ಧರ್ಮಶಾಲಾ : ಭಾರತೀಯ ಸಹೋದರ ಸಹೋದರಿಯರೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ಪಿಎಂ-ಕೇರ್ಸ್ ನಿಧಿಗೆ ಕೊಡುಗೆ ನೀಡುವುದಾಗಿ ಟಿಬೆಟಿಯನ್ ಆಧ್ಯಾತ್ಮಿಕ ಗುರು ದಲೈ ಲಾಮಾ ಹೇಳಿದ್ದಾರೆ.
"ಈ ಆತಂಕಕಾರಿ ಕೋವಿಡ್-19 ಉಲ್ಬಣದ ಸಮಯದಲ್ಲಿ, ಭಾರತೀಯ ಸಹೋದರರು ಮತ್ತು ಸಹೋದರಿಯರೊಂದಿಗೆ ನಾವು ಒಗ್ಗಟ್ಟಾಗಿದ್ದೇವೆ. ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡುವಂತೆ ನಾನು ದಲೈ ಲಾಮಾ ಟ್ರಸ್ಟ್‌ಗೆ ಕೇಳಿಕೊಂಡಿದ್ದೇನೆ.
"ಈ ವಿನಾಶಕಾರಿ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ವಿಶೇಷವಾಗಿ ಮುಂಚೂಣಿಯಲ್ಲಿ ಧೈರ್ಯದಿಂದ ಕೆಲಸ ಮಾಡುವ ಎಲ್ಲಾ ಪ್ರಯತ್ನಗಳ ಬಗ್ಗೆ ನನ್ನ ಧನ್ಯವಾದಗಳು.
ಸಾಂಕ್ರಾಮಿಕ ರೋಗ ಶೀಘ್ರದಲ್ಲೇ ಕೊನೆಗೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದು ಅವರು ಹೇಳಿದರು.
ಇದನ್ನೂ ಓದಿ : ಭಾರತೀಯರಿಗಾಗಿ ಮಿಡಿದ ಮನ.. 'ಪಿಎಂ ಕೇರ್ಸ್ ಫಂಡ್'ಗೆ 37 ಲಕ್ಷ ರೂ. ದೇಣಿಗೆ ನೀಡಿದ ಕಮ್ಮಿನ್ಸ್