ETV Bharat / bharat

ಬೇರೆಯವ್ರ ಜಮೀನಲ್ಲಿ ಬೋರ್​ವೆಲ್ ಕೊರೆಸಿ, ಅವರನ್ನೇ ಹತ್ಯೆಗೈದ್ರಾ ಪಾಪಿಗಳು..?! - ಆಂಧ್ರದ ಅನಂತಪುರದಲ್ಲಿ ಭೀಕರ ಹತ್ಯೆ

ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ನಾರಾಯಣಪ್ಪ ಉಳುಮೆ ಮಾಡುತ್ತಿದ್ದ. ಆ ಜಮೀನಲ್ಲಿ ನಾಲ್ಕು ತಿಂಗಳ ಹಿಂದೆ ಅದೇ ಊರಿನ ನಾಗೇಶ್​ ಬೋರ್​ವೆಲ್ ಕೊರೆಸಿದ ಎನ್ನಲಾಗ್ತಿದೆ. ಇದರಿಂದಾಗಿ ನಾರಾಯಣಪ್ಪ ಮತ್ತು ನಾಗೇಶ್ ಕುಟುಂಬಗಳ ಮಧ್ಯೆ ವೈಷಮ್ಯ ಉಂಟಾಗಿತ್ತು.

ಭೀಕರ ಹತ್ಯೆ
CRUEL MURDERS
author img

By

Published : Jun 20, 2021, 3:54 PM IST

ಅನಂತಪುರ (ಆಂಧ್ರಪ್ರದೇಶ) : ಭೂ ವಿವಾದಕ್ಕೆ ಶುರುವಾದ ಜಗಳ ಅವಳಿ ಕೊಲೆಗಳಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಯಲ್ಲಾನೂರು ಮಂಡಲದ ಆರವೇಡು ಗ್ರಾಮದಲ್ಲಿ ಸಹೋದರರಾದ ನಾರಾಯಣಪ್ಪ ಮತ್ತು ರಾಜಗೋಪಾಲ್ ಅವರನ್ನು ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ.

ಭೂ ವಿವಾದಕ್ಕೆ ಅವಳಿ ಹತ್ಯೆ..?

ತನ್ನ ತಂದೆಯಿಂದ ಬಳುವಳಿಯಾಗಿ ಬಂದ ಭೂಮಿಯಲ್ಲಿ ನಾರಾಯಣಪ್ಪ ಉಳುಮೆ ಮಾಡುತ್ತಿದ್ದ. ಆ ಜಮೀನಲ್ಲಿ ನಾಲ್ಕು ತಿಂಗಳ ಹಿಂದೆ ಅದೇ ಊರಿನ ನಾಗೇಶ್​ ಬೋರ್​ವೆಲ್ ಕೊರೆಸಿದ ಎನ್ನಲಾಗ್ತಿದೆ. ಇದರಿಂದಾಗಿ ನಾರಾಯಣಪ್ಪ ಮತ್ತು ನಾಗೇಶ್ ಕುಟುಂಬಗಳ ಮಧ್ಯೆ ವೈಷಮ್ಯ ಉಂಟಾಗಿತ್ತು. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ನಿನ್ನೆ ರಾತ್ರಿ ಬೈಕ್​ನಲ್ಲಿ ಮನೆಗೆ ಬರುತ್ತಿದ್ದಾಗ ವಿರೋಧಿ ಬಣ ಸಹೋದರರಿಬ್ಬರನ್ನು ಹತ್ಯೆಗೈಯ್ದಿದೆ ಎಂಬ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಶಾಸಕ ಪೆಡ್ಡಿರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪತ್ನಿ ಸಾವಿನಿಂದ ಮನನೊಂದು ಪತಿ, ಇಬ್ಬರು ಮಕ್ಕಳು ಆತ್ಮಹತ್ಯೆ!

ಇತ್ತ ನಾರಾಯಣಪ್ಪ ಮತ್ತು ರಾಜಗೋಪಾಲ್ ಕುಟುಂಬಸ್ಥರು, ಆರೋಪಿಗಳ ಎರಡು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗ್ತಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಡಿಎಸ್​ಪಿ ಚೈತನ್ಯ ನೇತೃತ್ವದಲ್ಲಿ ಖಾಕಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.