ETV Bharat / bharat

ಹಣದ ಆಮಿಷ ತೋರಿಸಿ ಬಲವಂತದ ಮತಾಂತರ, ನಾಲ್ವರು ಕ್ರಿಶ್ಚಿಯನ್​ ಧರ್ಮ ಗುರುಗಳ ಬಂಧನ - ETV bharat kannada news

ಮಹಾರಾಷ್ಟ್ರದಲ್ಲಿ ಬಲವಂತದ ಮತಾಂತರ - ಕ್ರಿಶ್ಚಿಯನ್​ ಧರ್ಮಗುರುಗಳ ಬಂಧನ - ಬಡವರಿಗೆ ಹಣದ ಆಮಿಷ ಒಡ್ಡಿ ಮತಾಂತರಕ್ಕೆ ಬಲವಂತದ ಆರೋಪ

ETV bharat kannada news
ನಾಲ್ವರು ಕ್ರಿಶ್ಚಿಯನ್​ ಧರ್ಮಗುರುಗಳ ಬಂಧನ
author img

By

Published : Aug 8, 2022, 12:34 PM IST

ಪಾಲ್ಘರ್(ಮಹಾರಾಷ್ಟ್ರ): ಬಲವಂತದ ಮತಾಂತರ ಕಾನೂನಿನ ವಿರುದ್ಧವಾಗಿದ್ದರೂ, ಮಹಾರಾಷ್ಟ್ರದಲ್ಲಿ ಆದಿವಾಸಿಗರನ್ನು ಮತಾಂತರಕ್ಕೆ ದೂಡಿದ ಆರೋಪದ ಮೇರೆಗೆ ನಾಲ್ವರು ಕ್ರಿಶ್ಚಿಯನ್​ ಧರ್ಮ ಗುರುಗಳನ್ನು ಬಂಧಿಸಲಾಗಿದೆ.

ಪಾಲ್ಘರ್​ ಜಿಲ್ಲೆಯಲ್ಲಿ ಆದಿವಾಸಿ ಮಹಿಳೆಯನ್ನು ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರ ಹೊಂದುವಂತೆ ಬಲವಂತ ಮಾಡಲಾಗುತ್ತಿತ್ತು. ಅಲ್ಲದೇ, ಆಕೆಗೆ ಹಣದ ಆಮಿಷ ತೋರಿಸಲಾಗಿತ್ತು. ಈ ಬಗ್ಗೆ ತಿಳಿದ ಹಿಂದೂಪರರು ಸ್ಥಳಕ್ಕಾಗಮಿಸಿ ವಿಚಾರಿಸಿದ್ದಾರೆ. ಈ ವೇಳೆ, ಮಹಿಳೆ ತನಗೆ ಹಣದ ಆಮಿಷ ಒಡ್ಡಿದ್ದಲ್ಲದೇ, ಮತಾಂತರ ಹೊಂದಲು ಬಲವಂತ ಮಾಡಲಾಯಿತು ಎಂದು ದೂರಿದ್ದಾರೆ.

ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ನಾಲ್ವರು ಕ್ರಿಶ್ಚಿಯನ್​ ಧರ್ಮಗುರುಗಳನ್ನು ಬಂಧಿಸಲಾಗಿದೆ. ಪಾಲ್ಘರ್ ಜಿಲ್ಲೆಯಲ್ಲಿ ಆದಿವಾಸಿಗಳೇ ಹೆಚ್ಚಿದ್ದಾರೆ. ದಹನು, ತಲಸರಿ, ಜವ್ಹಾರ್ ಮತ್ತು ವಿಕ್ರಮಗಡದಲ್ಲಿ ವಾಸಿಸುತ್ತಿರುವ ಇವರು ಶಿಕ್ಷಣದಲ್ಲಿ ಹಿಂದುಳಿದಿದ್ದು, ಮತಾಂತರ ಎಗ್ಗಿಲ್ಲದೇ ನಡೆಯುತ್ತಿದೆ.

ಓದಿ: ಹಸುಗಳೊಂದಿಗೆ ವಿಕೃತಿ ಮೆರೆಯುತ್ತಿದ್ದ ಆರೋಪಿಯ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.