ETV Bharat / bharat

ದಲಿತ ಬಾಲಕಿ ಮೇಲಿನ Rape & Murder: ರಾಹುಲ್ ಹಂಚಿಕೊಂಡಿದ್ದ ಟ್ವೀಟ್​ ಮಾಯ

ಮೃತ ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರೊಂದಿಗಿನ ಫೋಟೋ ಹಂಚಿಕೊಂಡು ವಿವಾದಕ್ಕೊಳಗಾಗಿದ್ದ ರಾಹುಲ್​ ಗಾಂಧಿ ಟ್ವಿಟರ್​ ಖಾತೆಯಿಂದ ಇದೀಗ ಆ ಟ್ವೀಟ್​ ಮಾಯವಾಗಿದೆ.

Rahul
Rahul
author img

By

Published : Aug 7, 2021, 12:57 PM IST

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಹಂಚಿಕೊಂಡಿದ್ದ ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದ ದೆಹಲಿಯ ದಲಿತ ಬಾಲಕಿಯ ಕುಟುಂಬಸ್ಥರ ಜೊತೆಗಿರುವ ಫೋಟೋ ಇದೀಗ ಟ್ವಿಟರ್​ನಲ್ಲಿ ಕಾಣಿಸುತ್ತಿಲ್ಲ.

ಕಳೆದ ಬುಧವಾರ ಮೃತ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದ ರಾಹುಲ್​ ಗಾಂಧಿ ಸಾಂತ್ವನ ಹೇಳಿದ್ದರು. "ಈ ದೇಶದ ಮಗಳು ನ್ಯಾಯಕ್ಕೆ ಅರ್ಹಳು. ನಾನು ನ್ಯಾಯದ ಹಾದಿಯಲ್ಲಿ ಅವರೊಂದಿಗೆ ಇದ್ದೇನೆ" ಎಂದು ಕೊಲೆಯಾದ 9 ವರ್ಷದ ಬಾಲಕಿ ಮತ್ತು ಆಕೆಯ ಕುಟುಂಬಸ್ಥರ ಫೋಟೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: Minor Girl Rape Case: ಸಂತ್ರಸ್ತೆ ಕುಟುಂಬದ ಫೋಟೋ ಪೋಸ್ಟ್​ ಆರೋಪದಡಿ ರಾಹುಲ್ ವಿರುದ್ಧ ದೂರು

ಹೀಗೆ ಸಂತ್ರಸ್ತೆಯ ಫೋಟೋ ಹಂಚಿಕೊಳ್ಳುವುದು ಬಾಲ ನ್ಯಾಯ ಮತ್ತು ಪೋಕ್ಸೊ ಕಾಯ್ದೆಗಳನ್ನು ಉಲ್ಲಂಘಿಸುತ್ತದೆ. ರಾಹುಲ್ ಗಾಂಧಿ ಟ್ವೀಟ್​ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ದೆಹಲಿ ಪೊಲೀಸ್ ಮತ್ತು ಟ್ವಿಟರ್‌ಗೆ ಸೂಚನೆ ನೀಡಿತ್ತು.

ಇದೀಗ ಆ ಟ್ವಿಟರ್​ ಮೇಲೆ ಕ್ಲಿಕ್​ ಮಾಡಿದರೆ "No longer available", "ಈ ಟ್ವೀಟ್ ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿದೆ" ಎಂದು ತೋರಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.