ಭುವನೇಶ್ವರ: ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಯ ಮೇಲಿನ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾದ ಕಾರಣ ಮೇ 7 ರ ಸಂಜೆಯ ವೇಳೆಗೆ ವಾಯುಭಾರ ಕುಸಿತವಾಗಿ 8ರ ವೇಳೆಗೆ ಚಂಡಮಾರುತವಾಗುವ ಸಾಧ್ಯತೆ ಇದೆ. ಮೇ 10ರ ವೇಳೆಗೆ ವಾಯುವ್ಯ ದಿಕ್ಕಿಗೆ ಚಲಿಸಿ ಉತ್ತರ ಆಂಧ್ರ-ಒಡಿಶಾ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
-
The #LowPressure Area over South Andaman Sea & adjoining Southeast Bay of Bengal very likely to move northwestwards, intensify into a Depression by #7th May evening and further into a #CyclonicStorm by #8th May evening. pic.twitter.com/nwoIYij348
— Meteorological Centre, Bhubaneswar (@mcbbsr) May 6, 2022 " class="align-text-top noRightClick twitterSection" data="
">The #LowPressure Area over South Andaman Sea & adjoining Southeast Bay of Bengal very likely to move northwestwards, intensify into a Depression by #7th May evening and further into a #CyclonicStorm by #8th May evening. pic.twitter.com/nwoIYij348
— Meteorological Centre, Bhubaneswar (@mcbbsr) May 6, 2022The #LowPressure Area over South Andaman Sea & adjoining Southeast Bay of Bengal very likely to move northwestwards, intensify into a Depression by #7th May evening and further into a #CyclonicStorm by #8th May evening. pic.twitter.com/nwoIYij348
— Meteorological Centre, Bhubaneswar (@mcbbsr) May 6, 2022
ಒಡಿಶಾದ ಗಂಜಾಂ, ಖುರ್ದಾ, ಪುರಿ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಮುನ್ನೆಚರಿಕೆ ನೀಡಿದ ಬೆನ್ನಲ್ಲೇ ಒಡಿಶಾ ಸರ್ಕಾರ ಶುಕ್ರವಾರ ಆಡಳಿತ ಮತ್ತು ವಿಪತ್ತು ನಿರ್ವಹಣಾ ಸಂಸ್ಥೆಗೆ ಮುನ್ನೆಚರಿಕಾ ಕ್ರಮವಹಿಸುವಂತೆ ತಿಳಿಸಿದೆ.
ಎನ್‌ಡಿಆರ್‌ಎಫ್‌ನ 17 ತಂಡಗಳು, ಒಡಿಆರ್‌ಎಫ್‌ನ 20 ತಂಡಗಳು ಮತ್ತು 175 ಅಗ್ನಿಶಾಮಕ ಸೇವೆಗಳ ತಂಡಗಳನ್ನು ಹೈ ಅಲರ್ಟ್ ಆದೇಶವನ್ನು ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ. ಜೆನಾ ಅವರು ನೀಡಿದ್ದಾರೆ.
ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ಎಸ್.ಕೆ. ಉಪಾಧ್ಯ ಅವರು, ಅಗ್ನಿಶಾಮಕ ಸೇವಾ ಸಿಬ್ಬಂದಿಯ ಎಲ್ಲಾ ರಜೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಶಿಯೋಮಿ ಸಂಸ್ಥೆ ಬ್ಯಾಂಕ್ ಖಾತೆ ಜಪ್ತಿ ಮಾಡಿದ್ದ ಇಡಿ ಕ್ರಮಕ್ಕೆ ಹೈಕೋರ್ಟ್ ತಡೆ