ಮೇಷ : ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬಾಧ್ಯತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ನೀವು ಬಿಡುವು ತೆಗೆದುಕೊಂಡು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ. ನಿಮ್ಮ ಆರೋಗ್ಯಕ್ಕೆ ಗಮನ ನೀಡಬೇಕು. ನೀವು ಸುಸ್ತಾದಾಗ ಪ್ರತಿಯೊಂದೂ ಹಿಂಬದಿಗೆ ಸರಿಯಬೇಕು.
ವೃಷಭ : ಇಂದು ನಿಮ್ಮ ಸಮಸ್ಯೆಯಿಂದ ಹೊರಬರಲು ಪ್ರಯತ್ನಿಸುತ್ತೀರಿ. ನೀವು ಇತರರ ಕೆಲಸಕ್ಕೆ ನಿಮ್ಮ ತಪ್ಪು ಎಂದು ಭಾವಿಸುತ್ತೀರಿ. ಸಂಜೆಯ ವೇಳೆಗೆ ವಿಷಯಗಳು ಆಶಾಭಂಗ ಉಂಟುಮಾಡಬಹುದು. ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನೀವು ಶಾಂತರಾಗಿ ಉಳಿಯುವುದು ಸೂಕ್ತ.
ಮಿಥುನ : ನೀವು ನಿಮ್ಮ ಸಮಯವನ್ನು ಇಂದು ಇತರರು ಮತ್ತು ಅವರ ಪ್ರೇರಣೆಗಳನ್ನು ಕಂಡುಕೊಳ್ಳುವಲ್ಲಿ ಕಳೆಯುತ್ತೀರಿ. ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಭದ್ರತೆ ಮತ್ತು ಹಣಕಾಸಿನ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತೀರಿ. ನೀವು ನಿಮ್ಮ ಆರೈಕೆಯ ಸ್ವಭಾವದಿಂದಾಗಿ ನೀವು ಜನರ ಪ್ರೀತಿ ಮತ್ತು ಶ್ಲಾಘನೆ ಪಡೆಯುತ್ತೀರಿ.
ಕರ್ಕಾಟಕ : ಆತ್ಮೀಯ ಮಿತ್ರರು ನಿಮ್ಮ ಪ್ರವೃತ್ತಿಯಿಂದ ಸಂತೋಷಪಡುತ್ತಾರೆ. ನೀವು ಅವರನ್ನು ಸಂತೋಷವಾಗಿರಿಸಲು ಮತ್ತು ಅವರೊಂದಿಗೆ ಸಂತೋಷದ ಸಂಜೆ ಕಳೆಯಲು ಪ್ರಯತ್ನಿಸುತ್ತೀರಿ. ಪ್ರೀತಿ ಮತ್ತು ಸೌಹಾರ್ದ ಬಂಧಗಳು ದೀರ್ಘವಾಗಿರುತ್ತವೆ ಮತ್ತು ಫಲದಾಯಕವಾಗುತ್ತವೆ.
ಸಿಂಹ : ಬಹುಶಃ ಇದು ವಾತಾವರಣ ಅಥವಾ ಈ ದಿನಗಳಲ್ಲಿ ಒಂದು. ಆದರೆ ನೀವು ಅತ್ಯಂತ ಭಾವನೆಯ ಏರಿಳಿತ ಕಾಣುತ್ತೀರಿ. ಬದಲಾವಣೆ ಹೊರತಾಗಿ ಯಾವುದೂ ಶಾಶ್ವತವಲ್ಲ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹರಿವಿನೊಂದಿಗೆ ಚಲಿಸಿರಿ ಮತ್ತು ನಿಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗಳ ಅಂತಃಪ್ರವಾಹದಲ್ಲಿ ಸಿಲುಕಿಕೊಳ್ಳಬೇಡಿ.
ಕನ್ಯಾ : ನೀವು ಇಂದು ಐಡಿಯಾಗಳ ಅತಿಯಾದ ಹರಿವನ್ನು ಕಾಣುತ್ತೀರಿ. ನಿಮಗೆ ಗುಣಪಡಿಸುವ ಸ್ಪರ್ಶವಿದೆ, ಹೀಲರ್ ಕೈಗಳಿವೆ ಮತ್ತು ಹಲವು ಜನರಿಗೆ ನೆರವಾಗಲು ಸಮರ್ಥರಾಗುತ್ತೀರಿ. ನೀವು ಬಹಳ ವಿವೇಚನೆಯುಳ್ಳವರು, ನಿಮ್ಮ ಮನಸ್ಸು ಓದುವ ಸಾಮರ್ಥ್ಯಗಳು ನಿಮಗೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಅದ್ಭುತಗಳನ್ನು ಮಾಡುತ್ತವೆ.
ತುಲಾ : ಗಾಳಿಯಲ್ಲಿ ಪ್ರೀತಿಯಿದೆ ಮತ್ತು ಆಕಾಂಕ್ಷೆ ಮೂಲೆಯಲ್ಲಿ ಬಚ್ಚಿಟ್ಟುಕೊಂಡಿದೆ. ನಿಮ್ಮ ಕಣ್ಣು ಹಾಗೂ ಕಿವಿಯನ್ನು ತೆರೆದಿಟ್ಟುಕೊಳ್ಳಿ. ಏಕೆಂದರೆ ನೀವು ಸದ್ಯದಲ್ಲೇ ತೀವ್ರ ಆಕಾಂಕ್ಷೆಯ ಪ್ರೀತಿಯಲ್ಲಿ ಸಿಲುಕಿಕೊಳ್ಳಬಹುದು. ಆದರೆ ಹೊಸ ಪ್ರೀತಿಗೆ ದಾರಿ ಸದಾ ಕಡಿದಾಗಿರುತ್ತದೆ. ಮತ್ತು ನಿಮ್ಮ ಪ್ರೀತಿಪಾತ್ರರು ನಿಮ್ಮ ಜೇಬು ಖಾಲಿ ಮಾಡಬಹುದು.
ವೃಶ್ಚಿಕ : ಋಣಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ಮುಕ್ತವಾಗಿಸಿ. ನಿಮ್ಮ ತಂಡದಲ್ಲಿ ಕೆಲಸ ಮಾಡಲು ನಿಮಗೆ ಅತ್ಯಂತ ಉತ್ಸಾಹ ಬೇಕು ಮತ್ತು ನಿಮ್ಮ ತಂಡದವರಿಗೆ ಸಮಾನ ಜವಾಬ್ದಾರಿಗಳನ್ನು ನೀಡಿರಿ. ಸಾಮರ್ಥ್ಯ ಕಂಡುಕೊಂಡು ಅದಕ್ಕೆ ತಕ್ಕಂತೆ ಜವಾಬ್ದಾರಿ ನೀಡಿ. ಅವರ ಕೆಲಸದಲ್ಲಿ ನಂಬಿಕೆ ಇರಿಸಿ ಮತ್ತು ಉಳಿದಿದ್ದು ಸುಸೂತ್ರವಾಗುತ್ತದೆ.
ಧನು : ಅಂಧಕಾರ ಮತ್ತು ನಿರ್ವಿಣ್ಣ ನಿಮ್ಮಲ್ಲಿ ಇಂದಿನ ಭಾವನೆಗಳು. ಆದರೆ ಚಿಂತೆಗಳ ಮೋಡ ದಿನದ ನಂತರದಲ್ಲಿ ಒಡೆಯಲಿದೆ. ವಿದೇಶದಿಂದ ಶುಭಸುದ್ದಿ ಅಥವಾ ಮಿತ್ರರಿಂದ ಫೋನ್ ಕರೆ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.
ಮಕರ : ಇಂದು ನೀವು ನಿಮ್ಮ ಗುರಿಗಳನ್ನು ಸಾಧಿಸಲು ಸಮಂಜಸ ಮತ್ತು ಅಸಮಂಜಸ ದಾರಿಗಳಲ್ಲಿ ಪವರ್ ಗೇಮ್ ಆಡುತ್ತೀರಿ. ಬೌದ್ಧಿಕ ಪ್ರಗತಿ ಅಸಾಧಾರಣವಾಗಿದೆ. ಹಾಗೆಯೇ ನಿಮ್ಮ ಸ್ವಭಾವವೂ. ನಿಮ್ಮ ಸ್ವಭಾವದಲ್ಲಿ ವಿಶ್ವಾಸವಿರಿಸಿ. ಏಕೆಂದರೆ ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತದೆ.
ಕುಂಭ : ನಿಮ್ಮ ಸಂವಹನ ಕೌಶಲ್ಯಗಳು ಇಂದು ಅದ್ಭುತಗಳನ್ನು ಮಾಡುತ್ತವೆ. ನಿಮ್ಮ ಮಾತುಗಾರಿಕೆ ನಿಮಗೆ ಪುರಸ್ಕಾರಗಳನ್ನು ತಂದುಕೊಡುತ್ತವೆ ಮತ್ತು ಸಭೆಗಳಲ್ಲಿ ಅತ್ಯಂತ ಅನುಕೂಲಕರವಾಗುತ್ತವೆ. ವಾಸ್ತವವಾಗಿ ನಿಮ್ಮ ವಾದಗಳು ಬಹಳ ಮನ ಒಲಿಸುವಂತಿರುತ್ತವೆ. ಜನರು ನಿಮ್ಮೊಂದಿಗೆ ಒಪ್ಪದೇ ಇರುವಾಗ ಕ್ಷೋಭೆಗೊಳ್ಳದೇ ಇರುವುದು.
ಮೀನ : ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುವುದನ್ನು ನಿರೀಕ್ಷಿಸಿ, ಅಲ್ಲಿ ವೆಚ್ಚಗಳು ಏರುತ್ತವೆ. ಕಠಿಣ ದಿನದ ಕೆಲಸದ ನಂತರ ಪ್ರಶಂಸೆ ಮತ್ತು ಕೃತಜ್ಞತೆ ನಿಮ್ಮ ದಾರಿಯಲ್ಲಿ ಬರುತ್ತವೆ.