ನವದೆಹಲಿ : ಅರಬ್ಬಿ ಸಮುದ್ರದಲ್ಲಿ ಚಲಿಸುತ್ತಿರುವ ತೇಜ್ ಚಂಡಮಾರುತವು ಸಾಕಷ್ಟು ಅಪಾಯಕಾರಿಯಾಗಿದೆ. ಮುಂದಿನ 24 ಗಂಟೆಗಳಲ್ಲಿ ಇದು ಆಳವಾದ ವಾಯುಭಾರ ಕುಸಿತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಜೊತೆಗೆ, ಇದನ್ನು ವಿಎಸ್‌ಸಿಎಸ್ ಅಂದರೆ ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತ (Very Severe Cyclonic Storm) ಎಂದು ವಿವರಿಸಿದೆ.
ನೈಋತ್ಯ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ತೇಜ್ ಚಂಡಮಾರುತವು ಭಾನುವಾರದಂದು ಅತ್ಯಂತ ತೀವ್ರ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಹಾಗೂ ಒಮನ್ ಮತ್ತು ನೆರೆಯ ಯೆಮೆನ್‌ನ ದಕ್ಷಿಣ ಕರಾವಳಿಯತ್ತ ಸಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಅಕ್ಟೋಬರ್ 21 ರಂದು ರಾತ್ರಿ 11:30 ರ ಸುಮಾರಿಗೆ ಸೈಕ್ಲೋನಿಕ್ ಚಂಡಮಾರುತವಾಗಿ ನೈಋತ್ಯ ಅರೇಬಿಯನ್ ಸಮುದ್ರದ ಮೇಲೆ 330 ಕಿ.ಮೀ ಪೂರ್ವಕ್ಕೆ ಸೊಕೊಟ್ರಾ (ಯೆಮೆನ್), 690 ಕಿ. ಮೀ ಆಗ್ನೇಯ ಸಲಾಲಾ (ಒಮನ್) ಮತ್ತು 720 ಕಿ.ಮೀ ಅಲ್‌ನಲ್ಲಿ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಈಗ ಈ ಚಂಡಮಾರುತವು ಅಕ್ಟೋಬರ್ 22 ರ ಮುಂಜಾನೆ ಅತ್ಯಂತ ತೀವ್ರವಾದ ಚಂಡಮಾರುತವಾಗಿ ಬದಲಾಗಬಹುದು ಮತ್ತು ಅದರ ವೇಗವು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇದನ್ನೂ ಓದಿ : Cyclone Biparjoy : ರಾಜಸ್ಥಾನದಲ್ಲಿ ಬಿಪರ್ಜೋಯ್ ಚಂಡಮಾರುತದಿಂದ ಭಾರಿ ಮಳೆ, ಜನಜೀವನಕ್ಕೆ ಬರೆ - ವಿಡಿಯೋ
-
VSCS Tej lay centered at 0530 IST of 22nd Oct over WC & adj SW Arabian Sea about 240 km ESE of Socotra (Yemen), 600 km SSE of Salalah (Oman), and 620 km SE of Al Ghaidah (Yemen). Very likely to intensify further into an Extremely Severe Cyclonic Storm in the forenoon of 22nd Oct. pic.twitter.com/K8kMq3nUMD
— India Meteorological Department (@Indiametdept) October 22, 2023 " class="align-text-top noRightClick twitterSection" data="
">VSCS Tej lay centered at 0530 IST of 22nd Oct over WC & adj SW Arabian Sea about 240 km ESE of Socotra (Yemen), 600 km SSE of Salalah (Oman), and 620 km SE of Al Ghaidah (Yemen). Very likely to intensify further into an Extremely Severe Cyclonic Storm in the forenoon of 22nd Oct. pic.twitter.com/K8kMq3nUMD
— India Meteorological Department (@Indiametdept) October 22, 2023VSCS Tej lay centered at 0530 IST of 22nd Oct over WC & adj SW Arabian Sea about 240 km ESE of Socotra (Yemen), 600 km SSE of Salalah (Oman), and 620 km SE of Al Ghaidah (Yemen). Very likely to intensify further into an Extremely Severe Cyclonic Storm in the forenoon of 22nd Oct. pic.twitter.com/K8kMq3nUMD
— India Meteorological Department (@Indiametdept) October 22, 2023
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ಹವಾಮಾನ ಇಲಾಖೆ, "ತೇಜ್ ಚಂಡಮಾರುತವು ನೈಋತ್ಯ ಅರೇಬಿಯನ್ ಸಮುದ್ರದ ಮೇಲೆ ನಿರಂತರವಾಗಿ ಚಲಿಸುತ್ತಿದೆ. ಕಳೆದ 6 ಗಂಟೆಗಳಲ್ಲಿ ಚಂಡಮಾರುತವು ಗಂಟೆಗೆ 18 ಕಿ.ಮೀ ವೇಗದಲ್ಲಿ ಪಶ್ಚಿಮ-ವಾಯವ್ಯದ ಕಡೆಗೆ ಚಲಿಸಿದೆ. ಅಕ್ಟೋಬರ್ 25 ರ ಮುಂಜಾನೆ ಅಲ್ ಗೈದಾ (ಯೆಮೆನ್) ಮತ್ತು ಸಲಾಲಾ (ಒಮನ್) ನಡುವೆ ದಾಟುವ ಸಾಧ್ಯತೆಯಿದೆ. ಜೊತೆಗೆ, ಮುಂದಿನ 24 ಗಂಟೆಗಳಲ್ಲಿ ಇದು (VSCS) ಅತ್ಯಂತ ತೀವ್ರವಾದ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇದನ್ನೂ ಓದಿ : ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಪರ್ಜಾಯ್.. ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ - ಮಗ ಸಾವು.. ಹಲವರಿಗೆ ಗಾಯ
ಇನ್ನೊಂದೆಡೆ, ಅಕ್ಟೋಬರ್ 25ರ ವರೆಗೆ ನೈಋತ್ಯ ಅರಬ್ಬಿ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ, ಪಶ್ಚಿಮ - ಮಧ್ಯ ಅರಬ್ಬಿ ಸಮುದ್ರದಲ್ಲಿ ಸಹ ಎಚ್ಚರಿಕೆ ನೀಡಲಾಗಿದ್ದು, ಅಕ್ಟೋಬರ್ 25ರ ರಾತ್ರಿಯವರೆಗೆ ಮೀನುಗಾರರು ಈ ಪ್ರದೇಶಕ್ಕೆ ಹೋಗದಂತೆ ಮನವಿ ಮಾಡಲಾಗಿದೆ. ಪ್ರಸ್ತುತ ಸಮುದ್ರಕ್ಕೆ ಮೀನುಗಾರಿಕೆ ತೆರಳಿರುವವರು ತಕ್ಷಣ ಮರಳುವಂತೆ ತಿಳಿಸಲಾಗಿದೆ.
ಇದನ್ನೂ ಓದಿ : ಉಷ್ಣವಲಯದ ಚಂಡಮಾರುತ ಲಿಡಿಯಾ ಅಬ್ಬರಕ್ಕೆ ಮೆಕ್ಸಿಕೋ ತತ್ತರ : ದಕ್ಷಿಣ ಪೆಸಿಫಿಕ್ ಕರಾವಳಿಯಲ್ಲಿ ಭೂಕುಸಿತ..