ETV Bharat / bharat

ಸೀರಮ್ ಇನ್‌ಸ್ಟಿಟ್ಯೂಟ್​ನ ಅಧ್ಯಕ್ಷ ಸೈರಸ್ ಪೂನಾವಾಲಾಗೆ ಲಘು ಹೃದಯಾಘಾತ - ಸೈರಸ್ ಪೂನಾವಾಲಾಗೆ ಲಘು ಹೃದಯಾಘಾತ

Cyrus Poonawalla: ಲಸಿಕೆ ತಯಾರಕ ಕಂಪನಿಯಾದ ಸೀರಮ್ ಇನ್‌ಸ್ಟಿಟ್ಯೂಟ್​ನ ಅಧ್ಯಕ್ಷ ಸೈರಸ್ ಪೂನಾವಾಲಾ ಅವರಿಗೆ ಲಘು ಹೃದಯಾಘಾತ ಸಂಭವಿಸಿದೆ.

Cyrus Poonawalla suffers cardiac arrest; stable after angioplasty
ಸೀರಮ್ ಇನ್‌ಸ್ಟಿಟ್ಯೂಟ್​ನ ಅಧ್ಯಕ್ಷ ಸೈರಸ್ ಪೂನಾವಾಲಾಗೆ ಲಘು ಹೃದಯಾಘಾತ
author img

By ETV Bharat Karnataka Team

Published : Nov 17, 2023, 9:28 PM IST

ಪುಣೆ (ಮಹಾರಾಷ್ಟ್ರ): ಉದ್ಯಮಿ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್‌ನ ಅಧ್ಯಕ್ಷ ಡಾ. ಸೈರಸ್ ಪೂನಾವಾಲಾ ಅವರಿಗೆ ಲಘು ಹೃದಯಾಘಾತದಿಂದ ಮಹಾರಾಷ್ಟ್ರದ ಪುಣೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ನವೆಂಬರ್ 16ರಂದು ಅವರಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶರೂ ಆಗಿರುವ 82 ವರ್ಷದ ಸೈರಸ್ ಪೂನಾವಾಲಾ ಅವರಿಗೆ ನಿನ್ನೆ ಅಂದರೆ ಗುರುವಾರ ಲಘು ಹೃದಯಾಘಾತ ಸಂಭವಿಸಿದೆ. ಇದರಿಂದ ಇಂದು ಬೆಳಗ್ಗೆ ಅವರನ್ನು ಪುಣೆಯ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಿಸಲಾಗಿದೆ. ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಆಸ್ಪತ್ರೆಯ ಸಲಹೆಗಾರ ಅಲಿ ದಾರುವಾಲಾ ಹೇಳಿಕೆ ಬಿಡುಗಡೆ ಮಾಡಿದ್ದು, ಸೈರಸ್ ಪೂನಾವಾಲಾ ಅವರನ್ನು ಶುಕ್ರವಾರ ಮುಂಜಾನೆ ರೂಬಿ ಹಾಲ್ ಕ್ಲಿನಿಕ್​ಗೆ ದಾಖಲಿಸಲಾಯಿತು. ಡಾ.ಪೂರ್ವೇಜ್ ಗ್ರಾಂಟ್, ಡಾ.ಮಕಲೆ ಮತ್ತು ಡಾ.ಅಭಿಜಿತ್ ಖರ್ಡೇಕರ್ ನೇತೃತ್ವದಲ್ಲಿ ಪೂನಾವಾಲಾ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಆರೋಗ್ಯ ಉತ್ತಮವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್​ ಲಸಿಕೆ ತಯಾರಕ ಕಂಪನಿಯಾಗಿದ್ದು, ಸೈರಸ್ ಪೂನಾವಾಲಾ ಗ್ರೂಪ್‌ನ ಅಧ್ಯಕ್ಷರು ಸಹ ಆಗಿದ್ದಾರೆ.

ಇದನ್ನೂ ಓದಿ: ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಲು ಕಾರಣವೇನು?; ಇಲ್ಲಿದೆ ತಜ್ಞ ವೈದ್ಯರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.