ಜೈಸಲ್ಮೇರ್ (ರಾಜಸ್ಥಾನ): ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ನಿಶ್ಚಯಿಸಿದ್ದ ಯುವತಿಯನ್ನು ಗೂಂಡಾಗಳ ಗುಂಪೊಂದು ಅಪಹರಿಸಿ, ಅವರಲ್ಲಿ ಓರ್ವ ಬಲವಂತವಾಗಿ ಆಕೆಯನ್ನು ಮದುವೆಯಾಗಿದ್ದಾನೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಇದನ್ನು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಘಟನೆ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ದುಷ್ಕರ್ಮಿಯೋರ್ವ ಯುವತಿಯನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಹುಲ್ಲಿಗೆ ಬೆಂಕಿ ಹಾಕಿ ಅದರ ಸುತ್ತಲೂ ಸಪ್ತಪದಿ ರೀತಿಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವುದನ್ನು ಕಾಣಬಹುದು. ಸಂತ್ರಸ್ತ ಯುವತಿ ಅಳುತ್ತಿರುವುದು ಮತ್ತು ಪಕ್ಕದಲ್ಲಿ ಕಾರೊಂದು ನಿಂತಿರುವುದರ ಜೊತೆಗೆ ಓರ್ವ ಮಹಿಳೆ ಹಾಗೂ ಇತರ ವ್ಯಕ್ತಿಗಳು ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.
-
मीडिया द्वारा ये वीडियो जैसलमेर का बताया जा रहा है। रिपोर्ट्स के अनुसार एक लड़की को सरेआम किडनैप करके एक बंजर वीराने में आग जलाकर उसके साथ ज़बरदस्ती शादी कर ली। ये बेहद चौंकाने वाली और डराने वाली घटना है। @AshokGehlot51 जी मामले की जाँच कर कार्यवाही करें। pic.twitter.com/mZee4oJgSy
— Swati Maliwal (@SwatiJaiHind) June 6, 2023 " class="align-text-top noRightClick twitterSection" data="
">मीडिया द्वारा ये वीडियो जैसलमेर का बताया जा रहा है। रिपोर्ट्स के अनुसार एक लड़की को सरेआम किडनैप करके एक बंजर वीराने में आग जलाकर उसके साथ ज़बरदस्ती शादी कर ली। ये बेहद चौंकाने वाली और डराने वाली घटना है। @AshokGehlot51 जी मामले की जाँच कर कार्यवाही करें। pic.twitter.com/mZee4oJgSy
— Swati Maliwal (@SwatiJaiHind) June 6, 2023मीडिया द्वारा ये वीडियो जैसलमेर का बताया जा रहा है। रिपोर्ट्स के अनुसार एक लड़की को सरेआम किडनैप करके एक बंजर वीराने में आग जलाकर उसके साथ ज़बरदस्ती शादी कर ली। ये बेहद चौंकाने वाली और डराने वाली घटना है। @AshokGehlot51 जी मामले की जाँच कर कार्यवाही करें। pic.twitter.com/mZee4oJgSy
— Swati Maliwal (@SwatiJaiHind) June 6, 2023
ಈ ವಿಡಿಯೋವನ್ನು ಮಂಗಳವಾರ ದೆಹಲಿ ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ''ಮಾಧ್ಯಮಗಳ ಪ್ರಕಾರ, ಈ ವಿಡಿಯೋ ಜೈಸಲ್ಮೇರ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಸಾರ್ವಜನಿಕವಾಗಿ ಯುವತಿಯನ್ನು ಅಪಹರಿಸಿ ಮರುಭೂಮಿಯಲ್ಲಿ ಹುಲ್ಲಿಗೆ ಬೆಂಕಿ ಹಾಕಿ ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ಭಯಾನಕ ಘಟನೆ'' ಎಂದು ಬರೆದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ, ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ.
ಜೂನ್ 12ಕ್ಕೆ ನಡೆಯಬೇಕಿದ್ದ ಯುವತಿಯ ಮದುವೆ : ಜೈಸಲ್ಮೇರ್‌ನ ಮೋಹನ್‌ಗಢ್ ಪ್ರದೇಶದ ಈ ಯುವತಿಗೆ ಜೂನ್ 12ರಂದು ಮದುವೆ ನಿಶ್ಚಯವಾಗಿದೆ. ಆದರೆ, ಜೂನ್ 1ರಂದು ಪುಷ್ಪೇಂದ್ರ ಸಿಂಗ್ ಎಂಬಾತನ ನೇತೃತ್ವದಲ್ಲಿ 10 ರಿಂದ 12 ಗೂಂಡಾಗಳು ಮನೆಯಿಂದಲೇ ಆಕೆಯನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಈ ಗೂಂಡಾಗಳು ಗ್ರಾಮದ ಹೊರಗೆ ಕರೆದೊಯ್ದು, ಅಲ್ಲಿ ಪುಷ್ಪೇಂದ್ರ ಆಕೆಯನ್ನು ತನ್ನ ತೋಳಿನಲ್ಲಿ ಎತ್ತಿಕೊಂಡು ಅಗ್ನಿ ಸುತ್ತಲೂ ಏಳು ಸುತ್ತುಗಳನ್ನು ಸುತ್ತಿದ್ದಾನೆ.
ಅಲ್ಲದೇ, ಈ ಯುವತಿಯನ್ನು ಬೇರೊಬ್ಬರೊಂದಿಗೆ ಮದುವೆ ಮಾಡುವುದರ ಬಗ್ಗೆ ಆಕ್ಷೇಪಿಸಿ ಪುಷ್ಪೇಂದ್ರ ಆಕೆಯ ಕುಟುಂಬಕ್ಕೂ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಜೂನ್ 1ರಂದು ಆಕೆಯನ್ನು ಮನೆಯಿಂದ ಅಪಹರಿಸುವಾಗ ತಡೆದ ಕುಟುಂಬಸ್ಥರು ಬೆನ್ನಟ್ಟಿದರೂ ದುಷ್ಕರ್ಮಿಗಳು ಕಾರು ನಿಲ್ಲಿಸಲಿಲ್ಲ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಯುವತಿಯನ್ನು ರಕ್ಷಣೆ ಮಾಡಿ ಆರೋಪಿಗಳನ್ನು ಹಿಡಿದು ಮೋಹನಗಢಕ್ಕೆ ಕರೆತಂದಿದ್ದಾರೆ. ಈಗಾಗಲೇ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡು ಆಕೆಯ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಈ ಬಗ್ಗೆ ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಅವರಿಗೂ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವೈರಲ್ ವಿಡಿಯೋ ಗಮನಿಸಿದ ಅನೇಕರು ಅತ್ಯಂತ ಆಘಾತ ಮತ್ತು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ದುರುಳರಿಗೆ ಕಠಿಣ ಶಿಕ್ಷೆ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಪ್ರಕರಣದ ಪೊಲೀಸ್ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಸೈಕಲ್ ಮೇಲೆ ತೆರಳುತ್ತಿದ್ದ 7 ವಿದ್ಯಾರ್ಥಿನಿಯರಿಗೆ ಗುದ್ದಿಕೊಂಡು ಹೋದ ಬೊಲೆರೋ - Video