ETV Bharat / bharat

ಮೋಚಾ ಚಂಡಮಾರುತ ಎಫೆಕ್ಟ್: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ..

"ಇದು ಆರಂಭದಲ್ಲಿ ಉತ್ತರ- ವಾಯುವ್ಯ ದಿಕ್ಕಿನಲ್ಲಿ ಮೇ 11ರವರೆಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. ನಂತರ, ಇದು ಕ್ರಮೇಣ ಮರುಕಳಿಸುವ ಹಾಗೂ ಉತ್ತರ- ಈಶಾನ್ಯಕ್ಕೆ ಬಾಂಗ್ಲಾದೇಶ- ಮ್ಯಾನ್ಮಾರ್ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ" ಎಂದು ಐಎಂಡಿ ಹೇಳಿದೆ.

Cyclone Mocha
ಮೋಚಾ ಚಂಡಮಾರುತ ಎಫೆಕ್ಟ್: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ..
author img

By

Published : May 8, 2023, 11:04 PM IST

ಭುವನೇಶ್ವರ: ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ವಾಯುಭಾರ ಕುಸಿತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮಾಹಿತಿ ನೀಡಿದೆ.

ಈ ವ್ಯವಸ್ಥೆಯು ಮೇ 9ರ ಸುಮಾರಿಗೆ ಆಯಾ ಪ್ರದೇಶಗಳಲ್ಲಿ ವಾಯುಭಾರ ಕುಸಿತವಾಗಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮೇ 10ರಂದು ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಪೂರ್ವ ಮಧ್ಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಪಕ್ಕದ ಪ್ರದೇಶಗಳಲ್ಲಿ ಮೋಚಾ ಚಂಡಮಾರುತ ಅಬ್ಬರ ತೀವ್ರಗೊಳ್ಳುತ್ತದೆ. ಮೇ 11ರವರೆಗೆ ಉತ್ತರ-ವಾಯುವ್ಯವಾಗಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಮತ್ತು ಕ್ರಮೇಣ ಮರುಕಳಿಸುತ್ತದೆ. ಉತ್ತರ-ಈಶಾನ್ಯ ಕಡೆಗೆ ಬಾಂಗ್ಲಾದೇಶ-ಮ್ಯಾನ್ಮಾರ್ ಕರಾವಳಿಯ ಕಡೆಗೆ ಚಲಿಸುತ್ತದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣ: ಸಿಸೋಡಿಯಾಗೆ ಮೇ 23ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್..

ಹವಾಮಾನ ತಜ್ಞರು ಹೇಳಿದ್ದೇನು?: ಸದ್ಯ ಮೋಚಾ ಚಂಡಮಾರುತದಿಂದ ಅಪಾಯವಿಲ್ಲ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಕಡಿಮೆ ಒತ್ತಡದ ಪ್ರದೇಶದ ರಚನೆಯಾದ ನಂತರ, ಅದು ತೀವ್ರ ಸ್ವರೂಪ ಪಡೆದುಕೊಳ್ಳು ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ಈ ಹಿಂದಯೇ ಮುನ್ಸೂಚನೆ ನೀಡಿತ್ತು. ಮಧ್ಯಮ-ಶ್ರೇಣಿಯ ಹವಾಮಾನ ಮುನ್ಸೂಚನೆಗಳ ಯುರೋಪಿಯನ್ ಕೇಂದ್ರವು(ECMWF) ಚಂಡಮಾರುತ ಮಾರ್ಗದ ಬದಲಾವಣೆ ಮತ್ತು ಸಂಭವನೀಯತೆ ಬಗ್ಗೆ ತಿಳಿಸಿದೆ. ಮ್ಯಾನ್ಮಾರ್ ಬದಲಿಗೆ, ಮೇ 14ರಿಂದ 15ರ ಸುಮಾರಿಗೆ ಭಾರತದ ಪೂರ್ವ ಕರಾವಳಿಯ ಹತ್ತಿರ ಬಾಂಗ್ಲಾದೇಶದ ಕರಾವಳಿಯ ಕಡೆಗೆ ಹೋಗುತ್ತಿದೆ. ಜಿಎಫ್ಎಸ್​ ಮಾದರಿಯ ಪ್ರಕಾರ, ಚಂಡಮಾರುತವು ಮಾರ್ಗವನ್ನು ಬದಲಾಯಿಸುತ್ತಿದೆ. ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಗಡಿಯತ್ತ ಚಲಿಸುತ್ತಿದೆ. ಇತ್ತೀಚಿನ ಮುನ್ಸೂಚನೆಯ ಪ್ರಕಾರ ಚಂಡಮಾರುತವು ಕನಿಷ್ಠ ಇಎಸ್​ಸಿಎಸ್​ (ಕ್ಯಾಟ್-4) ತೀವ್ರತೆಯನ್ನು ಹೊಂದಿರುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿತ, ಕಾರ್​ಗಳು ಜಖಂ..

'ಮೋಚಾ' ಅಂದ್ರೆ ಏನು ಗೊತ್ತಾ?: ಚಂಡಮಾರುತ ತೀವ್ರಗೊಂಡ ನಂತರ, ಇದನ್ನು ಮೋಚಾ ಚಂಡಮಾರುತ ಎಂದು ಕರೆಯಲಾಗುವುದು. ಈ ಹೆಸರನ್ನು ಯೆಮೆನ್ ಸೂಚಿಸಿದೆ. ಇದು 500 ವರ್ಷಗಳ ಹಿಂದೆ ಜಗತ್ತಿಗೆ ಕಾಫಿಯನ್ನು ಪರಿಚಯಿಸಿದ ಕೆಂಪು ಸಮುದ್ರದ ಕರಾವಳಿಯಲ್ಲಿರುವ ಯೆಮೆನ್ ದೇಶದ ಮೋಚಾ (ಅಥವಾ ಮೋಖಾ)ನಿಂದ ಹುಟ್ಟಿಕೊಂಡಿದೆ. ಮೋಚಾವು ಚಾಕೊಲೇಟ್ ರುಚಿಯ ಬೆಚ್ಚಗಿನ ಪಾನೀಯವಾಗಿದ್ದು, ಅದು ಕಾಫಿಯ ರೂಪಾಂತರ ಪಾನೀಯ. "ಇದು ಆರಂಭದಲ್ಲಿ ಉತ್ತರ- ವಾಯುವ್ಯ ದಿಕ್ಕಿನಲ್ಲಿ ಮೇ 11ರವರೆಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ. ನಂತರ, ಇದು ಕ್ರಮೇಣ ಮರುಕಳಿಸುವ ಹಾಗೂ ಉತ್ತರ- ಈಶಾನ್ಯಕ್ಕೆ ಬಾಂಗ್ಲಾದೇಶ- ಮ್ಯಾನ್ಮಾರ್ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ" ಎಂದು ಐಎಂಡಿ ಹೇಳಿದೆ.

ಇದನ್ನೂ ಓದಿ: ಝೋಜಿ ಲಾ ದಲ್ಲಿ ಹಿಮಕುಸಿತ.. ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ನಿಂತ ಸೇನೆ

ಇದನ್ನೂ ಓದಿ: ಹೆದ್ದಾರಿಯಲ್ಲಿ ಟ್ರಾಫಿಕ್​ ಜಾಮ್​ : ನೀಟ್​ ಪರೀಕ್ಷಾ ಕೇಂದ್ರಕ್ಕೆ ಆಗಮಿಸಲು ಪರದಾಡಿದ ವಿದ್ಯಾರ್ಥಿನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.