ETV Bharat / bharat

CRPF​ನಲ್ಲಿ 9 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅರ್ಹತೆ, ವೇತನ, ಪರೀಕ್ಷೆಯ ಸಂಪೂರ್ಣ ವಿವರ

ಸಿಆರ್​ಪಿಎಫ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

crpf constable recruitment 2023 notification  notification released by Central  crpf constable recruitment notification  ರಾಜ್ಯವಾರು ಖಾಲಿ ಹುದ್ದೆ  ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌  ಕಂಪ್ಯೂಟರ್ ಆಧಾರಿತ ಪರೀಕ್ಷೆ  ನೀರುದ್ಯೋಗಿಗಳಿಗೆ ಗುಡ್​ ನ್ಯೂಸ್​ ವಸಿಆರ್​ಪಿಎಫ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ  ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ  ಕೇಂದ್ರ ಸರ್ಕಾರ ಅಧಿಸೂಚನೆ  ಖಾಲಿ ಇರುವ ಹುದ್ದೆಗಳಿಗೆ ಕೇಂದ್ರ ಸರ್ಕಾರ ಅಧಿಸೂಚನೆ
ಸಿಆರ್​ಪಿಎಫ್​ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ
author img

By

Published : Mar 16, 2023, 11:27 AM IST

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ (CRPF) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 9,212 ಕಾನ್‌ಸ್ಟೆಬಲ್ (ತಾಂತ್ರಿಕ, ಟ್ರೇಡ್ಸ್‌ಮ್ಯಾನ್) ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಮಾರ್ಚ್ 27 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಿಆರ್‌ಪಿಎಫ್ ಡೈರೆಕ್ಟರೇಟ್ ಜನರಲ್ ಕಚೇರಿ ತಿಳಿಸಿದೆ.

* ಮಾರ್ಚ್ 27 ರಿಂದ ಏಪ್ರಿಲ್ 25 ರವರೆಗೆ ಅರ್ಜಿ ಸ್ವೀಕರಿಸಲಾಗುತ್ತದೆ. ಪರೀಕ್ಷಾ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸಬೇಕು.

* ಸಿಬಿಟಿ ಪರೀಕ್ಷೆ ಪ್ರವೇಶ ಪತ್ರಗಳನ್ನು ಜೂನ್ 20 ರಿಂದ 25 ರವರೆಗೆ ಬಿಡುಗಡೆ ಮಾಡಲಾಗುತ್ತದೆ.

* ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ, ವ್ಯಾಪಾರ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

* ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಜುಲೈ 1 ರಿಂದ 13 ರವರೆಗೆ ನಡೆಯಲಿದೆ. ವಸ್ತುನಿಷ್ಠ ಮಾದರಿಯ ಪರೀಕ್ಷೆಯು ಇಂಗ್ಲಿಷ್/ಹಿಂದಿಯಲ್ಲಿ ಇರುತ್ತದೆ.

* ರಾಜ್ಯವಾರು ಖಾಲಿ ಹುದ್ದೆಗಳು ಹೀಗಿವೆ: ಎಪಿ- 428, ತೆಲಂಗಾಣ- 307, ಕರ್ನಾಟಕ- 460 ಹಾಗು ಆಂಧ್ರಪ್ರದೇಶಕ್ಕೆ 428 ಹುದ್ದೆಗಳಿವೆ.

* ವೇತನ ಶ್ರೇಣಿ: ರೂ.21,700 ರಿಂದ ರೂ.69,100

ಕಾನ್ಸ್ಟೇಬಲ್ (ಚಾಲಕ) ಹುದ್ದೆಗಳಿಗೆ ವಯೋಮಿತಿ 21 ರಿಂದ 27 ವರ್ಷ. ಕಾನ್ಸ್‌ಟೆಬಲ್ (ಎಂಎಂಬಿ/ಕಾಬ್ಲರ್, ಕಾರ್ಪೆಂಟರ್/ಟೈರೆಲ್, ಬ್ರಾಸ್ ಬಾಂಡ್/ಪೈಪ್ ಬಾಂಡ್/ಗಾರ್ಡನರ್/ಪೇಂಟರ್/ಕುಕ್/ವಾಟರ್ ಕ್ಯಾರಿಯರ್/ವಾಷರ್‌ಮನ್/ಬಾರ್ಬರ್/ಸಫಾಯಿ ಕರ್ಮಚಾರಿ/ಮೇಸನ್/ಪ್ಲಂಬರ್/ಎಲೆಕ್ಟ್ರಿಷಿಯನ್ ಉದ್ಯೋಗಗಳಿಗೆ 18 ರಿಂದ 23 ವರ್ಷಗಳ ನಡುವೆ ಇರಬೇಕು. ಎಸ್‌ಸಿ-ಎಸ್‌ಟಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಒಬಿಸಿ ಮತ್ತು ಮಾಜಿ ಸೈನಿಕರಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ ಸಾಮಾನ್ಯ (ಪುರುಷ) ಅಭ್ಯರ್ಥಿಗಳಿಗೆ ರೂ.100. SC/ST ಹಾಗು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷಾ ಶುಲ್ಕವಿಲ್ಲ.

ಪರೀಕ್ಷೆಯ ಮಾದರಿ: 100 ಪ್ರಶ್ನೆಗಳು 100 ಅಂಕಗಳನ್ನು ಹೊಂದಿರುತ್ತವೆ. ಈ ಪರೀಕ್ಷೆಯು 2 ಗಂಟೆಗಳ ಕಾಲ ನಡೆಯಲಿದೆ. ಜನರಲ್ ಇಂಟೆಲಿಜೆನ್ಸ್/ರೀಸನಿಂಗ್‌ನಿಂದ 25 ಪ್ರಶ್ನೆಗಳಿಗೆ 25 ಅಂಕಗಳು, ಸಾಮಾನ್ಯ ಜ್ಞಾನ/ಸಾಮಾನ್ಯ ಜಾಗೃತಿಯಿಂದ 25 ಪ್ರಶ್ನೆಗಳಿಗೆ 25 ಅಂಕಗಳು, ಪ್ರಾಥಮಿಕ ಗಣಿತದ 25 ಪ್ರಶ್ನೆಗಳಿಗೆ 25 ಅಂಕಗಳು ಮತ್ತು ಇಂಗ್ಲಿಷ್/ಹಿಂದಿಗೆ 25 ಪ್ರಶ್ನೆಗಳಿಗೆ 25 ಅಂಕಗಳು.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು: ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್​, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಹಾಸನ, ಮಂಗಳೂರು, ಪುತ್ತೂರು, ಮೈಸೂರು, ಶಿವಮೊಗ್ಗ, ತುಮಕೂರು ಮತ್ತು ಉಡುಪಿ.

ಇದನ್ನೂ ಓದಿ: ಬೆಂಗಳೂರು ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ಇಂಜಿನಿಯರ್ ಟಿ ಅಂಗಡಿ ತೆರೆದು ಯಶಸ್ವಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.