ETV Bharat / bharat

ಖಲಿಸ್ತಾನಿ ಉಗ್ರರೊಂದಿಗೆ ಅಪರಾಧಿಗಳು, ದರೋಡೆಕೋರರ ಒಡನಾಟ!

ಪಂಜಾಬ್‌ನಲ್ಲಿ ಖಲಿಸ್ತಾನ್ ತೀವ್ರಗಾಮಿಗಳು ಸ್ಥಳೀಯ ಅಪರಾಧಿಗಳು ಹಾಗೂ ದರೋಡೆಕೋರರ ಬೆಂಬಲ ಪಡೆಯುತ್ತಿದ್ದಾರೆ. ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಪಾಯಕಾರಿ ವಿಚಾರಗಳು ಬಹಿರಂಗವಾಗಿವೆ.

author img

By

Published : Feb 28, 2023, 10:16 PM IST

Dangerous trend of association of local criminals
ಖಲಿಸ್ತಾನಿ ಉಗ್ರಗಾಮಿಗಳೊಂದಿಗೆ ಅಪರಾಧಿಗಳು, ದರೋಡೆಕೋರರ ಒಡನಾಟ

ನವದೆಹಲಿ: ಪಂಜಾಬ್‌ನಲ್ಲಿ ಖಲಿಸ್ತಾನಿ ತೀವ್ರಗಾಮಿಗಳು ಸ್ಥಳೀಯ ಅಪರಾಧಿಗಳು, ದರೋಡೆಕೋರರೊಂದಿಗೆ ಒಡನಾಟ ಬೆಳೆಸಿದ್ದಾರೆ. ದೆಹಲಿ ಪೊಲೀಸ್‌ನ ವಿಶೇಷ ಘಟಕದ ಪೊಲೀಸ್ ಉಪ ಆಯುಕ್ತರಾಗಿ (ಡಿಸಿಪಿ) ನಿಯೋಜಿತವಾಗಿರುವ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಈ ವಿಚಾರವನ್ನು ತಿಳಿಸಿದ್ದಾರೆ. ಇಲ್ಲಿ ಸ್ಥಳೀಯ ಅಪರಾಧಿಗಳು, ದರೋಡೆಕೋರರ ಜೊತೆಗೆ ಖಲಿಸ್ತಾನಿ ತೀವ್ರಗಾಮಿಗಳು ಸಂಪರ್ಕ ಬೆಳೆಸಿದ್ದು, ಪಂಜಾಬ್‌ನಲ್ಲಿ ಅಪಾಯಕಾರಿ ಘಟನೆಗಳು ನಡೆಯುವ ಮುನ್ಸೂಚನೆ ಸಿಕ್ಕಿದೆ.

2010ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿ ರಾಜೀವ್‌ ರಂಜನ್‌ ಅವರು ದೆಹಲಿ ಪೊಲೀಸರ ವಿಶೇಷ ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೃಹ ಸಚಿವಾಲಯಕ್ಕೆ ಸಲ್ಲಿಸಿದ 'ಖಾಲಿಸ್ತಾನ್ ಉಗ್ರವಾದ- ಸಂವಹನ ಮತ್ತು ಲಾಜಿಸ್ಟಿಕ್ಸ್ ನೆಟ್‌ವರ್ಕ್' ವರದಿಯಲ್ಲಿ, ಪಂಜಾಬ್‌ನಲ್ಲಿ ಖಲಿಸ್ತಾನ್ ತೀವ್ರಗಾಮಿಗಳೊಂದಿಗೆ ಸ್ಥಳೀಯ ಅಪರಾಧಿಗಳು, ದರೋಡೆಕೋರರ ಸಹವಾಸ ಬೆಳೆಸಿರುವುದು ಹೊಸ ಮತ್ತು ಅಪಾಯಕಾರಿ ಪ್ರವೃತ್ತಿ ಎಂದು ತಿಳಿಸಲಾಗಿದೆ.

ಈ ವೇಳೆ ಪಂಜಾಬ್‌ನ ಅಪರಾಧಿಗಳು, ದರೋಡೆಕೋರರು ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು, ಆಶ್ರಯ ಇತ್ಯಾದಿಗಳನ್ನು ಖಲಿಸ್ತಾನಿಗಳಿಗೆ ನೀಡಿ ಬೆಂಬಲ ಒದಗಿಸುತ್ತಿದ್ದಾರೆ. ಈ ಗುಂಪು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಅತ್ಯಾಧುನಿಕ ಭಯೋತ್ಪಾದಕ ದಾಳಿಗಳನ್ನು ಯೋಜಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡುತ್ತಿದೆ. ಜೊತೆಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ಪ್ರಚಾರ ಮಾಡುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶಸ್ತ್ರಾಸ್ತ್ರ, ಮಾದಕವಸ್ತು ಕಳ್ಳಸಾಗಣೆ: ಅನೇಕ ಕ್ರಿಮಿನಲ್‌ಗಳು ಮತ್ತು ದರೋಡೆಕೋರರು ಖಾಲಿಸ್ತಾನದ ಮೂಲಭೂತ ಸಿದ್ಧಾಂತದ ಬೆಂಬಲಿಗರು ಅಲ್ಲ. ಅವರಲ್ಲಿ ಕೆಲವರು ಸಂಪೂರ್ಣವಾಗಿ ಕೂಲಿ ಕಾರ್ಮಿಕರು ಮತ್ತು ಭಯೋತ್ಪಾದಕ ಘಟನೆಗಳ ಪ್ರಮುಖ ಅಪರಾಧಿಗಳು ಆಗಿದ್ದಾರೆ. ಅವರ ಕೃತ್ಯಗಳಿಗೆ ಕುಖ್ಯಾತ ಮಾದಕವಸ್ತು ಕಳ್ಳಸಾಗಣೆದಾರರು ಸಹ ಹಣವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಶಸ್ತ್ರಾಸ್ತ್ರ ಹಾಗೂ ಮಾದಕವಸ್ತುಗಳು ಕಳ್ಳಸಾಗಣೆ ಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಅಪಯಕಾರಿ ವಿಚಾರಗಳು ಬಯಲು: ಅಂತಾರಾಷ್ಟ್ರೀಯ ಗಡಿ ಉದ್ದಕ್ಕೂ ನಿಷಿದ್ಧ ವಸ್ತುಗಳ ಕಳ್ಳಸಾಗಣೆ, ಭಯೋತ್ಪಾದಕ ಕೃತ್ಯಗಳ ಅಪರಾಧಕ್ಕೆ ಹಣವನ್ನು ಒದಗಿಸಲಾಗುತ್ತಿದೆ. ಖಲಿಸ್ತಾನಿಗಳ ಗುಂಪಿನ ಆದೇಶದ ಮೇರೆಗೆ ಗಡಿಯಾಚೆಯಿಂದ ಕಳುಹಿಸಲಾದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಜೊತೆಗೆ ಮಾದಕ ದ್ರವ್ಯಗಳನ್ನು ಸ್ವೀಕರಿಸುತ್ತವೆ. ಈ ಗುಂಪಿನ ಸೂಚನೆ ಮೇರೆಗೆ ಮಾದಕ ದ್ರವ್ಯಗಳಿಂದ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಭಯೋತ್ಪಾದಕ ಮಾಸ್ಟರ್‌ಮೈಂಡ್‌ಗಳಿಗೆ ಅಪರಾಧಿಗಳನ್ನು ನೇಮಿಸಿಕೊಳ್ಳುತ್ತಾರೆ. ಇತರ ಭಯೋತ್ಪಾದಕರು ಮತ್ತು ಭವಿಷ್ಯದ ಭಯೋತ್ಪಾದಕ ಘಟನೆಗಳಿಗೆ ಪ್ರತಿಸ್ಪರ್ಧಿ ಗುಂಪುಗಳೊಂದಿಗೆ ನೆಟ್‌ವರ್ಕ್ ಬೆಳೆಸಲು ಜೈಲುಗಳು ಸುರಕ್ಷಿತ ಮಾರ್ಗವಾಗಿ ಹೊರಹೊಮ್ಮಿವೆ ಎಂದು ಐಪಿಎಸ್‌ ಅಧಿಕಾರಿ ರಾಜೀವ್‌ ರಂಜನ್‌ ತಿಳಿಸಿದರು.

ಡ್ರೋನ್‌ಗಳ ಬಳಕೆ: ನೆರೆಯ ದೇಶಗಳಿಂದ ಭಾರತದಲ್ಲಿನ ಉಗ್ರರಿಗೆ ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಮಾದಕ ವಸ್ತುಗಳನ್ನು ತಲುಪಿಸಲು ಡ್ರೋನ್‌ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇದರ ಬಳಕೆ ಹೆಚ್ಚಾಗಿದೆ. ಇತ್ತೀಚಿನ ತಂತ್ರಜ್ಞಾನವು ಈ ರಿಮೋಟ್ ನಿಯಂತ್ರಿತ ಡ್ರೋನ್‌ಗಳನ್ನು ಗಮ್ಯಸ್ಥಾನಗಳಿಗೆ ನಿಖರವಾಗಿ ತಲುಪಿಸಲು ಕಾರ್ಯ ನಡೆಯುತ್ತಿದೆ. ಈ ಡ್ರೋನ್‌ಗಳು ಶಬ್ಧವಿಲ್ಲದೇ ಹೆಚ್ಚು ಎತ್ತರ ಮತ್ತು ದೂರದವರೆಗೆ ಹೋಗುವ ಸಾಮರ್ಥ್ಯ ಹೊಂದಿವೆ.

ಶತ್ರು ರಾಷ್ಟ್ರದಲ್ಲಿ ಆಶ್ರಯ: ಭಯೋತ್ಪಾದನೆ ಪ್ರಕರಣಗಳಲ್ಲಿ ಬೇಕಾಗಿರುವ ಅನೇಕ ಮಾಸ್ಟರ್‌ಮೈಂಡ್‌ಗಳು ಮತ್ತು ಖಲಿಸ್ತಾನಿ ಸಂಘಟನೆಗಳ ಮುಖಂಡರು ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆಡಳಿತ ಸ್ಥಾಪನೆಯ ಸಕ್ರಿಯ ಬೆಂಬಲದೊಂದಿಗೆ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಕೈಗೊಳ್ಳುವುದು ಹಾಗೂ ಪ್ರಚಾರ ಮಾಡುವ ಕಾರ್ಯವೂ ನಡೆಯುತ್ತದೆ. ಅವರಲ್ಲಿ ವಾಧ್ವಾ ಸಿಂಗ್ ಬಬ್ಬರ್, ಹರ್ವಿಂದರ್ ಸಿಂಗ್ ರಿಂದಾ, ರಂಜಿತ್ ಸಿಂಗ್ ನೀತಾ, ಲಖ್ಬೀರ್ ಸಿಂಗ್ ರೋಡೆ ಅವರು ತಮ್ಮ ಚಟುವಟಿಕೆಗಳನ್ನು ಸಕ್ರಿಯವಾಗಿ ಮುಂದುವರಿಸುತ್ತಿರುವ ಪ್ರಮುಖರು.

ಇದನ್ನೂ ಓದಿ: 'ಸಿಬಿಐ ಬಂಧನ ಪ್ರಶ್ನಿಸಿ ಹೈಕೋರ್ಟ್​ಗೆ ಹೋಗಿ': ಡಿಸಿಎಂ ಸಿಸೋಡಿಯಾಗೆ ಸುಪ್ರೀಂ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.