ETV Bharat / bharat

ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ: ಪತ್ತೆ ಹಚ್ಚಿದ ಸೈಬರ್ ಪೊಲೀಸರು

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಿಮ್ ಬಾಕ್ಸ್ ದಂಧೆಯನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲದೇ ಇದರ ಮಾಸ್ಟರ್​ ಮೈಂಡ್​ ವಿಶಾಲ್ ಖಂಡೇಲ್ವಾಲ್​ನನ್ನು ಬಂಧಿಸಿದ್ದಾರೆ.

Cyber Police unearths SIM box racket
ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ
author img

By

Published : Sep 14, 2022, 6:36 PM IST

ಭುವನೇಶ್ವರ: ಕಟಕ್‌ನ ಕ್ರೈಂ ಬ್ರಾಂಚ್‌ನ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು, ಮಯೂರ್‌ಭಂಜ್ ಜಿಲ್ಲೆಯ ಖುಂಟಾ ಪೊಲೀಸ್ ವ್ಯಾಪ್ತಿಯ ಭಂಡಗಾಂವ್ ಗ್ರಾಮದಲ್ಲಿ ಸಿಮ್ ಬಾಕ್ಸ್ ದಂಧೆ ನಡೆಸುತ್ತಿರುವುದನ್ನು ಪತ್ತೆಹಚ್ಚಿದ್ದಾರೆ. ವಿಶಾಲ್ ಖಂಡೇಲ್ವಾಲ್ ಅಲಿಯಾಸ್ ಜೊಂಟಿ ಈ ಪ್ರಕರಣದ ಮಾಸ್ಟರ್​ ಮೈಂಡ್​ ಎಂದು ಗುರುತಿಸಲಾಗಿದೆ. ತಪಸ್ ಕುಮಾರ್ ಪಾತ್ರ, ನಿಗಮ್ ಪತ್ರ, ಸುಧನ್ಸು ದಾಸ್, ಅಜು ಪಾತ್ರ ಮತ್ತು ಅಜಯ್ ಕುಮಾರ್ ಪಾತ್ರ ಎಂಬುವವರನ್ನು ಬಂಧಿಸಲಾಗಿದೆ.

ವಿವಿಧ ಸ್ಥಳಗಳಲ್ಲಿ ದಾಳಿ: ದೂರಸಂಪರ್ಕ ಇಲಾಖೆ ನೀಡಿದ ಸುಳಿವಿನ ಮೇರೆಗೆ ಒಡಿಶಾ ಅಪರಾಧ ವಿಭಾಗದ ಪೊಲೀಸರು ಬೆಟಾನಾಟಿ ಮತ್ತು ಬರಿಪಾಡಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಆರಂಭದಲ್ಲಿ, ಒಬ್ಬ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ಆತ ನೀಡಿದ ಮಾಹಿತಿ ಆಧಾರದ ಮೇಲೆ ಇತರ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಹೆಚ್ಚಿನ ಸಂಖ್ಯೆಯ ಸಿಮ್‌ಗಳು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಮ್ ಬಾಕ್ಸ್ ದಂಧೆ ಪತ್ತೆ ಹಚ್ಚಿದ ಸೈಬರ್ ಪೊಲೀಸರು

ಸೈಬರ್ ಪೊಲೀಸರಿಗೆ ದೂರು: ವರದಿ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಜನರನ್ನು ವಂಚಿಸಲು ಸಿಮ್ ಬಾಕ್ಸ್‌ಗಳಲ್ಲಿ (ಯಂತ್ರ ಆಧಾರಿತ ಸಂಖ್ಯೆಗಳು) ಹೆಚ್ಚಿನ ಸಂಖ್ಯೆಯ ಸಿಮ್‌ಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿ ಟೆಲಿ ಕಮ್ಯುನಿಕೇಷನ್ಸ್ ಇಲಾಖೆ, ಸಂಪರ್ಕ ಸಚಿವಾಲಯ, ಜಿಒಎಲ್​​ ಸೆಪ್ಟೆಂಬರ್ 12 ರಂದು ಸೈಬರ್ ಪೊಲೀಸರಿಗೆ ದೂರು ನೀಡಿತ್ತು.

ಈ ಸಿಮ್ ಬಾಕ್ಸ್‌ಗಳು ಮತ್ತು ಮೊಬೈಲ್ ಸಂಖ್ಯೆಗಳಿಂದ ಹೆಚ್ಚಿನ ಸಂಖ್ಯೆಯ MTNL KYC ವಂಚನೆ SMS ಗಳನ್ನು ರಚಿಸಲಾಗುತ್ತಿದೆ. ಸಂಖ್ಯೆಗಳು ಬಿಹಾರ ಮತ್ತು ಒಡಿಶಾದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಸಿಮ್ ಬಾಕ್ಸ್‌ಗಳಿಂದ ಹೆಚ್ಚಿನ ಸಂಖ್ಯೆಯ KYC - ಸಂಬಂಧಿತ ವಂಚನೆ ಸಂದೇಶಗಳನ್ನು ಜನರಿಗೆ ಕಳುಹಿಸಲಾಗಿದೆ. ಗ್ಯಾಂಗ್ ಸದಸ್ಯರು ಒಡಿಶಾ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಕಲಿ ಸ್ನೇಹಿತನ ಹೆಸರಿನಲ್ಲಿ ವಾಟ್ಸಾಪ್ ಸಂದೇಶ, ಒಂದು ಲಕ್ಷ ರೂ. ವಂಚಿಸಿದ ಕಿಲಾಡಿಗಳು..

ಇದಕ್ಕೂ ಮೊದಲು ಜುಲೈ 2017 ರಲ್ಲಿ, ಒಡಿಶಾ ಪೊಲೀಸರು ಬರ್ಹಮ್‌ಪುರದಲ್ಲಿ ಇದೇ ರೀತಿಯ ದಂಧೆಯನ್ನು ಭೇದಿಸಿದ್ದರು ಮತ್ತು ನಾಲ್ವರನ್ನು ಬಂಧಿಸಿದ್ದರು.

ಸಿಮ್ ಬಾಕ್ಸ್ ವಂಚನೆ ಎಂದರೇನು?: ಸಿಮ್ ಬಾಕ್ಸ್ ನೂರಾರು ಸಿಮ್ ಕಾರ್ಡ್‌ಗಳನ್ನು ಇರಿಸಬಹುದಾದ ಮತ್ತು ಕಂಪ್ಯೂಟರ್ ಮೂಲಕ ನಿಯಂತ್ರಿಸಬಹುದಾದ ಸಾಧನವಾಗಿದೆ.

Cyber Police unearths SIM box racket
ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ

ಸಿಮ್ ಬಾಕ್ಸ್ ವಂಚನೆಯು ಜಾಗತಿಕವಾಗಿ ಟೆಲಿಕಾಂ ಕಾರ್ಯಾಚರಣೆಗಳು ಎದುರಿಸುತ್ತಿರುವ ಅತ್ಯಂತ ಬೇಡಿಕೆಯ ಸವಾಲುಗಳಲ್ಲಿ ಒಂದಾಗಿದೆ. ಸಿಮ್ ಬಾಕ್ಸ್ ವಂಚನೆಯು ಇಂಟರ್‌ನೆಟ್ ಮೂಲಕ ಸೆಲ್ಯುಲಾರ್ ಸಾಧನಕ್ಕೆ ಅಂತಾರಾಷ್ಟ್ರೀಯ ಕರೆಗಳನ್ನು ತಿರುಗಿಸುತ್ತದೆ.

ಸಿಮ್ ಬಾಕ್ಸ್ ಎಂದು ಕರೆಯಲ್ಪಡುವ ಈ ಸಾಧನವು ನೂರಾರು ಕಡಿಮೆ - ವೆಚ್ಚದ ಅಥವಾ ಪಾವತಿಸದ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಸ್ಥಳೀಯ ಕರೆಗಳಾಗಿ ಸಂಪರ್ಕಗಳನ್ನು ನೆಟ್‌ವರ್ಕ್‌ಗೆ ಹಿಂತಿರುಗಿಸುತ್ತದೆ. ಇವುಗಳನ್ನು ಹೆಚ್ಚಾಗಿ ನಕಲಿ ಗುರುತುಗಳೊಂದಿಗೆ ಪಡೆಯಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.