ETV Bharat / bharat

ಇಂದು ಕಾಂಗ್ರೆಸ್ ಸಭೆ; ಪಕ್ಷದ ಆಂತರಿಕ ಚುನಾವಣೆ ಕುರಿತು ನಡೆಯಲಿದೆಯಾ ಚರ್ಚೆ?

ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆ ವಿಚಾರ ಸೇರಿದಂತೆ ಪಕ್ಷದ ಆಂತರಿಕ ಚುನಾವಣೆಗೆ ಪಕ್ಷದಲ್ಲಿ ಹೆಚ್ಚಿನ ಬೇಡಿಕೆಯಿದೆ. ಪಕ್ಷದ ಬಲವರ್ಧನೆಗೆ ಆಂತರಿಕ ಚುನಾವಣೆಯ ಅಗತ್ಯ ಕೂಡಾ ಹೆಚ್ಚಾಗಿಯೇ ಇದೆ. ಆದ್ರೆ ಮುಂದಿನ ಲೋಕಸಭೆ ಚುನಾವಣೆ ಮತ್ತು ಕೋವಿಡ್ ಈ ಚುನಾವಣೆಗೆ ಅಡ್ಡಿಯಾಗಲಿದೆ.

author img

By

Published : Jan 22, 2021, 12:14 PM IST

CWC meet: Will Congress gets its President soon or electoral process be further delayed?
ಇಂದು ಕಾಂಗ್ರೆಸ್ ಸಭೆ; ಪಕ್ಷದ ಆಂತರಿಕ ಚುನಾವಣೆ ಕುರಿತು ನಡೆಯಲಿದೆಯಾ ಚರ್ಚೆ?

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಇಂದು ನಡೆಯಲಿದೆ. ಎಲ್ಲರ ಗಮನ ಪಕ್ಷದ ಆಂತರಿಕ ಚುನಾವಣೆ ಮೇಲಿದ್ದು, ಈ ವಿಚಾರದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಹೌದು, ಈ ಬಗ್ಗೆ ಇಂದೇ ನಿರ್ಧಾರವಾಗಲಿದೆಯೋ ಅಥವಾ ಇನ್ನೂ ಕೆಲ ಸಮಯಗಳ ಕಾಲ ಮುಂದೂಡಿಕೆಯಾಗಲಿದೆಯೋ ಎನ್ನುವ ಗೊಂದಲ ಎಲ್ಲರಲ್ಲೂ ಇದೆ.

ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆ ವಿಚಾರ ಸೇರಿದಂತೆ ಆಂತರಿಕ ಚುನಾವಣೆಗೆ ಪಕ್ಷದಲ್ಲಿ ಹೆಚ್ಚಿನ ಬೇಡಿಕೆಯಿದೆ. ಪಕ್ಷದ ಬಲವರ್ಧನೆಗೆ ಆಂತರಿಕ ಚುನಾವಣೆಯ ಅಗತ್ಯ ಕೂಡಾ ಹೆಚ್ಚಾಗಿಯೇ ಇದೆ. ಆದ್ರೆ ಮುಂದಿನ ಲೋಕಸಭೆ ಚುನಾವಣೆ ಮತ್ತು ಕೋವಿಡ್ ಈ ಚುನಾವಣೆಗೆ ಅಡ್ಡಿಯಾಗಲಿದೆ.

ಪಕ್ಷದ ಆಂತರಿಕ ಚುನಾವಣೆ ಒಂದು ದೀರ್ಘ ಪ್ರಕ್ರಿಯೇ ಎಂದೇ ಹೇಳಬಹುದು. ​​​ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಪಕ್ಷ ಮುಂದಿನ ಲೋಕಸಭೆ ಚುನಾವಣೆ ಕುರಿತು ಗಮನ ಹರಿಸಬೇಕಾಗಿದೆ. ಒಂದು ವೇಳೆ, ಈ ಸಮಯದಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಿದರೆ ಗಮನ ಬೇರೆಡೆಗೆ ತಿರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.

ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಕಳೆದ ಆಗಸ್ಟ್​ನಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು, ನಂತರ ಸಮಗ್ರ ಅಧಿವೇಶನ ಕರೆಯಲಾಗುವುದು ಎಂದು ನಿರ್ಧರಿಸಿತ್ತು. ಆದ್ರೆ ಕೋವಿಡ್​ ಕಾರಣದಿಂದ ಈ ಪ್ರಕ್ರಿಯೆ ಮುಂದೂಡುತ್ತಲೇ ಬಂದಿದೆ. ಈಗಲೂ ಚುನಾವಣೆ ನಡೆಯುತ್ತದೆಯೋ ಅಥವಾ ಮೇಲೆ ತಿಳಿಸಿದಂತೆ ಹಲವು ಕಾರಣಗಳಿಂದ ಮುಂದೂಡಿಕೆಯಾಗಲಿದೆಯೋ ಎಂಬುದು ಇಂದು ತಿಳಿಯಲಿದೆ.

ಕಾಂಗ್ರೆಸ್​ನ ಪ್ರಮುಖ ನಾಯಕರೊಬ್ಬರು ಈ ಕುರಿತು ಮಾತನಾಡಿದ್ದು, ಸುಮಾರು 1,400 ಎಐಸಿಸಿ ಸದಸ್ಯರಿದ್ದಾರೆ. ಈ ಕುರಿತು ಸಭೆ ಕರೆದರೆ 5,000 - 6,000 ಜನರು ಒಂದೆಡೆ ಸೇರುವ ಸಂಭವವಿದೆ. ಅದರಿಂದ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದಂತಾಗುತ್ತದೆ. ಹಾಗಾಗಿ ಮುಂದಿನ ಕ್ರಮಗಳ ಕುರಿತು ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.