ETV Bharat / bharat

Cyclone Biparjoy: ಚಂಡಮಾರುತಕ್ಕೆ ನಲುಗಿದ ಗುಜರಾತ್​..300 ಕಂಬಗಳು ನಾಶ, 900 ಗ್ರಾಮಗಳಿಗೆ ವಿದ್ಯುತ್​ ಕಟ್​

Cyclone Biparjoy: ಚಂಡಮಾರುತ ಬಿಪರ್‌ಜಾಯ್​​ ಎಫೆಕ್ಟ್‌ನಿಂದಾಗಿ ಗುಜರಾತ್‌ನ ಕಚ್​​ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಸುಮಾರು 900 ಹಳ್ಳಿಗಳಿಗೆ ವಿದ್ಯುತ್‌ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ.

Power cut In more than 900 Villages  Power cut In more than 900 Villages In Gujarat  Cyclone Biparjoy  ಚಂಡಮಾರುತಕ್ಕೆ ನಲುಗಿದ ಗುಜರಾತ್  900 ಗ್ರಾಮಗಳಿಗೆ ವಿದ್ಯುತ್​ ಕಟ್​ ಧರೆಗುರುಳಿದ 300 ವಿದ್ಯುತ್​ ಕಂಬಗಳು  ರೈಲುಗಳ ಸಂಚಾರ ರದ್ದು  ಸಿಎಂಗೆ ಪ್ರಧಾನಿ ದೂರವಾಣಿ ಕರೆ  ಪ್ರಾಣಿಗಳನ್ನು ರಕ್ಷಿಸಲು ತೆರಳಿದ್ದ ತಂದೆ ಮಗ ಸಾವು
ಚಂಡಮಾರುತಕ್ಕೆ ನಲುಗಿದ ಗುಜರಾತ್
author img

By

Published : Jun 16, 2023, 2:28 PM IST

Updated : Jun 16, 2023, 7:07 PM IST

ಚಂಡಮಾರುತಕ್ಕೆ ನಲುಗಿದ ಗುಜರಾತ್

ಕಚ್​, ಗುಜರಾತ್​: ಅರಬ್ಬಿ ಸಮುದ್ರದಲ್ಲಿ ರೂಪುಗೊಂಡ ಬಿಪರ್‌ಜಾಯ್​​ ಚಂಡಮಾರುತ (Cyclone Biparjoy) ಗುರುವಾರ ಮಧ್ಯರಾತ್ರಿಯ ನಂತರ ಗುಜರಾತ್‌ನ ಕಚ್ ಪ್ರದೇಶದ ಕರಾವಳಿಯನ್ನು ದಾಟಿದೆ. ಪ್ರಸ್ತುತ ಬಿಪರ್‌ಜಾಯ್​​ ತೀವ್ರ ಚಂಡಮಾರುತವಾಗಿ ದುರ್ಬಲಗೊಂಡಿದ್ದು, ಈಶಾನ್ಯ ದಿಕ್ಕಿನಲ್ಲಿರುವ ಕರಾಚಿ ಕಡೆಗೆ ಚಲಿಸುತ್ತಿದೆ.

ಕಚ್​ನಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ, ಕರಾವಳಿಯನ್ನು ದಾಟುವ ಭರದಲ್ಲಿ ಚಂಡಮಾರುತ ಗುಜರಾತ್​ನಲ್ಲಿ ಅವಾಂತರ ಸೃಷ್ಟಿಸಿದೆ. ಗಂಟೆಗೆ 140 ಕಿಮೀ ವೇಗದಲ್ಲಿ ಬೀಸಿದ ಬಲವಾದ ಗಾಳಿಯಿಂದಾಗಿ ಹಲವು ಪ್ರದೇಶಗಳಲ್ಲಿ ಮರಗಳು ಉರುಳಿ ಬಿದ್ದಿವೆ. ವಿದ್ಯುತ್​ ಕಂಬಗಳು ನೆಲಕ್ಕುರುಳಿರುವುದರಿಂದ ನೂರಾರು ಗ್ರಾಮಗಳಿಗೆ ಕರೆಂಟ್​ ಸಂಪರ್ಕ ಕಡಿತಗೊಂಡಿದೆ. ಹಠಾತ್ ಪ್ರವಾಹದಿಂದ ತಗ್ಗು ಪ್ರದೇಶಗಳು ಮುಳುಗಡೆಯಾಗಿವೆ.

ಚಂಡಮಾರುತದ ಪ್ರಭಾವದಿಂದಾಗಿ ಕಚ್​ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮಾಂಡವಿಯ ಹಲವು ಭಾಗಗಳಲ್ಲಿ ವಸತಿ ಸಂಕೀರ್ಣಗಳು ಮತ್ತು ಆಸ್ಪತ್ರೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಧರೆಗುರುಳಿದ 300 ವಿದ್ಯುತ್​ ಕಂಬಗಳು: ಕರಾವಳಿ ಭಾಗದ ಸುಮಾರು 940 ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ರಸ್ತೆಗಳಲ್ಲಿ ಮರಗಳು ಬಿದ್ದಿವೆ. ಸುಮಾರು 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಹೀಗಾಗಿ ಸುಗಮ ಸಂಚಾರ ಮತ್ತು ಗ್ರಾಮಗಳಿಗೆ ವಿದ್ಯುತ್​ ಪೂರೈಸಲು ಆಯಾ ಇಲಾಖೆಯ ಸಿಬ್ಬಂದಿಗಳು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ರೈಲುಗಳ ಸಂಚಾರ ರದ್ದು..: ಚಂಡಮಾರುತದ ಪ್ರಭಾವದಿಂದ ಪಶ್ಚಿಮ ರೈಲ್ವೆ ಹಲವು ಸೇವೆಗಳನ್ನು ರದ್ದುಗೊಳಿಸಿದೆ. ಹಲವು ರೈಲುಗಳು ತಡವಾಗಿ ಓಡುತ್ತಿದ್ದರೆ, ಇನ್ನು ಕೆಲವನ್ನು ಮೊಟಕುಗೊಳಿಸಲಾಗಿದೆ. ಈ ಬಗ್ಗೆ ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಪ್ರಾಣಿಗಳನ್ನು ರಕ್ಷಿಸಲು ತೆರಳಿದ್ದ ತಂದೆ ಮಗ ಸಾವು: ಭಾವನಗರದಲ್ಲಿ ಪ್ರವಾಹದಲ್ಲಿ ಸಿಲುಕಿದ ಮೇಕೆಗಳನ್ನು ರಕ್ಷಿಸಲು ಹೋಗಿ ತಂದೆ ಮತ್ತು ಮಗ ಪ್ರಾಣ ಕಳೆದುಕೊಂಡಿದ್ದಾರೆ. ವಿವಿಧೆಡೆ 23 ಮಂದಿ ಗಾಯಗೊಂಡಿದ್ದಾರೆ. 24 ಜಾನುವಾರುಗಳು ಸಾವನ್ನಪ್ಪಿವೆ. ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸಿಎಂಗೆ ಪ್ರಧಾನಿ ದೂರವಾಣಿ ಕರೆ: ಪ್ರವಾಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಚಂಡಮಾರುತದ ಪರಿಸ್ಥಿತಿಗಳ ಬಗ್ಗೆ ವಿಚಾರಿಸಿದರು. ಗಿರ್ ಅರಣ್ಯಗಳಲ್ಲಿ ಕಾಡು ಪ್ರಾಣಿಗಳ ಸುರಕ್ಷತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಪರಿಹಾರ ಕಾರ್ಯಕ್ಕೆ ಕೇಂದ್ರ ಸಿದ್ಧವಾಗಲಿದೆ ಎಂದು ಭರವಸೆ ನೀಡಿದರು.

ರಾಜಸ್ಥಾನದಲ್ಲೂ ಚಂಡಮಾರುತದ ಪ್ರಭಾವ ಸಾಧ್ಯತೆ: ಇಂದು ಸಂಜೆ ರಾಜಸ್ಥಾನದಲ್ಲೂ ಚಂಡಮಾರುತದ ಪ್ರಭಾವ ಬೀರಲಿದೆ. ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬರ್ಮರ್ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಚಂಡಮಾರುತದ ಪ್ರಭಾವದಿಂದ ಮುಂಬೈನಲ್ಲಿ ಮಳೆಯಾಗುತ್ತಿದೆ. ಬಿಪರ್​ಜೋಯ್​​ ಚಂಡಮಾರುತದಿಂದ ಗಾಳಿ ಸಹಿತ ಮಳೆಯಾಗುತ್ತಿದ್ದು, ಜನಜೀವನ ತೀವ್ರವಾಗಿ ಅಸ್ತವ್ಯಸ್ತಗೊಂಡಿದೆ. ಇನ್ನು ತೊಂದರೆಗೀಡಾದ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ಓದಿ: ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಪರ್​ಜಾಯ್​.. ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ - ಮಗ ಸಾವು.. ಹಲವರಿಗೆ ಗಾಯ

Last Updated : Jun 16, 2023, 7:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.