೇನಿಯಲ್ ಬಿ ಸ್ಮಿತ್ ಶುಕ್ರವಾರ ಪುನರುಚ್ಚರಿಸಿದ್ದಾರೆ.
ಅಧ್ಯಕ್ಷ ಬೈಡನ್ ಅವರು ಭಾರತದೊಂದಿಗಿನ ಅಮೆರಿಕದ ಸಂಬಂಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಎರಡೂ ಸರ್ಕಾರಗಳು ಮತ್ತು ಜನರ ನಡುವಣ ವ್ಯವಹಾರ ಹಾಗೂ ಸಂಬಂಧಗಳ ವೃದ್ಧಿಯಲ್ಲಿ ಇನ್ನೂ ಹೆಚ್ಚಿನ ಸಹಕಾರಕ್ಕಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇವೆ ಎಂದು ಭಾರತದಲ್ಲಿನ ಅಮೆರಿಕ ಹಂಗಾಮಿ ರಾಯಭಾರಿ ಹೇಳಿದ್ದಾರೆ.
ಇದು ಭಾರತದ ಜನರಿಗೆ ಸವಾಲಿನ ಸಮಯ. COVID-19 ವೈರಸ್ ಅನೇಕ ಜನರ ಜೀವನವನ್ನು ತೆಗೆದುಕೊಂಡಿವೆ. ಇದನ್ನು ನಿರ್ಮೂಲನೆ ಮಾಡಲು ಎರಡೂ ಸರ್ಕಾರಗಳು ಗಡಿ ದಾಟಿ ಕೆಲಸ ಮಾಡುತ್ತಿವೆ. ಇನ್ನು ಭಾರತ ಕೋವಿಡ್ ಎರಡನೇ ಅಲೆಯಲ್ಲಿ ಭಾರಿ ಹೊಡೆತಕ್ಕೆ ಸಿಲುಕಿದ್ದ ಅಲ್ಲಿನ ಜನರ ರಕ್ಷಣೆಗಾಗಿ ಸಹಾಯ ಮಾಡಲು ನಾವು ಅಗತ್ಯ ನೆರವು ನೀಡಲು ಬದ್ಧ ಎಂದು ಸ್ಮಿತ್ ಅಭಯ ನೀಡಿದ್ದಾರೆ.
ಅಮೆರಿಕದ ಜನರು ಮತ್ತು ಕಂಪನಿಗಳು ಭಾರತದ ಜೊತೆ ನಿಂತಿವೆ ಎಂದು ಅವರು ಇದೇ ವೇಳೆ ಪ್ರತಿಪಾದಿಸಿದರು. ಅಧ್ಯಕ್ಷ ಬೈಡನ್ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕವು ಭಾರತದೊಂದಿಗೆ ಇರುತ್ತದೆ ಎಂದು ಸ್ಮಿತ್ ಹೇಳಿದ್ದಾರೆ.