ಆಗರ್ ಮಾಲ್ವಾ(ಮಧ್ಯಪ್ರದೇಶ): ವಿದ್ಯುತ್ ತಂತಿ ತುಂಡಾಗಿ ಅಂಗಡಿ ಮೇಲೆ ಬಿದ್ದಿದ್ದು, ಬೆಂಕಿ ಹೊತ್ತಿಕೊಂಡ ಪರಿಣಾಮ ಸಿಲಿಂಡರ್ ಸ್ಫೋಟಗೊಂಡ ಘಟನೆ ಇಲ್ಲಿನ ನಲ್ಖೇಡಾದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನದ ಹೊತ್ತಿಗೆ ಗ್ರಾಮದಲ್ಲಿ ವಿಪರೀತ ಗಾಳಿ ಬೀಸಿದ್ದು, ರಸ್ತೆ ಪಕ್ಕದಲ್ಲಿರುವ ಶಾಪ್ಗಳ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಪರಿಣಾಮ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಅಂಗಡಿಯಲ್ಲಿದ್ದ ಜನರು ಓಡಿ ಹೊರ ಬಂದಿದ್ದಾರೆ.
ಈ ವೇಳೆ ಅಂಗಡಿಯೊಂದರಲ್ಲಿದ್ದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಈ ಭಯಾನಕ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.