ETV Bharat / bharat

ನೀಟ್​, ಜೆಇಇ ಮತ್ತು ಸಿಯುಇಟಿ ಪರೀಕ್ಷೆ ವಿಲೀನದ ಪ್ರಸ್ತಾವನೆ ಇಲ್ಲ: ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ

ನೀಟ್​, ಜೆಇಇ ಮೇನ್ಸ್​ ಹಾಗೂ ಸಿಯುಇಟಿ ಮೂರು ಪರೀಕ್ಷೆಗಳನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಮುಂದಿನ ವರ್ಷವೂ ಅಂತಹ ವಿಲೀನ ಇರುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

cuet-neet-and-jee-will-not-merge-education-minister-dharmendra-pradhan
ನೀಟ್​, ಜೆಇಇ ಮತ್ತು ಸಿಯುಇಟಿ ಪರೀಕ್ಷೆ ವಿಲೀನದ ಪ್ರಸ್ತಾವನೆ ಇಲ್ಲ: ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ
author img

By

Published : Sep 6, 2022, 10:55 PM IST

ಕೋಟಾ (ರಾಜಸ್ಥಾನ): ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್​), ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಜೆಇಇ ಮೇನ್ಸ್) ಮತ್ತು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ವಿಲೀನ ಮಾಡುವುದಿಲ್ಲ. ಈ ಮೂರು ಪರೀಕ್ಷೆಗಳನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಕೂಡ ಇಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ ನೀಡಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿಗಾಗಿ ಬಂದಿರುವ ವಿವಿಧ ರಾಜ್ಯಗಳ ವಿದ್ಯಾರ್ಥಿಗಳೊಂದಿಗೆ ಸಚಿವ ಧರ್ಮೇಂದ್ರ ಪ್ರಧಾನ್ ಸಂವಾದ ನಡೆಸಿದರು. ಈ ವೇಳೆ ನೀಟ್​, ಜೆಇಇ ಮೇನ್ಸ್​ ಹಾಗೂ ಸಿಯುಇಟಿ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿದರು. ಈಗ ಸಚಿವರು ವಿದ್ಯಾರ್ಥಿಗಳು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

ಅಲ್ಲದೇ, ವಿದ್ಯಾರ್ಥಿಗಳು ನಿಮ್ಮ ಇಚ್ಛೆಯ ಪರೀಕ್ಷೆಗಾಗಿ ತಯಾರಿ ಮುಂದುವರೆಸಿ. ಈ ಮೂರು ಪರೀಕ್ಷೆಗಳನ್ನು ವಿಲೀನಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಮುಂದಿನ ವರ್ಷವೂ ಅಂತಹ ವಿಲೀನ ಇರುವುದಿಲ್ಲ. ಈ ಪರೀಕ್ಷೆಗಳನ್ನು ವಿಲೀನಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.

ಹಾಗೇನಾದರೂ ನಿರ್ಧಾರ ಕೈಗೊಂಡರೆ ಮೊದಲೇ ಮಾಹಿತಿ ನೀಡಲಾಗುವುದು. ವಿಲೀನ ಪ್ರಕ್ರಿಯೆ ಕೇವಲ ಒಂದು ಕಲ್ಪನೆ. ಇದರ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳಲು ಸಮಯ ಹಿಡಿಯುತ್ತದೆ ಎಂದೂ ಹೇಳಿದರು.

ಇದನ್ನೂ ಓದಿ: ಕಾಕಿನಾಡ ಕೇಂದ್ರೀಯ ವಿದ್ಯಾಲಯದಲ್ಲಿ 50 ವಿದ್ಯಾರ್ಥಿಗಳು ಅಸ್ವಸ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.