ವೈಶಾಲಿ, ಬಿಹಾರ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬಾಲಕನ ಸಾವಿವಿಂದ ರೊಚ್ಚಿಗೆದ್ದ ಜನರು ನದಿಯಿಂದ ಮೊಸಳೆಯನ್ನು ಹಿಡಿದು.. ಅದನ್ನು ನೀರಿನಿಂದ ಹೊರ ತಂದು.. ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾರೆ (Crocodile Beaten to Death). ಇದನ್ನು ಸ್ಥಳೀಯರೊಬ್ಬರು ವಿಡಿಯೋ ಕೂಡ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಮೊಸಳೆಗೆ ಬಾಲಕ ಬಲಿ: ಈ ಪ್ರಕರಣ ಜಿಲ್ಲೆಯ ರುಸ್ತಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 14 ವರ್ಷದ ಬಾಲಕ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದನಂತೆ. ಈ ಸಮಯದಲ್ಲಿ ಮೊಸಳೆ ಬಾಲಕನನ್ನು ನೀರಿನೊಳಗೆ ಎಳೆದೊಯ್ದಿದೆ. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ರೊಚ್ಚಿಗೆದ್ದ ಜನರು ನದಿಯಿಂದ ಮೊಸಳೆಯನ್ನು ಹಿಡಿದು ಹೊರ ತಂದಿದ್ದಾರೆ. ಬಳಿಕ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಕಟ್ಟಿಗೆಯಿಂದ ಮೊಸಳೆಗೆ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೊಸಳೆ ಸ್ಥಳದಲ್ಲೇ ಸಾವನ್ನಪ್ಪಿದೆ.
ಗಂಗಾಜಲ ಸಂಗ್ರಹಿಸಲು ಹೋಗಿದ್ದ ಬಾಲಕ ಬಲಿ: ಮೃತರನ್ನು ರುಸ್ತಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಕುಲಪುರ ಗ್ರಾಮದ ಅಂಕಿತ್ ಕುಮಾರ್ (14) ಎಂದು ಗುರುತಿಸಲಾಗಿದೆ. ಅಂಕಿತ್ ತಂದೆ ಧರ್ಮೇಂದ್ರ ದಾಸ್ ಸೋಮವಾರ ಬೈಕ್ ಖರೀದಿಸಿದ್ದರು. ಮಂಗಳವಾರ ಕುಟುಂಬಸ್ಥರು ಬೈಕ್‌ಗೆ ಪೂಜೆ ಸಲ್ಲಿಸಲು ಖಾಲ್ಸಾ ಘಾಟ್‌ಗೆ ತೆರಳಿದ್ದರು. ಬೈಕ್ ಪೂಜೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಬಾಲಕ ನೀರು ತರಲು ಗಂಗಾ ನದಿಗೆ ಹೋಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮೊಸಳೆ ಆತನ ಕಾಲನ್ನು ಹಿಡಿದು ನೀರಿನೊಳಗೆ ಎಳೆದೊಯ್ದು ಬಲಿ ಪಡೆದಿದೆ. ಗಂಗಾಜಲ ತರಲು ಹೋದ ಮಗ ಸಮಯ ಕಳೆದ್ರೂ ಬಾರದ ಹಿನ್ನೆಲೆ ಪೋಷಕರು ನದಿ ಬಳಿ ತೆರಳಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಆಗ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ಮೊಸಳೆಯನ್ನು ಹೊಡೆದು ಕೊಂದಿದ್ದಾರೆ. ಈ ಸುದ್ದಿ ಅರಣ್ಯ ಇಲಾಖೆಗೆ ಮುಟ್ಟಿತ್ತು.
ತನಿಖೆಗೆ ಸೂಚಿಸಿದ ಅರಣ್ಯ ಇಲಾಖೆ: ಮಾಹಿತಿ ಬಂದ ತಕ್ಷಣ ಈ ಬಗ್ಗೆ ತನಿಖೆ ನಡೆಸುವಂತೆ ವೈಶಾಲಿ ಡಿಎಫ್‌ಒ ಅಮಿತಾ ರಾಜ್ ಸೂಚಿಸಿದ್ದಾರೆ. ಅರಣ್ಯ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗಿದೆ. ವಿಷಯ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ ಅವರು, ಅರಣ್ಯ ಜೀವಿಗಳು ಕಂಡುಬಂದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಅವುಗಳ ಮಾಹಿತಿಯನ್ನು ನಮಗೆ ನೀಡಿ. ನಾವು ಅವನನ್ನು ರಕ್ಷಿಸುತ್ತೇವೆ ಎಂದು ವಿನಂತಿಸಿದರು.
"ಗ್ರಾಮಸ್ಥರು ಮೊಸಳೆಯನ್ನು ಕೊಂದಿದ್ದಾರೆ. ಅದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಜನರೊಂದಿಗೆ ಮಾತನಾಡಿ ವರದಿಗಳನ್ನು ಕೇಳಲಾಗುತ್ತಿದೆ. ವನ್ಯಜೀವಿ ಕಾನೂನು ಉಲ್ಲಂಘಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಹಾನಿಗೊಳಗಾದವರ ಬಗ್ಗೆ ನನಗೆ ವಿಷಾದವಿದೆ. ಆದರೆ ಮೂಕ ಜೀವಿಯನ್ನು ಕೊಲ್ಲುವುದರಿಂದ ಸಾವನ್ನಪ್ಪಿದವರ ಜೀವ ಮರಳಿ ಬರುವುದಿಲ್ಲ. ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗುವುದು'' - ಅಮಿತಾ ರಾಜ್, ಡಿಎಫ್‌ಒ ವೈಶಾಲಿ..
ಇನ್ನು ಗ್ರಾಮಸ್ಥರು ಕ್ರೂರವಾಗಿ ಮೊಸಳೆಯನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ-ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ವೈರಲ್ ಆಗ್ತಿವೆ.
ಓದಿ: Crocodile: ಕೃಷ್ಣಾ ನದಿಯಿಂದ ಮನೆಗೆ ನುಗ್ಗಿದ ಮೊಸಳೆಯನ್ನು ತೆಂಗಿನ ಮರಕ್ಕೆ ಕಟ್ಟಿ ಹಾಕಿದ ಗ್ರಾಮಸ್ಥರು - Video