ETV Bharat / bharat

ಮದುವೆ ಸಮಾರಂಭದಲ್ಲಿ ಮದ್ಯ ಸೇವಿಸಿ ನೃತ್ಯ: ಗುಜರಾತ್‌ನಲ್ಲಿ 7 ಮಂದಿ ಬಂಧನ - ETV bharat kannada

ಗುಜರಾತ್‌ನಲ್ಲಿ ಮದ್ಯ ಸೇವನೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಆದರೆ, ಮದುವೆ ಸಮಾರಂಭದಲ್ಲಿ ಮದ್ಯಪಾನ ಮಾಡಿ ನೃತ್ಯ ಮಾಡಿರುವ ದೃಶ್ಯ ವೈರಲ್ ಆಗುತ್ತಿದ್ದಂತೆ​ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

danced-while-drinking-alcohol-at-wedding-police-arrested-after-video-went-viral
ಮದುವೆ ಸಮಾರಂಭದಲ್ಲಿ ಮದ್ಯ ಸೇವನೆ : ಏಳು ಮಂದಿ ಬಂಧನ
author img

By

Published : Feb 21, 2023, 8:19 PM IST

ರಾಜ್​ಕೋಟ್​ (ಗುಜರಾತ್​): ರಾಜ್​ಕೋಟ್​ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಮದ್ಯ ಸೇವಿಸಿ ನೃತ್ಯ ಮಾಡಿದ ಆರೋಪದ ಮೇಲೆ ಪೊಲೀಸರು ಸೋಮವಾರ ಏಳು ಜನರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಮದ್ಯ​ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರು ಮದುವೆಯಲ್ಲಿ ನೃತ್ಯ ಮಾಡುತ್ತಾ ಮದ್ಯ ಹಂಚುತ್ತಿದ್ದ ದೃಶ್ಯ ವೈರಲ್‌ ಆಗಿತ್ತು.

ರಾಜ್​ಕೋಟ್​ ಪೊಲೀಸ್​ ಕಮಿಷನರ್​ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್​ಐ ಬ್ರಿಜೇಂದ್ರ ಸಿಂಗ್​ ಚೌಹಾಣ್​ ಕರ್ತವ್ಯ ನಿರ್ವಹಿಸುತ್ತಿದ್ದಾದ ಕುಡಿದ ಅಮಲಿನಲ್ಲಿ ಪತ್ತೆಯಾಗಿದ್ದಾರೆ. ಈ ವಿಷಯ ಇತರೆ ಪೊಲೀಸ್​ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಂಧಿಸಲಾಗಿದೆ.

ಇದನ್ನೂ ಓದಿ: ಆನೆ ದಾಳಿ ಭೀತಿ: ಮುನ್ನೆಚ್ಚರಿಕೆಯಾಗಿ ನಿಷೇಧಾಜ್ಞೆ ಜಾರಿ..14 ಜನರ ಜೀವ ಬಲಿ ಪಡೆದ ಮದಗಜ

ಅವಿವಾಹಿತರಿಗೆ ಮೊಬೈಲ್​ ನಿಷೇಧ: ಗುಜರಾತ್​ನಲ್ಲಿ ಬಲಿಷ್ಠವಾಗಿರುವ ಠಾಕೂರ್​ ಸಮಾಜ ತನ್ನ ಸಮುದಾಯದ ಜನರಿಗೆ ಹೊಸ ನಿಯಮ ರೂಪಿಸಿದೆ. ಅವಿವಾಹಿತ ಹೆಣ್ಣು ಮಕ್ಕಳಿಗೆ ಮೊಬೈಲ್​ ನಿಷೇಧ ಸೇರಿದಂತೆ ಕೆಲವು ಕಟ್ಟುಪಾಡುಗಳನ್ನು ವಿಧಿಸಿದೆ. ಸಮಾಜದ ಸದಸ್ಯರು ತಮ್ಮ ಸಮುದಾಯದ ಸಂಪ್ರದಾಯಗಳಿಗೆ ಸುಧಾರಣೆ ತರಲು 11 ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಇವುಗಳ ಪಾಲನೆಯಿಂದ ಸಮಾಜದಲ್ಲಿ ಒಗ್ಗಟ್ಟು ಮತ್ತು ಪಾವಿತ್ರ್ಯತೆ ಉಳಿಸಿಕೊಳ್ಳಲು ಸಾಧ್ಯ ಎಂಬುದು ಸಮಾಜದ ಉದ್ದೇಶ.

ಹೊಸ ನಿಯಮಗಳಲ್ಲಿ ವಿವಾಹಪೂರ್ವ ಹೆಣ್ಣು ಮಕ್ಕಳು ಮೊಬೈಲ್​ ಬಳಕೆ ಮಾಡುವಂತಿಲ್ಲ. ನವ ವಿವಾಹಿತರು ತಮ್ಮ ಸಂಬಂಧಿಕರ ಭೇಟಿಯ ವೇಳೆ ಹಣ ನೀಡಬೇಕಿಲ್ಲ. ಯಾವುದೋ ಕಾರಣಕ್ಕಾಗಿ ನಿಶ್ಚಿತಾರ್ಥ ಮತ್ತು ವಿವಾಹವನ್ನು ರದ್ದುಗೊಳಿಸಿದಲ್ಲಿ ಅಂಥ ಪ್ರಕರಣದಲ್ಲಿ ಯಾವುದೇ ಶಿಕ್ಷೆ ನೀಡುವಂತಿಲ್ಲ. ಮಾದಕ ವ್ಯಸನಿಗಳಿಗೆ ವ್ಯಸನ ಮುಕ್ತ ಶಿಬಿರ ಆಯೋಜಿಸಬೇಕು ಎಂದು ನಿಯಮದಲ್ಲಿದೆ.

ಇದನ್ನೂ ಓದಿ: ಇಂದು ಶಿಂಧೆ ಶಿವಸೇನಾ ಬಣದ ರಾಷ್ಟ್ರೀಯ ಕಾರ್ಯಕಾರಿಣಿ: ನಾಳೆ ಚಿಹ್ನೆ ಸಂಬಂಧದ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.