ತೌಕ್ತೆ: ಮುಂದಿನ ಕೆಲ ಗಂಟೆಗಳಲ್ಲಿ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲಿರುವ ತೌಕ್ತೆ ಚಂಡಮಾರುತ ಇಂದು ಮುಂಬೈ ಕರಾವಳಿ ಮೂಲಕ ಹಾದು ಸಂಜೆ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಹೀಗಾಗಿ ಮುಂಬೈನಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಬಲವಾದ ಗಾಳಿ ಬೀಸಲಿದ್ದು, ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಐಎಂಡಿ ಎಚ್ಚರಿಕೆ ಮೇರೆಗೆ ಮುಂಬೈನಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂಬೈ ಏರ್ಪೋರ್ಟ್ ಮಧ್ಯಾಹ್ನ 2 ಗಂಟೆಯವರಗೆ ಬಂದ್ ಮಾಡಲಾಗಿದೆ. ಮುಂಬೈನ ಪಶ್ಚಿಮ ಭಾಗಗಳ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮೂರು ತಂಡಗಳು ಬೀಡುಬಿಟ್ಟಿದ್ದು, ಭಾರತೀಯ ನೌಕಾಪಡೆಯ ತಂಡಗಳೂ ಸಹ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ: ಚಂಡಮಾರುತಕ್ಕೆ ನಾಲ್ವರು ಬಲಿ, 216 ಮನೆಗಳಿಗೆ ಹಾನಿ
ಮುಂಬೈ ಅಗ್ನಿಶಾಮಕ ದಳದ ಪ್ರವಾಹ ರಕ್ಷಣಾ ಘಟಕದ ಆರು ತಂಡಗಳನ್ನು ನಗರದ ಆರು ಕಡಲತೀರಗಳಲ್ಲಿ ನಿಯೋಜಿಸಲಾಗಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಐದು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಗತ್ಯವಿದ್ದಲ್ಲಿ ನಾಗರಿಕರು ಇಲ್ಲಿಗೆ ಸ್ಥಳಾಂತರವಾಗಬಹುದು ಎಂದು ತಿಳಿಸಿದೆ.
-
Very Severe Cyclonic Storm “Tauktae” over Eastcentral Arabian Sea intensified into an Extremely Severe Cyclonic Storm: Cyclone Warning & post landfall outlook for Gujarat & Diu coasts (Red message).https://t.co/nIG8rzj9Vh pic.twitter.com/DAJCsnuRVw
— India Meteorological Department (@Indiametdept) May 17, 2021 " class="align-text-top noRightClick twitterSection" data="
">Very Severe Cyclonic Storm “Tauktae” over Eastcentral Arabian Sea intensified into an Extremely Severe Cyclonic Storm: Cyclone Warning & post landfall outlook for Gujarat & Diu coasts (Red message).https://t.co/nIG8rzj9Vh pic.twitter.com/DAJCsnuRVw
— India Meteorological Department (@Indiametdept) May 17, 2021Very Severe Cyclonic Storm “Tauktae” over Eastcentral Arabian Sea intensified into an Extremely Severe Cyclonic Storm: Cyclone Warning & post landfall outlook for Gujarat & Diu coasts (Red message).https://t.co/nIG8rzj9Vh pic.twitter.com/DAJCsnuRVw
— India Meteorological Department (@Indiametdept) May 17, 2021
ವಿವಿಧ ಕೋವಿಡ್ ಕೇಂದ್ರಗಳ ಐಸಿಯುವಿನಲ್ಲಿದ್ದ 580 ರೋಗಿಗಳಲ್ಲಿ 500 ಕ್ಕೂ ಹೆಚ್ಚು ಮಂದಿಯನ್ನು ಇತರ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ನಿನ್ನೆಯಿಂದ ಮುಂಬೈನಲ್ಲಿ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ತೌಕ್ತೆ ಎಫೆಕ್ಟ್: ಕರಾವಳಿ ಜಿಲ್ಲೆಗಳಲ್ಲಿ ಮೇ 17 ರಿಂದ 20ರವರೆಗೆ ಎಲ್ಲೋ ಅಲರ್ಟ್
ಗುಜರಾತ್ನಲ್ಲಿ ಸೈಕ್ಲೋನ್ ಭೂಸ್ಪರ್ಶ ಸಾಧ್ಯತೆ
ತೌಕ್ತೆ ಚಂಡಮಾರುತವು ಮುಂಬೈ ಕರಾವಳಿ ಮೂಲಕ ಹಾದು ಗುಜರಾತ್ನೆಡೆ ಇಂದು ಸಂಜೆ ಸಾಗಲಿದ್ದು, ಗುಜರಾತ್ ಹಾಗೂ ಕೇಂದ್ರಾಡಳಿತ ಪ್ರದೇಶ ದಿಯುವಿಗೆ ಐಎಂಡಿಯು ರೆಡ್ ಅಲರ್ಟ್ ನೀಡುತ್ತಿದೆ. ಇಲ್ಲಿನ ಪ್ರದೇಶಗಳಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.
-
#CycloneAlert The cyclonic storm "Tauktae" has further intensified into an Extremely Severe Cyclonic Storm (ESCS) at 000 UTC and lay centered at 18.5N/71.5E, with a ragged eye. pic.twitter.com/pGgSnHzzIT
— India Meteorological Department (@Indiametdept) May 17, 2021 " class="align-text-top noRightClick twitterSection" data="
">#CycloneAlert The cyclonic storm "Tauktae" has further intensified into an Extremely Severe Cyclonic Storm (ESCS) at 000 UTC and lay centered at 18.5N/71.5E, with a ragged eye. pic.twitter.com/pGgSnHzzIT
— India Meteorological Department (@Indiametdept) May 17, 2021#CycloneAlert The cyclonic storm "Tauktae" has further intensified into an Extremely Severe Cyclonic Storm (ESCS) at 000 UTC and lay centered at 18.5N/71.5E, with a ragged eye. pic.twitter.com/pGgSnHzzIT
— India Meteorological Department (@Indiametdept) May 17, 2021
ತೌಕ್ತೆ ಅಬ್ಬರಕ್ಕೆ 10 ಸಾವು
ಚಂಡಮಾರುತ ತಂದಿಟ್ಟ ಅವಾಂತರದಿಂದಾಗಿ ಕರ್ನಾಟಕದಲ್ಲಿ ನಾಲ್ವರು, ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಈ ರಾಜ್ಯಗಳ ನೂರಾರು ಗ್ರಾಮಗಳಿಗೆ ಹಾನಿಯಾಗಿದೆ.