ETV Bharat / bharat

ಆಂಜನೇಯನ ದಿನವಾದ ಇಂದು ಯಾವ ರಾಶಿಯವರಿಗೆ ಏನು ಫಲ? - ಸಿಂಹ

ಈ ದಿನದ ರಾಶಿ ಭವಿಷ್ಯ ಇಲ್ಲಿದೆ..

astro
astro
author img

By

Published : Aug 21, 2021, 7:05 AM IST

ಮೇಷ: ಅನವಶ್ಯಕ ಚಿಂತೆ ಮಾಡದೇ ಇದ್ರೆ ಕೆಲಸದ ಸ್ಥಳದಲ್ಲಿ ಉತ್ತಮ ಅವಕಾಶಗಳು, ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ. ಸಂಗಾತಿ ಜೊತೆ ಉತ್ತಮ ಬಾಂಧವ್ಯ ಇರಲಿದ್ದು, ಮಕ್ಕಳಿಂದ ಸಂತೋಷ ಲಭಿಸಲಿದೆ. ಒಳ್ಳೆಯ ಆರೋಗ್ಯ ಕೂಡ ನಮ್ಮದಾಗಲಿದೆ.

ವೃಷಭ: ನಿಮ್ಮ ಬೌದ್ಧಿಕ ಕೌಶಲ್ಯದಿಂದ ಕೆಲಸದಲ್ಲಿ ಪ್ರಗತಿ ಹಾಗೂ ತೃಪ್ತಿ ಲಭಿಸಲಿದೆ. ಕುಟುಂಬ ಜೀವನದಲ್ಲಿ ಮಿಶ್ರ ಫಲಿತಾಂಶ. ದಂಪತಿಗಳು ಅನವಶ್ಯಕ ಚರ್ಚೆಯಿಂದ ದೂರ ಇದ್ರೆ ಮಾನಸಿಕ ಶಾಂತಿ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರಿಂದ ಸಕಾರಾತ್ಮಕ ಉತ್ತರ ಸಿಗಲಿದೆ.

ಮಿಥುನ: ಹೆಚ್ಚುತ್ತಿರುವ ವೆಚ್ಚಗಳು ಹಾಗೂ ಚಿಂತೆಗಳನ್ನು ದೂರ ಇಟ್ಟರೆ ಹಾಗೂ ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ರೆ ಒಳ್ಳೆಯ ಫಲಿತಾಂಶ ಬರಲಿದೆ. ಕಿರಿ ಕಿರಿ ಮಾಡುವ ವ್ಯಕ್ತಿಯನ್ನು ನಿರ್ಲಕ್ಷಿಸಿದ್ರೆ ಒಳಿತು. ಪ್ರಯಾಣ ಮುಂದೂಡಿ. ವ್ಯವಹಾರಗಳಲ್ಲಿ ಯಾವುದೇ ಅಡ್ಡಿ ಇಲ್ಲಾ. ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಕೆಲಸದಲ್ಲಿ ತಾಳ್ಮೆ ಮುಖ್ಯ.

ಕಟಕ: ಅನೇಕ ಕೆಲಸಗಳನ್ನು ಏಕ ಕಾಲದಲ್ಲಿ ನಿರ್ವಹಿಸುವ ಅನಿವಾರ್ಯತೆ ಬರಲಿದೆ. ಮನಸ್ಸಿಗೆ ಕಿರಿ ಕಿರಿ ತಪ್ಪಿಸಲು ದೇವಿ ಧ್ಯಾನ ಮಾಡಿ. ಸಂಗಾತಿಯೊಡನೆ ವಿವಾದ ತಪ್ಪಿಸಲು ಅವರ ಜೊತೆ ಸ್ವಲ್ಪ ಕಾಲ ಕಳೆಯಿರಿ. ಶಾಂತವಾಗಿರಿ. ಅನಿರೀಕ್ಷಿತ ನಷ್ಟದ ಸೂಚನೆ ಇರೋದ್ರಿಂದ ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ. ಧೈರ್ಯದಿಂದ ಕೆಲಸ ಮಾಡಿದ್ರೆ ಅದೃಷ್ಟ. ನಕಾರಾತ್ಮಕ ಆಲೋಚನೆ ಬಿಡಿ.

ಸಿಂಹ: ಪೋಷಕರಿಂದ ಬೆಂಬಲ ಹಾಗೂ ಅವರಿಗೆ ಉತ್ತಮ ಆರೋಗ್ಯ ಭಾಗ್ಯ. ಎಲ್ಲಾ ಕೆಲಸಗಳಲ್ಲಿ ಸಂಗಾತಿ ಜೊತೆ ಉತ್ತಮ ಹೊಂದಾಣಿಕೆಯಾಗಲಿದೆ. ಸ್ನೇಹಿತರಿಂದ ಮಾನಸಿಕ ಸಂತೋಷ ಸಿಗಲಿದೆ. ಕೆಲಸಗಳನ್ನು ವೇಗವಾಗಿ ನಿರ್ವಹಿಸುವಿರಿ. ಕೆಲಸದ ಸ್ಥಳದಲ್ಲಿ ಶ್ರಮಪಟ್ಟು ಕೆಲಸ ಮಾಡುವಿರಿ. ವ್ಯಾಪಾರದಲ್ಲಿ ಲಾಭ. ಸಹೋದರನ ಜೊತೆ ಮಾತಿನ ಚಕಮಕಿ ತಡೆಯಿರಿ. ಶಿವನ ಧ್ಯಾನದಿಂದ ಮನಸ್ಸಿಗೆ ಧೈರ್ಯ.

ಕನ್ಯಾ: ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಹೊಸ ಆಸ್ತಿ ಖರೀದಿಸಲು ಈ ದಿನ ಒಳ್ಳೆಯ ಸಮಯ. ಸಂಗಾತಿ ಜೊತೆ ವಾದ ವಿವಾದ ತಪ್ಪಿಸಿದ್ರೆ ಉತ್ತಮ. ತಾಳ್ಮೆ ಅಗತ್ಯ. ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಹಳೆಯ ವ್ಯಾಪಾರದಿಂದ ಲಾಭ ಗಳಿಸುವ ಸಾಧ್ಯತೆ. ಸ್ನೇಹಿತರಿಗೆ ಅಮೂಲ್ಯ ಉಡುಗೊರೆ ಕೊಡುವಿರಿ. ಆರ್ಥಿಕವಾಗಿ ಉತ್ತಮ ಪರಿಸ್ಥಿತಿ. ವಿಷ್ಣು ಸೇವೆಯಿಂದ ನೆಮ್ಮದಿ.

ತುಲಾ: ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅವಶ್ಯ. ಸಂಗಾತಿಯಿಂದ ಬೆಂಬಲ. ದೇವಸ್ಥಾನಗಳಿಗೆ ಭೇಟಿ ನೀಡುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ. ಅನಿವಾರ್ಯ ಖರ್ಚು ವೆಚ್ಚದ ಸಾಧ್ಯತೆ. ಕುಟುಂಬ ಜೀವನದಲ್ಲಿ ನೆಮ್ಮದಿ. ಹೊಸ ಸ್ಥಳಗಳಿಗೆ ಪ್ರಯಾಣ. ಪ್ರೀತಿ ಪಾತ್ರರ ಹಾಗೂ ಸ್ನೇಹಿತರ ಭೇಟಿ. ಆತ್ಮ ವಿಶ್ವಾಸದಿಂದ ಒತ್ತಡದಿಂದ ಹೊರ ಬರುವಿರಿ. ಚೈತನ್ಯ ದಿಂದ ಕೆಲಸ ಮಾಡುವಿರಿ. ಮಹಾಲಕ್ಷ್ಮಿಯ ಸೇವೆ ಮಾಡಿ.

ವೃಶ್ಚಿಕ: ರಿಯಲ್ ಎಸ್ಟೇಟ್ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಲಾಭ ಸಿಗಲಿದೆ. ಮನೆಯಲ್ಲಿ ಶಾಂತಿಗಾಗಿ ಕಚೇರಿಯ ಕೆಲಸಗಳನ್ನು ಮನೆಗೆ ತರಬೇಡಿ. ವೈವಾಹಿಕ ಜೀವನದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಒಳ್ಳೆಯ ಸಮಯ ಕಳೆಯುತ್ತೀರಿ. ಪರಸ್ಪರ ತಿಳುವಳಿಕೆ ಹೆಚ್ಚಾಗುವುದು. ಉತ್ತಮ ಅರೋಗ್ಯ. ಸುಬ್ರಹ್ಮಣ್ಯ ನ ಪ್ರಾರ್ಥನೆ ಅಗತ್ಯ.

ಧನು: ಕುಟುಂಬ ವಿವಾದಗಳಿಂದ ಮನಸ್ಸಿಗೆ ಬೇಸರ. ಸೂಕ್ತ ನಿರ್ಧಾರಗಳಿಂದ ಸಮಸ್ಯೆಗಳ ಪರಿಹಾರ. ಒಡ ಹುಟ್ಟಿದವರ ಸಹಾಯದಿಂದ ಅಪೂರ್ಣ ಕೆಲಸಗಳು ಪೂರ್ಣ ವಾಗುತ್ತವೆ. ಸಂಗಾತಿಯ ಆರೋಗ್ಯಕ್ಕೆ ಅವರ ಜೊತೆ ಸ್ವಲ್ಪ ಸಮಯ ಕಳೆಯಿರಿ. ವಿಶೇಷ ವ್ಯಕ್ತಿಯ ಭೇಟಿ ಮಾಡುವಿರಿ. ಆಮದು ರಫ್ತು ವ್ಯಾಪಾರಿಗಳಿಗೆ ದೊಡ್ಡ ಮಟ್ಟದ ಲಾಭ. ಶಿವನನ್ನು ಸ್ಮರಿಸಿ.

ಮಕರ: ಹೊಸ ಕೆಲಸಗಳನ್ನು ಆರಂಭಿಸಲು ಒಳ್ಳೆಯ ಸಮಯ. ನಿಮ್ಮ ಬುದ್ಧಿವಂತಿಕೆಯಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ. ಕುಟುಂಬದಲ್ಲಿ ಶಾಂತಿ ಹಾಗೂ ಸಂತೋಷ. ಉತ್ತಮ ಆರೋಗ್ಯ. ಅನಗತ್ಯ ವಿಷಯಗಳಿಗೆ ಗಮನ ಕೊಡಬೇಡಿ. ವಿನೋದ ತುಂಬಿದ ಚಟುವಟಿಕೆಗಳಿಗೆ ಹಣ ಖರ್ಚು ಮಾಡುವಿರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ. ಶನಿದೇವರ ಸೇವೆ ಮಾಡಿ.

ಕುಂಭ: ಹಿರಿಯರೊಂದಿಗೆ ಭಿನ್ನಾಭಿಪ್ರಾಯ. ಕೆಲಸದಲ್ಲಿ ಕೆಲವು ಅಡಚಣೆಗಳು ಬರುವ ಸಾಧ್ಯತೆ ಇರೋದ್ರಿಂದ ಜಾಗ್ರತೆ ಅಗತ್ಯ. ಮನೆಯ ಜವಾಬ್ದಾರಿ ಹೆಚ್ಚಾಗಲಿದೆ. ಹಣದ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿ ದೊರೆಯಲಿದೆ. ಸಂಗಾತಿಯಿಂದ ಹೆಚ್ಚಿನ ಸಹಕಾರ. ಬಹಳ ಸಮಯದ ನಂತರ ಕುಟುಂಬದ ಜೊತೆ ಸಮಯ ಕಳೆಯಲು ಅವಕಾಶ. ವ್ಯಾಪಾರಿಗಳಿಗೆ ಹೊಸ ಹೂಡಿಕೆ ಮಾಡಲು ಸದವಕಾಶ. ಆಂಜನೇಯ ಧ್ಯಾನ ಮಾಡಿ.

ಮೀನ: ಕೆಲಸದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಕೌಟುಂಬಿಕ ವಿವಾದಗಳಿಂದ ಬಿಡುಗಡೆ. ಸ್ನೇಹಿತರ ಜೊತೆ ಸಮಯ ಕಳೆದರೆ ನಿಮ್ಮ ಸಂಬಂಧಗಳು ಉತ್ತಮ ವಾಗಲಿವೆ. ಕುಟುಂಬದವರ ಬೆಂಬಲದಿಂದ ಹಾಗೂ ಸಂಗಾತಿಯ ಸ್ನೇಹಪರ ನಡವಳಿಕೆಯಿಂದ ಮನಸ್ಸಿಗೆ ಸಂತೋಷ. ಸ್ನೇಹಿತರ ಜೊತೆ ಬೆರೆಯಲು ಒಳ್ಳೆಯ ಅವಕಾಶ. ಕೆಲಸ ಹಾಗೂ ನಿಮ್ಮ ಗುರಿಗಳ ಮೇಲೆ ಹೆಚ್ಚಿನ ನಿಗಾವಹಿಸಿ. ಕುಲದೇವರ ಪ್ರಾರ್ಥನೆ ಮಾಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.