ETV Bharat / bharat

ದಲಿತ ಯುವಕನ ಅಪಹರಣ: ಬಲವಂತವಾಗಿ ಮದ್ಯ, ಮೂತ್ರ ಕುಡಿಸಿ ದುಷ್ಕರ್ಮಿಗಳಿಂದ ಹಲ್ಲೆ - ರಾಜಸ್ಥಾನದಲ್ಲಿ ದಲಿತ ಯುವಕನ ಹಲ್ಲೆ ಪ್ರಕರಣ

Dalit youth assaulted case in Rajasthan: ದಲಿತ ಯುವಕನೋರ್ವನ ಅಪಹರಣ ಮಾಡಿರುವ ಕೆಲ ದುಷ್ಕರ್ಮಿಗಳು ಆತನಿಗೆ ಬಲವಂತವಾಗಿ ಮದ್ಯ, ಮೂತ್ರ ಕುಡಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

Dalit youth beaten up in Rajasthan
Dalit youth beaten up in Rajasthan
author img

By

Published : Jan 29, 2022, 10:50 PM IST

ಚುರು(ರಾಜಸ್ಥಾನ): ತನ್ನೊಂದಿಗೆ ಬರುವಂತೆ ದಲಿತ ಯುವಕನನ್ನ ಕರೆದ ವೇಳೆ ಆತ ಬಾರದ ಕಾರಣಕ್ಕಾಗಿ ಅಪಹರಣ ಮಾಡಿ, ಬಲವಂತವಾಗಿ ಮದ್ಯ, ಮೂತ್ರ ಕುಡಿಸಿರುವ ಅಮಾನವೀಯ ಘಟನೆ ರಾಜಸ್ಥಾನದ ಚುರುದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಕಳೆದ ಜನವರಿ 26ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಜಸ್ಥಾನದ ರತನ್​ಗಡ್ಡ ರುಖಾಸರ್​ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ದುಷ್ಕರ್ಮಿಗಳ ಗುಂಪು ದಲಿತ ಯುವಕನನ್ನು ಅಪಹರಿಸಿ, ಆತನ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇದಕ್ಕೂ ಮುಂಚಿತವಾಗಿ ತನಗೆ ಬಲವಂತವಾಗಿ ಮದ್ಯ ಹಾಗೂ ಮೂತ್ರ ಕುಡಿಸಿದ್ದಾರೆಂದು ಸಂತ್ರಸ್ತ ಆರೋಪಿಸಿದ್ದಾನೆ.

Dalit youth beaten up in Rajasthan
ದಲಿತ ಯುವಕನ ಅಪಹರಣ ಮಾಡಿ ಅಮಾನವೀಯ ರೀತಿ ಹಲ್ಲೆ

ಏನಿದು ಪ್ರಕರಣ? ಕಾರಿನಲ್ಲಿ ಬಂದಿರುವ ವ್ಯಕ್ತಿಯೋರ್ವ ತನ್ನೊಂದಿಗೆ ಬರುವಂತೆ ದಲಿತ ಯುವಕ ರಾಕೇಶ್​​ನನ್ನು ಕರೆದಿದ್ದಾನೆ. ಈ ವೇಳೆ ಹೋಗಲು ನಿರಾಕರಣೆ ಮಾಡಿದ್ದಾನೆ. ಇದರ ಬೆನ್ನಲ್ಲೇ ಕೆಲವರನ್ನ ಕರೆದುಕೊಂಡು ಅಲ್ಲಿಗೆ ಬಂದು ಅಪಹರಿಸಿಕೊಂಡು ಹೋಗಿದ್ದಾರೆ.

ಇದನ್ನೂ ಓದಿರಿ: ಹಿಂದಿ ಸಿನಿಮಾ ನೋಡಿ ಪ್ರೇರಿತ: ಸ್ನೇಹಿತನ ಅಪಹರಿಸಿ, ಕೊಲೆ.. ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?

ಇದಾದ ಬಳಿಕ ಊರ ಹೊರಗಿನ ಹೊಲವೊಂದರಲ್ಲಿ ರಾಕೇಶ್​​ನಿಗೆ ಬಲವಂತವಾಗಿ ಮದ್ಯ ಹಾಗೂ ಮೂತ್ರ ಕುಡಿಸಿದ್ದಾರೆ. ಇದರ ಬೆನ್ನಲ್ಲೇ ದೊಣ್ಣೆ ಮತ್ತು ಹಗ್ಗದಿಂದ ಥಳಿಸಿದ್ದಾರೆ. ನಂತರ ಭೈರೋಂಜಿ ಪೊಲೀಸ್ ಠಾಣೆಯ ಬಳಿ ಎಸೆದು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಎಂಟು ಮಂದಿ ಆರೋಪಿಗಳ ಬಂಧನ ಮಾಡಲಾಗಿದೆ. ಪೊಲೀಸರು ತಿಳಿಸಿರುವ ಮಾಹಿತಿ ಪ್ರಕಾರ ಕಳೆದ ಹೋಳಿ ಹಬ್ಬದಲ್ಲಿ ನಡೆದ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆಯಂತೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.