ಕಮ್ಮಾರೆಡ್ಡಿ(ತೆಲಂಗಾಣ): ಸಮಾಜದಲ್ಲಿ ಗೌರವ ಸಿಗದಿರುವುದರಿಂದಲೇ ದಲಿತರು ಕ್ರೈಸ್ತಮತಕ್ಕೆ ಮತಾಂತರವಾಗುತ್ತಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ಕಮ್ಮಾರೆಡ್ಡಿ ಜಿಲ್ಲೆಯ ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ದಲಿತರು ಇನ್ನೂ ಅಭಿವೃದ್ಧಿ ಸಾಧಿಸಬೇಕಿದೆ. ಸಮಾಜದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ದಲಿತರು ಕ್ರೈಸ್ತ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ. ಕ್ರೈಸ್ತಧರ್ಮದಲ್ಲಿ ಅವರಿಗೆ ಗೌರವ ಸಿಗುತ್ತದೆ ಎಂಬ ಭರವಸೆ ಅವರಲ್ಲಿರುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಇಂದು ಪ್ರಧಾನಿ ಮೋದಿಯೊಂದಿಗೆ ಜಮ್ಮು ಕಾಶ್ಮೀರದ ಸರ್ವಪಕ್ಷ ನಾಯಕರ ಸಭೆ
ನಾನೊಬ್ಬ ಹಿಂದೂ, ಆದರೆ ದಲಿತರು ಇನ್ನೂ ಬಡತನದಲ್ಲಿಯೇ ಇರುವುದರಿಂದ ಬೇಜಾರಾಗುತ್ತದೆ. ದೇಶದ ಪ್ರತಿಯೊಬ್ಬರೂ ಕೂಡಾ ಬಡವರು ಮತ್ತು ದಲಿತರಿಗೆ ಸಹಾಯ ಮಾಡಲು ಮುಂದಾಗಬೇಕೆಂದು ಇದೇ ವೇಳೆ ಕೆಸಿಆರ್ ಕರೆ ನೀಡಿದರು.