ಬಾರಾಬಂಕಿ: ಉತ್ತರಪ್ರದೇಶದಲ್ಲಿ ನಕಲಿ ಮಾಫಿಯಾ ಹೊರ ಬಿದ್ದಿದೆ. ವಕೀಲ ಪರೀಕ್ಷೆ ಬರೆಯಲು ಬಂದ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿರುವ ಘಟನೆ ಸತ್ರಿಖ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆ ವಿವರ ಹೀಗಿದೆ
ಫೈಜಾಬಾದ್‌ನ ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ ಎಲ್‌ಎಲ್‌ಬಿ ಪರೀಕ್ಷೆ ನಡೆಸುತ್ತಿದೆ. ಹೈದರ್‌ಗಢದ ಗ್ರಾಮಯಾಂಚಲ್ ಕಾನೂನು ಮಹಾವಿದ್ಯಾಲಯ ಮತ್ತು ಮಕಾನ್‌ಪುರನ ಎಂಡಿಕೆಪಿ ಕಾನೂನು ಕಾಲೇಜ್ನಲ್ಲಿ ಪರೀಕ್ಷೆ ನಡೆಯುತ್ತಿವೆ.
ಬುಧವಾರ ಮೊದಲ ಸೆಮಿಸ್ಟರ್‌ನ ಐದನೇ ಪೇಪರ್ ಪರೀಕ್ಷೆ ನಡೆಯುತ್ತಿತ್ತು. ಗೇಟ್‌ನಲ್ಲಿ ಎಂದಿನಂತೆ ವಿದ್ಯಾರ್ಥಿಗಳನ್ನು ಚೆಕ್ ಮಾಡಿ ಒಳ ಬಿಡುಲಾಗುತ್ತಿತ್ತು. ಈ ವೇಳೆ ನಾಲ್ವರು ಅಭ್ಯರ್ಥಿಗಳು ಅನುಮಾನಸ್ಪದವಾಗಿ ಕಂಡಿದ್ದಾರೆ. ಕೂಡಲೇ ಮೇಲ್ವಿಚಾರಕರು ಕಾಲೇಜ್ ಪ್ರಿನ್ಸಿಪಾಲ್ಗೆ ಸುದ್ದಿ ತಿಳಿಸಿದ್ದಾರೆ.
ಪ್ರಿನ್ಸಿಪಾಲ್ ಡಾ.ಅಶ್ವಿನಿ ಕುಮಾರ್ ಗುಪ್ತಾ ವಿಚಾರಣೆ ನಡೆಸಿದ್ದಾಗ ಈ ಯುವಕರು ತಮ್ಮ ಹೆಸರುಗಳು ಸತೀಶ್ ಕುಮಾರ್, ತ್ರಿಭುವನ್ ಸಿಂಗ್, ದಿನೇಶ್ ಯಾದವ್ ಮತ್ತು ವಿಕಾಸ್ ಶ್ರೀವಾಸ್ತವ ಎಂದು ಹೇಳಿದ್ದಾರೆ. ನಾವೆಲ್ಲರೂ ಮಕನ್ಪುರದ ಎಂಡಿಕೆಪಿ ಕಾಲೇಜಿನ ವಿದ್ಯಾರ್ಥಿಗಳು ಎಂದು ಪ್ರಿನ್ಸಿಪಾಲ್ಗೆ ತಿಳಿಸಿದ್ದಾರೆ. ಪ್ರಾಂಶುಪಾಲರು ಮತ್ತು ಕಾಲೇಜ್ನ ತಂಡವು ತೀವ್ರವಾಗಿ ವಿಚಾರಣೆ ಪ್ರಾರಂಭಿಸಿದಾಗ ಈ ನಾಲ್ವರ ಸತ್ಯ ಬಹಿರಂಗವಾಗಿದೆ.
ಈ ನಾಲ್ವರು ದಿನಗೂಲಿ ಕಾರ್ಮಿಕರು
ವಿಚಾರಣೆ ವೇಳೆ ಈ ನಾಲ್ವರು ಯುವಕರು ತಮ್ಮ ಗುರುತುಗಳನ್ನು ಬಹಿರಂಗಪಡಿಸಿದರು. ಇದನ್ನು ಕೇಳಿದ ಡಾ. ಗುಪ್ತಾ ಅಚ್ಚರಿಗೊಳಗಾದರು. ಏಕೆಂದ್ರೆ ಅವರೆಲ್ಲರೂ ದಿನಗೂಲಿ ಕಾರ್ಮಿಕರಾಗಿದ್ದರು.
ಹರಿಕೇಶ್, ಶ್ಯಾಮ್, ವಿನಯ್ ಮತ್ತು ಅನುಜ್ ಈ ಯುವಕರ ನಿಜವಾದ ಹೆಸರಗಳಾಗಿವೆ. ಪ್ರತಿನಿತ್ಯ ಇವರೆಲ್ಲರೂ ದಿನಗೂಲಿ ಕೆಲಸಕ್ಕಾಗಿ ತೆರಳುತ್ತಾರೆ. ಅದರಂತೆ ನಿನ್ನೆ ಸಹ ಕೆಲಸಕ್ಕಾಗಿ ನಗರದ ಮಾರುಕಟ್ಟೆಗೆ ಆಗಮಿಸಿದ್ದರು. ಈ ವೇಳೆ ಹಿಮಾಂಶು ಎಂಬ ವ್ಯಕ್ತಿ ಬಂದು ನೀವು ಪರೀಕ್ಷೆ ಹಾಜರಾಗಿ ಅಷ್ಟೇ ಸಾಕು ಎಂದು ಹೇಳಿ ಕೂಲಿ ಹಣ ನೀಡಿದ್ದಾರೆ. ಹೀಗಾಗಿ ಇವರು ಪರೀಕ್ಷೆ ಬರೆಯಲು ಕಾಲೇಜ್ಗೆ ಆಗಮಿಸಿದ್ದರು ಎಂದು ಪ್ರಿನ್ಸಿಪಾಲ್ ಹೇಳಿದ್ದಾರೆ.
ಇನ್ನು ಈ ನಾಲ್ವರು ಪೊಲೀಸರು ಬಂಧಿಸಿ ಕಿಂಗ್ಪಿನ್ ಆಗಿರುವ ಹಿಮಾಂಶು ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.