ETV Bharat / bharat

ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಮೋಚಾ ಚಂಡಮಾರುತ, ವಿಪತ್ತು ಎದುರಿಸಲು ಎನ್‌ಡಿಆರ್‌ಎಫ್ ತಂಡ ಸಜ್ಜು - ಭಾರತೀಯ ಹಮಾಮಾನ ಇಲಾಖೆ

ಬಂಗಾಳಕೊಲ್ಲಿಯ ಆಗ್ನೇಯ ಹಾಗೂ ಮಧ್ಯ ಪ್ರದೇಶಗಳಲ್ಲಿ ಮೋಚಾ ಚಂಡಮಾರುತ ಉದ್ಭವಿಸಿದ್ದು, ಗಂಟೆಗೆ 150-160 ಕಿ ಮೀ ವೇಗದಲ್ಲಿ ಗಾಳಿ ಬೀಸಲಿದೆ. ಶನಿವಾರ ಪಶ್ಚಿಮಬಂಗಾಳ, ತ್ರಿಪುರಾ, ಮಿಜೋರಾಂ ನಾಗಾಲ್ಯಾಂಡ್, ಮಣಿಪುರ, ಅಸ್ಸೋಂನಲ್ಲಿ ರಾಜ್ಯದಲ್ಲಿ ಭಾರಿ ಮಳೆ ಬೀಳುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Cyclone Mocha is hit hard
ತೀವ್ರವಾಗಿ ಅಪ್ಪಳಿಸಲಿರುವ ಮೋಚಾ ಚಂಡಮಾರುತ
author img

By

Published : May 12, 2023, 5:12 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬಂಗಾಳಕೊಲ್ಲಿಯ ಆಗ್ನೇಯ ಹಾಗೂ ಮಧ್ಯ ಪ್ರದೇಶಗಳಲ್ಲಿ ಶುಕ್ರವಾರ ಬೆಳಗ್ಗೆ ಉದ್ಬವಿಸಿರುವ ಮೋಚಾ ಚಂಡಮಾರುತವು, ಭಾನುವಾರದ ವೇಳೆಗೆ ಕ್ರಮೇಣವಾಗಿ ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಪೋರ್ಟ್​ಬ್ಲೇರ್​ನಿಂದ 520 ಕಿಮೀ ದೂರದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಶುಕ್ರವಾರ ತೀವ್ರ ಸ್ವರೂಪ ಪಡೆಯಲಿದ್ದು, ಮಂಜಾಗ್ರತೆ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಪಶ್ಚಿಮ ಬಂಗಾಳದ ದಿಘಾದಲ್ಲಿ ಎಚ್ಚರಿಕೆ ನೀಡಿದ ನಂತರ 8 ತಂಡಗಳು ಮತ್ತು 200 ರಕ್ಷಕರನ್ನು ನಿಯೋಜಿಸಲಾಗಿದೆ.

ಎನ್‌ಡಿಆರ್‌ಎಫ್‌ನ 2ನೇ ಬೆಟಾಲಿಯನ್ ಕಮಾಂಡೆಂಟ್ ಗುರ್ಮಿಂದರ್ ಸಿಂಗ್ ಮಾತನಾಡಿ, ಶುಕ್ರವಾರ ಮೋಚಾ ಚಂಡಮಾರುತ ಉದ್ಬವಿಸಿ ಮೇ 14 ರಂದು ಅದು ಸೂಪರ್ ಸೈಕ್ಲೋನ್ ಆಗಿ ತೀವ್ರಗೊಳ್ಳುತ್ತದೆ. ಸೈಕ್ಲೋನ್ ಸಮಸ್ಯೆ ಎದುರಿಸಲು 8 ತಂಡ ರಚಿಸಿ, ಈಗಾಗಲೇ 200 ಎನ್‌ಡಿಆರ್‌ಎಫ್‌ನ ರಕ್ಷಕರನ್ನು ನಿಯೋಜಿಸಿದ್ದು, ಇನ್ನೂ 100 ರಕ್ಷಕರನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಧ್ಯ ಬಂಗಾಳ ಕೊಲ್ಲಿಯಲ್ಲಿ ಶುಕ್ರವಾರ ಸಂಜೆ ಮೋಚಾ ತೀವ್ರ ಚಂಡಮಾರುತವಾಗಿ ಪರಿಣಮಿಸಿದ್ದು, ಮೇ 13 ರಂದು ಗರಿಷ್ಠ ತೀವ್ರತೆ ಪಡೆದುಕೊಳ್ಳಲಿದೆ. ಭಾರತೀಯ ಹಮಾಮಾನ ಇಲಾಖೆಯು ಕ್ಷಣ ಕ್ಷಣಕ್ಕೂ ಮೋಚಾ ಚಂಡ ಮಾರುತ ಬಗ್ಗೆ ನಿಗಾ ವಹಿಸಲಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಸಂಜೀವ್ ದ್ವಿವೇದಿ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಕಾರ್ಯನಿರ್ವಹಿಸಲಿದೆ. ಐಸಿಜಿಯೂ ಮೋಚಾ ಚಂಡಮಾರುತದ ಮಾಹಿತಿಯನ್ನು ಮೀನುಗಾರರು ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಲಿದೆ. ಗಾಳಿಯೂ ಗಂಟೆಗೆ 150-160 ಕಿಮೀ ವೇಗದಲ್ಲಿ ಬೀಸಲಿದೆ.

ಚಂಡಮಾರುತದ ಹಿನ್ನೆಲೆ ಭಾರಿ ಗಾಳಿ ಸಹಿತ ಮಳೆಯಾಗಲಿದೆ. ಮೋಚಾ ಚಂಡಮಾರುತವು ಮೇ 14ರ ವೇಳೆಗೆ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್​ಗೆ ತಲುಪಲಿದೆ. ಶನಿವಾರ ಪಶ್ಮಿಮ ಬಂಗಾಳ, ತ್ರಿಪುರಾ, ಮಿಜೋರಾಂ ನಾಗಾಲ್ಯಾಂಡ್, ಮಣಿಪುರ, ಅಸ್ಸೋಂ ರಾಜ್ಯಗಳಲ್ಲಿ ಭಾರಿ ಮಳೆ ಬೀಳುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂಓದಿ:ದೇಶದ ಗಮನ ಸೆಳೆದ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ: ಜಾತಿ ಲೆಕ್ಕಾಚಾರ, ಬೆಟ್ಟಿಂಗ್ ಭರಾಟೆ ಜೋರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.