ದೇವರಿಯಾ (ಉತ್ತರ ಪ್ರದೇಶ): ಇಲ್ಲಿನ ದೇವರಿಯಾ ರುದ್ರಪುರ ಕೊಟ್ವಾಲಿ ಪ್ರದೇಶದ ಫತೇಪುರ್ ಗ್ರಾಮದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಆಸ್ತಿ ವಿವಾದದಕ್ಕೆ ಸಂಬಂಧಿಸಿದಂತೆ 2 ಕುಟುಂಬಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಆರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬಾಲಕಿ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಈಗಾಗಲೇ ಆಗಮಿಸಿ ತನಿಖೆ ಆರಂಭಿಸಿದ್ದೇವೆ ಎಂದು ದೇವರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಕಲ್ಪ್ ಶರ್ಮಾ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರುದ್ರಾಪುರ ಕೊತ್ವಾಲಿ ವ್ಯಾಪ್ತಿಯ ಫತೇಪುರ್ ಗ್ರಾಮ ಪಂಚಾಯಿತಿಯ ಲೆಧನ್ ತೋಲದ ಸತ್ಯ ಪ್ರಕಾಶ್ ದುಬೆ ಅವರ ಕುಟುಂಬ ಮತ್ತು ಗ್ರಾಮದ ಅಭಯಪುರ ತೋಲಾ ನಿವಾಸಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರೇಮಚಂದ್ ಯಾದವ್ ಅವರ ಕುಟುಂಬದ ನಡುವೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ತೀವ್ರ ಪೈಪೋಟಿ ನಡೆಯುತ್ತಿತ್ತು.
ಇದೇ ವಿಚಾರವಾಗಿ ಸೋಮವಾರ (ಇಂದು) ಬೆಳಗ್ಗೆ ಪ್ರೇಮಚಂದ್ ಯಾದವ್ ಅವರನ್ನು ಹತ್ಯೆ ಮಾಡಲಾಗಿತ್ತು. ಇದರಿಂದ ಕೋಪಗೊಂಡ ಮೃತ ಪ್ರೇಮಚಂದ್ ಯಾದವ್ ಅವರ ಕಡೆಯ ಜನರು ಸತ್ಯ ಪ್ರಕಾಶ್ ದುಬೆ ಅವರ ಮನೆಗೆ ಬಂದು ಬಂದೂಕುಗಳಿಂದ ದಾಳಿ ನಡೆಸಿದ್ದಾರೆ. ದಾಳಿಕೋರರು ಸತ್ಯ ಪ್ರಕಾಶ್ ದುಬೆ ಮತ್ತು ಅವರ ಪತ್ನಿ ಸೇರಿದಂತೆ ಐವರನ್ನು ಕೊಲೆ ಮಾಡಿದ್ದಾರೆ. ಸತ್ಯ ಪ್ರಕಾಶ್ ದುಬೆ ಆತನ ಕುಟುಂಬ, ಪ್ರೇಮಚಂದ್ ಯಾದವ್ ಸೇರಿ ಒಟ್ಟು 6 ಜನರ ಕೊಲೆಯಾಗಿದೆ. ಘಟನೆಯಲ್ಲಿ ಇನ್ನೂ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅಖಂಡ ಪ್ರತಾಪ್ ಸಿಂಗ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. ದೇವ್ರಹ ಬಾಬಾ ಮಹರ್ಷಿ ವೈದ್ಯಕೀಯ ಕಾಲೇಜಿನಲ್ಲಿ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೇವರಿಯಾ ಎಸ್ಪಿ ಸಂಕಲ್ಪ್ ಶರ್ಮಾ ತಿಳಿಸಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇಂದು ನಡೆದ ಭೀಕರ ಹತ್ಯೆಗಳಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಇದ್ದು, ಜನ ಮುಂದೇನಾಗುತ್ತದೆಯೋ ಎಂಬ ಭಯದಲ್ಲಿದ್ದಾರೆ.
ಇದನ್ನೂ ಓದಿ: ಪ್ರೇಮ ಪ್ರಕರಣ: ಯುವತಿಗೆ ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿದ ತಾಯಿ, ಸಹೋದರ