ETV Bharat / bharat

ಸಂಕಷ್ಟಕ್ಕೆ ಸಿಲುಕಿದ ಅಸ್ಸೋಂ ಟೀ ಬ್ಯುಸಿನೆಸ್​.. 5 ವರ್ಷಗಳಲ್ಲಿ 68 ಚಹಾ ತೋಟಗಳು ಮಾರಾಟ!

author img

By ETV Bharat Karnataka Team

Published : Aug 31, 2023, 7:34 AM IST

ಅಸ್ಸೋಂನ ಚಹಾ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಳೆದ 5 ವರ್ಷಗಳಲ್ಲಿ 68 ಚಹಾ ತೋಟಗಳು ಮಾರಾಟವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದ ಚಹಾ ಉದ್ಯಮಕ್ಕೆ ಇದು ಒಳ್ಳೆಯ ಲಕ್ಷಣವಲ್ಲ ಎನ್ನುತ್ತಿದ್ದಾರೆ ಟೀ ನೌಕರರ ಸಂಘ..

Crisis in Assam Tea Industry  Assam tea industry in crisis  68 tea gardens sold in past 5 years  ಸಂಕಷ್ಟಕ್ಕೆ ಸಿಲುಕಿದ ಅಸ್ಸೋಂ ಟೀ ಬ್ಯುಸಿನೆಸ್  5 ವರ್ಷಗಳಲ್ಲಿ 68 ಚಹಾ ತೋಟಗಳು ಮಾರಾಟ  ಅಸ್ಸೋಂನ ಚಹಾ ಉದ್ಯಮ ಈಗ ಸಂಕಷ್ಟ  ಚಹಾ ಉದ್ಯಮಕ್ಕೆ ಇದು ಒಳ್ಳೆಯ ಲಕ್ಷಣವಲ್ಲ  ಅಸ್ಸೋಂ ಟೀ ನೌಕರರ ಸಂಘ  ಚಹಾ ಉದ್ಯಮವು ಈಗ ಭಯಾನಕ ಬಿಕ್ಕಟ್ಟ
ಸಂಕಷ್ಟಕ್ಕೆ ಸಿಲುಕಿದ ಅಸ್ಸೋಂ ಟೀ ಬ್ಯುಸಿನೆಸ್​

ಗುವಾಹಟಿ, ಅಸ್ಸೋಂ: ಅಸ್ಸೋಂನ ಚಹಾ ಉದ್ಯಮವು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಅಸ್ಸೋಂ ಭಾರತದ ಒಟ್ಟು ಚಹಾ ಉತ್ಪಾದನೆಯಲ್ಲಿ ಶೇಕಡ 52 ರಷ್ಟು ಉತ್ಪಾದಿಸುತ್ತದೆ. ಆದರೆ, ಇತ್ತೀಚೆಗೆ ಅಸ್ಸೊಂ ರಾಜ್ಯದಲ್ಲಿ ಇನ್ನೂರು ವರ್ಷಗಳಷ್ಟು ಹಳೆಯದಾದ ಚಹಾ ಉದ್ಯಮವು ವಿವಿಧ ಕಾರಣಗಳಿಂದ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯದಲ್ಲಿ ಚಹಾ ಉದ್ಯಮದ ಭವಿಷ್ಯವು ಈಗ ಅಸುರಕ್ಷಿತವಾಗಿದೆ ಎನ್ನಲಾಗ್ತಿದೆ.

2017 ರಿಂದ 2022 ರವರೆಗೆ, ಅಸ್ಸೋಂನ 68 ಚಹಾ ತೋಟಗಳನ್ನು ಈ ಚಹಾ ಎಸ್ಟೇಟ್‌ಗಳನ್ನು ಹೊಂದಿರುವ ಬಂಡವಾಳಶಾಹಿ ಗುಂಪು ಮಾರಾಟ ಮಾಡಿವೆ ಎಂಬುದು ಗಮನಾರ್ಹ. ಇತರ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ದೇಶದ ಬಂಡವಾಳಶಾಹಿ ಗುಂಪು ಅಸ್ಸೋಂನ ಚಹಾ ಉದ್ಯಮವನ್ನು ಭೀಕರ ಬಿಕ್ಕಟ್ಟಿಗೆ ತಂದಿದ್ದಾರೆ ಎನ್ನಲಾಗುತ್ತಿದೆ. ರಾಜ್ಯದ ಚಹಾ ಉದ್ಯಮಕ್ಕೆ ಇದು ಒಳ್ಳೆಯ ಲಕ್ಷಣವಲ್ಲ ಎನ್ನತ್ತಿದ್ದಾರೆ ಟೀ ನೌಕರರ ಸಂಘದ ಸದಸ್ಯರು.

ಅಸ್ಸೋಂ ರಾಜ್ಯದ ಖ್ಯಾತಿಯನ್ನು ಹೆಚ್ಚಿಸಿದ ಮತ್ತು ವಿಶೇಷವಾಗಿ ರಾಜ್ಯದ ಆರ್ಥಿಕತೆಯ ಅಡಿಪಾಯವನ್ನು ಹಾಕಿದ ಚಹಾ ಉದ್ಯಮವು ಈಗ ಭಯಾನಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಸ್ಸೋಂ ಟೀ ನೌಕರರ ಸಂಘ ಕೂಡ ಇದನ್ನು ದೃಢಪಡಿಸಿದೆ. ಮಾಹಿತಿಗಳ ಪ್ರಕಾರ, ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ತೋಟವನ್ನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆದ ಬಂಡವಾಳಶಾಹಿಗಳ ಒಂದು ವಿಭಾಗವು ಈಗ ರಾಜ್ಯದ ಚಹಾ ಉದ್ಯಮದಲ್ಲಿ ಈ ಭೀಕರ ಬಿಕ್ಕಟ್ಟನ್ನು ಸೃಷ್ಟಿಸಿದೆ. ಟೀ ಕಂಪನಿಗಳ ಒಂದು ವಿಭಾಗವು ಆ ಸಮಯದಲ್ಲಿ ಬ್ಯಾಂಕ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ತೋಟಗಳನ್ನು ಮಾರಾಟ ಮಾಡುವಂತಹ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬುದು ತಿಳಿದುಬಂದಿದೆ.

ರಾಜ್ಯದ ಚಹಾ ಉದ್ಯಮಕ್ಕೆ ಧಕ್ಕೆ ತಂದು ಇತರ ವ್ಯವಹಾರಗಳತ್ತ ಗಮನ ಹರಿಸಿರುವ ಬಂಡವಾಳಶಾಹಿಗಳ ಒಂದು ವಿಭಾಗವು ನಿಯಮಿತವಾಗಿ ಚಹಾ ತೋಟಗಳನ್ನು ಒಂದರ ನಂತರ ಒಂದರಂತೆ ಮಾರಾಟ ಮಾಡುತ್ತಿದೆ. ಅಸ್ಸೋಂನಲ್ಲಿ 16 ಟೀ ತೋಟಗಳನ್ನು ಮಾರಾಟ ಮಾಡಿದ ನಂತರ ಮೆಕ್ಲಿಯೋಡ್ ರಸೆಲ್ ಇಂಡಿಯಾ ಟೀ ಕಂಪನಿಯು ಅಸ್ಸೋಂನ 15 ಚಹಾ ತೋಟಗಳನ್ನು 700 ಕೋಟಿ ರೂ.ಗೆ ಬ್ಯಾಂಕ್ ಸಾಲವನ್ನು ಪಾವತಿಸಲು ಮಾರಾಟ ಮಾಡಿದೆ. ಈ 15 ಟೀ ಎಸ್ಟೇಟ್‌ಗಳಲ್ಲಿ ಆರು ತಿನ್ಸುಕಿಯಾ ಜಿಲ್ಲೆಗೆ ಸೇರಿದ್ದಾಗಿವೆ ಎಂಬುದು ಗಮನಾರ್ಹ.

ಬೇಸರದಲ್ಲಿ ಟೀ ನೌಕರರ ಸಂಘ: ಬಂಡವಾಳಶಾಹಿ ಗುಂಪುಗಳು ಚಹಾ ತೋಟಗಳ ಮಾರಾಟದಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಚಹಾ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಉದ್ಯೋಗಿಗಳ ಜೀವನದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ. ಅಸ್ಸೋಂನ ಚಹಾದ ರಫ್ತು ಭಾರೀ ಕುಸಿತಗೊಂಡಿದೆ. ಅಸ್ಸೋಂನ ಚಹಾ ಉದ್ಯಮವು ಇನ್ನೂರು ವರ್ಷಗಳನ್ನು ದಾಟಿರುವ ಈ ಸಮಯದಲ್ಲಿ ರಾಜ್ಯದಲ್ಲಿ ಚಹಾದ ಜನಪ್ರಿಯತೆಯು ವಿದೇಶಿ ಮಾರುಕಟ್ಟೆಯಲ್ಲಿ ಸ್ಥಿರವಾಗಿ ಕುಸಿಯುತ್ತಿರುವುದು ಟೀ ನೌಕರರ ಸಂಘಕ್ಕೆ ಬೇಸರ ಮೂಡಿಸಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, 2018-19 ರ ಹಣಕಾಸು ವರ್ಷದಲ್ಲಿ ಅಸ್ಸೋಂ ರಫ್ತು ಮಾಡಿದ ಚಹಾದ ಪ್ರಮಾಣ 15,570 ಸಾವಿರ ಕೆಜಿ. ಇದಕ್ಕೆ ವ್ಯತಿರಿಕ್ತವಾಗಿ, 2022-23 ರ ಹಣಕಾಸು ವರ್ಷದಲ್ಲಿ ಅಸ್ಸೋಂ ರಫ್ತು ಮಾಡಿದ ಚಹಾದ ಪ್ರಮಾಣ 12,750 ಸಾವಿರ ಕೆಜಿ. ಮಾಹಿತಿಯೊಂದರ ಪ್ರಕಾರ, ಅಸ್ಸೋಂ 2019-20ನೇ ಹಣಕಾಸು ವರ್ಷದಲ್ಲಿ ಕೇವಲ 10,461 ಸಾವಿರ ಕೆಜಿ, 2020-21ನೇ ಹಣಕಾಸು ವರ್ಷದಲ್ಲಿ 8710 ಸಾವಿರ ಕೆಜಿ ಮತ್ತು 2021-22ನೇ ಹಣಕಾಸು ವರ್ಷದಲ್ಲಿ 8307 ಸಾವಿರ ಕೆಜಿ ಚಹಾವನ್ನು ರಫ್ತು ಮಾಡಿದೆ. 2018-19ನೇ ಹಣಕಾಸು ವರ್ಷದಲ್ಲಿ 15,570 ಸಾವಿರ ಕೆಜಿ ಚಹಾವನ್ನು ರಫ್ತು ಮಾಡುವ ಮೂಲಕ ದಾಖಲೆಯಾಗಿದೆ.

ಮತ್ತೊಂದೆಡೆ, ಬ್ರಿಟನ್ ಅಸ್ಸೋಂನಿಂದ ಅತಿ ಹೆಚ್ಚು ಚಹಾವನ್ನು ಆಮದು ಮಾಡಿಸಿಕೊಂಡಿದೆ. 2018-19ನೇ ಹಣಕಾಸು ವರ್ಷದಲ್ಲಿ ದೇಶವು ಅಸ್ಸೋಂನಿಂದ 5,426 ಸಾವಿರ ಕೆಜಿ ಚಹಾವನ್ನು ಖರೀದಿಸಿದೆ. ಆದರೆ ಕಳೆದ ಆರ್ಥಿಕ ವರ್ಷದಲ್ಲಿ ದೇಶ ಖರೀದಿಸಿದ ಚಹಾ ಪ್ರಮಾಣ 4,690 ಸಾವಿರ ಕೆಜಿ ಆಗಿದೆ. ಅಸ್ಸೋಂ ಚಹಾವು ಪ್ರಪಂಚದಾದ್ಯಂತ ವಿಶಿಷ್ಟವಾದ ಗುರುತನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು. ಅಸ್ಸೋಂ ಚಹಾಕ್ಕೆ ಸಹ ಪ್ರಪಂಚದ ಜನರು ಯಾವಾಗಲೂ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಆದರೆ ಇದಾದ ನಂತರವೂ ಅಸ್ಸೋಂ ಚಹಾ ರಫ್ತಿನಲ್ಲಿ ಭಾರೀ ಕುಸಿತದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಓದಿ: ರಸ್ತೆ ಬದಿ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಲು ಮುಂದಾದ SIDBI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.