ETV Bharat / bharat

ಮಾಜಿ ಶಿಕ್ಷಣ ಸಚಿವರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ₹50 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ!

ಬಿಹಾರದ ಮಾಜಿ ಶಿಕ್ಷಣ ಸಚಿವ ವೃಶಿನ್ ಪಟೇಲ್ ಅವರಿಗೆ ಮಹಿಳೆಯೊಬ್ಬರು ವಾಟ್ಸ್​ಆ್ಯಪ್​​ ಮೂಲಕ ಅಶ್ಲೀಲ ಫೋಟೋಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಘಟನೆ ನಡೆದಿದೆ.

Etv Bharatcrime-woman-sent-obscene-photo-to-brishin-patel-and-demanded-rupees-50-lakh
ಮಾಜಿ ಶಿಕ್ಷಣ ಸಚಿವರಿಗೆ ಅಶ್ಲೀಲ ಫೋಟೋಗಳನ್ನು ಕಳುಹಿಸಿ ₹50 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ!
author img

By ETV Bharat Karnataka Team

Published : Nov 22, 2023, 10:23 PM IST

Updated : Nov 22, 2023, 11:00 PM IST

ಪಾಟ್ನಾ(ಬಿಹಾರ): ಮಾಜಿ ಶಿಕ್ಷಣ ಸಚಿವ ಮತ್ತು ಆರ್​ಜೆಡಿ ಮುಖಂಡ ವೃಶಿನ್ ಪಟೇಲ್ ಅವರಿಗೆ ಮಹಿಳೆಯೊಬ್ಬರು ವಾಟ್ಸ್​​ಆ್ಯಪ್​ನಲ್ಲಿ ಅಶ್ಲೀಲ ಫೋಟೋಗಳನ್ನು ಕಳುಹಿಸಿ, 50 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಸಂಬಂಧ ವೃಶಿನ್​ ಇಒಯುಗೆ(ಆರ್ಥಿಕ ಅಪರಾಧಗಳ ಘಟಕ) ಲಿಖಿತ ದೂರು ಸಲ್ಲಿಸಿದ್ದಾರೆ. ಆರೋಪಿ ಮಹಿಳೆ ಈ ಹಿಂದೆ ಅನೇಕ ಬಾರಿ ವೃಶಿನ್ ಪಟೇಲ್ ಅವರನ್ನು ಭೇಟಿಯಾಗಿದ್ದಳು ಎಂದು ಹೇಳಲಾಗುತ್ತಿದೆ.

ವೃಶಿನ್ ಪಟೇಲ್ ನೀಡಿರುವ ದೂರಿನಲ್ಲಿ ಏನಿದೆ?: ಎರಡು ತಿಂಗಳ ಹಿಂದೆ ಈ ಮಹಿಳೆ ನನ್ನನ್ನು ಭೇಟಿಯಾಗಲು ನಿವಾಸಕ್ಕೆ ಬಂದಿದ್ದಳು, ಆದರೆ ಆಕೆಯನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮಹಿಳೆ ಎಂಎಲ್​ಎ ಆಗುವ ಬಯಕೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ನಾನು ಇದೆಲ್ಲವನ್ನೂ ನಿರ್ಲಕ್ಷಿಸಿದಾಗ, ನನ್ನ ಮೊಬೈಲ್‌ಗೆ ತಿರುಚಿದ ಅಶ್ಲೀಲ ಫೋಟೋಗಳನ್ನು ಕಳುಹಿಸಲಾಗಿದೆ. ನಂತರ ಇದರ ಪರಿಣಾಮವನ್ನು ನೀವು ಎದುರಿಸಬೇಕಾಗುತ್ತದೆ ಮತ್ತು ನಿನ್ನ ರಾಜಕೀಯ ಜೀವನವನ್ನೇ ಹಾಳು ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೈಬರ್ ಪೊಲೀಸರಿಂದ ಪ್ರಕರಣದ ತನಿಖೆ: ಈ ಕುರಿತು ಮಾಜಿ ಶಿಕ್ಷಣ ಸಚಿವ ವೃಶಿನ್ ಪಟೇಲ್ ಪ್ರತಿಕ್ರಿಯಿಸಿ, " ವಾಟ್ಸ್​​ಆ್ಯಪ್‌ನಲ್ಲಿ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ನನ್ನ ರಾಜಕೀಯ ಜೀವನವನ್ನು ಹಾಳು ಮಾಡುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ. ಜೊತೆಗೆ 50 ಲಕ್ಷ ರೂಗೆ ಬೇಡಿಕೆಯಿಟ್ಟಿದ್ದಾಳೆ. ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾಳೆ. ಈ ಸಂಬಂಧ ಪಾಟ್ನಾದ ಆರ್ಥಿಕ ಇಲಾಖೆಯ ಅಪರಾಧ ಘಟಕಕ್ಕೆ ದೂರು ನೀಡಲಾಗಿದೆ. ಸೈಬರ್ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಮಹಿಳೆಯಿಂದ ಆರ್​ಜೆಡಿ ಮುಖಂಡ ವೃಶಿನ್ ಪಟೇಲ್ ಅವರಿಗೆ ಹಲವು ಬಾರಿ ಕರೆಗಳು ಬಂದಿವೆ. ಇದರ ನಡುವೆ ವೃಶಿನ್ ಪಟೇಲ್ ಅವರು ಮಹಿಳೆಯ ನಿವಾಸಕ್ಕೆ ಹೋದಾಗ, ಅಲ್ಲಿ ಇಬ್ಬರು ಹುಡುಗಿಯರು ಅಶ್ಲೀಲ ಕೃತ್ಯದಲ್ಲಿ ತೊಡಗಿದ್ದರು, ಇದನ್ನು ನೋಡಿದ ಕೊಡಲೇ ವೃಶಿನ್ ಪಟೇಲ್ ಅಲ್ಲಿಂದ ಹಿಂತಿರುಗಿದ್ದರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿವಾಹೇತರ ಸಂಬಂಧ ನಿರಾಕರಿಸಿದ ಮಹಿಳೆ.. ಮಾಜಿ ಗೆಳೆಯನಿಂದ ಅಶ್ಲೀಲ ಫೋಟೋಗಳು ವೈರಲ್​

ವೃದ್ಧನಿಗೆ 12 ಲಕ್ಷ ವಂಚಿಸಿದ್ದವರ ಬಂಧನ: ಇತ್ತೀಚಿಗೆ, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವಿಡಿಯೋಗಳನ್ನು ಹರಿಬಿಡುವುದಾಗಿ ಬೆದರಿಸಿ ವೃದ್ಧ ವ್ಯಕ್ತಿಗೆ 12 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಶಾಹದಾರಾ ಜಿಲ್ಲೆಯ ಸೈಬರ್ ಸೆಲ್ ಠಾಣೆ ಪೊಲೀಸರು ರಾಜಸ್ಥಾನದ ವಂಚಕ ತಂಡದ ಇಬ್ಬರು ಸದಸ್ಯರನ್ನು ಬಂಧಿಸಿದ್ದರು. ಆರೋಪಿಗಳನ್ನು ರಾಜಸ್ಥಾನ ನಿವಾಸಿಗಳಾದ ಬರ್ಖತ್ ಖಾನ್ (32) ಮತ್ತು ರಿಜ್ವಾನ್ (22) ಎಂದು ಗುರುತಿಸಲಾಗಿತ್ತು. ಇವರ ಮನೆಯಿಂದ ಆರು ಮೊಬೈಲ್ ಫೋನ್​ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು.

Last Updated : Nov 22, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.