ETV Bharat / bharat

ಕಾಣೆಯಾದ ವಿವಾಹಿತ ಮಹಿಳೆಯ ಹುಡುಕಾಟದಲ್ಲಿ ಕರ್ನಾಟಕ ಪೊಲೀಸರು.. ಸೋನಭದ್ರದ ಹಲವೆಡೆ ಶೋಧ

ನಾಪತ್ತೆಯಾದ ವಿವಾಹಿತ ಮಹಿಳೆಯನ್ನು ಹುಡುಕಿಕೊಂಡು ಬಂದ ಕರ್ನಾಟಕ ಪೊಲೀಸರು ಶನಿವಾರ ಸೋನಭದ್ರ ಪ್ರದೇಶದಲ್ಲಿ ಶೋಧ ನಡೆಸಿದ್ದಾರೆ. ಆದರೆ ಪೊಲೀಸರಿಗೆ ಮಹಿಳೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

Uttar Pradesh
ಉತ್ತರ ಪ್ರದೇಶ
author img

By

Published : Jul 23, 2023, 5:25 PM IST

ಸೋನಭದ್ರ (ಉತ್ತರ ಪ್ರದೇಶ): ಕಾಣೆಯಾದ ವಿವಾಹಿತ ಮಹಿಳೆಯ ಹುಡುಕಾಟದಲ್ಲಿ ಕರ್ನಾಟಕ ಪೊಲೀಸರು ಶನಿವಾರ ಸೋನಭದ್ರ ತಲುಪಿದ್ದಾರೆ. ಇಲ್ಲಿನ ಅನ್ಪಾರ ಮತ್ತು ಕರ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದಾರೆ.

ರಾಜ್ಯ (ಕರ್ನಾಟಕ) ಪೊಲೀಸರು ಅನ್ಪರಾ ಮಾರುಕಟ್ಟೆಯಲ್ಲಿ ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ವಿವಾಹಿತ ಮಹಿಳೆ ಬಗ್ಗೆ ಇನ್ನೂ ಏನೂ ತಿಳಿದು ಬಂದಿಲ್ಲ. ನಗದು ಹಾಗೂ ಚಿನ್ನಾಭರಣಗಳೊಂದಿಗೆ ಮಹಿಳೆ ಕರ್ನಾಟಕದಿಂದ ಪರಾರಿಯಾಗಿದ್ದಾಳೆ.

ಸಿಕ್ಕಿರುವ ಮಾಹಿತಿ ಪ್ರಕಾರ, ನೇಹಾ ಶರ್ಮಾ ಅಲಿಯಾಸ್ ಹೀರಾ ಖಾನ್ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಅನ್ಪರಾ ಬಜಾರ್‌ನಲ್ಲಿ ವಾಸಿಸುತ್ತಿದ್ದಳು. ಬಿನಾ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವಾಗ ಮಹಿಳೆಯೊಬ್ಬರ ಸಂಪರ್ಕಕ್ಕೆ ಬಂದ ಆಕೆ ರಾಜಸ್ಥಾನಕ್ಕೆ ತೆರಳಿದ್ದಳು. ರಾಜಸ್ಥಾನದಲ್ಲಿದ್ದ ಕರ್ನಾಟಕ ಮೂಲದ ದಲ್ಲಾಳಿಯೊಬ್ಬ ಆಕೆಯನ್ನು ವಿವಾಹವಾಗಿದ್ದ. ಬಳಿಕ ಕರ್ನಾಟಕಕ್ಕೆ ಬಂದ ಆಕೆ ತನ್ನ ಗಂಡನ ಮನೆಯಿಂದ ಚಿನ್ನಾಭರಣ ಮತ್ತು ನಗದು ಹಣದೊಂದಿಗೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಇದಾದ ನಂತರ ಆಕೆಯ ಪತಿ ಕರ್ನಾಟಕ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಇದನ್ನೂ ಓದಿ: Bengaluru crime: ಬಾಡಿಗೆ ಮನೆ ಮಾಲೀಕರ ಚಿನ್ನಾಭರಣ ದೋಚಿದ ಲಿವಿಂಗ್ ಟುಗೆದರ್ ಜೋಡಿ ಅಂದರ್​

ಮಾಹಿತಿ ಮೇರೆಗೆ ಕರ್ನಾಟಕ ಪೊಲೀಸರು ಆಕೆಯ ಮೊಬೈಲ್ ನಂಬರ್ ಟ್ರ್ಯಾಕ್​ ಮಾಡಿ ತನಿಖೆ ನಡೆಸಿದಾಗ ಅನ್ಪರಾದ ನೂರಿಯಾ ಮೊಹಲ್ಲಾ ನಿವಾಸಿ ಇರ್ಫಾನ್ ಎಂಬುವರ ಸಂಖ್ಯೆ ಬೆಳಕಿಗೆ ಬಂದಿದೆ. ಬಳಿಕ ಆ ಯುವಕನನ್ನು ವಿಚಾರಣೆಗೆ ಒಳಪಡಿಸಿದರು. ನಂತರ ವಿವಾಹಿತ ಮಹಿಳೆಯನ್ನು ಹುಡುಕಲು ಇತರ ಸ್ಥಳಗಳಲ್ಲಿ ದಾಳಿ ನಡೆಸಿ ಮಹಿಳೆಯನ್ನು ಪತ್ತೆ ಹಚ್ಚಲು ಯತ್ನಿಸಿದ್ದಾರೆ. ಆದರೆ, ಮಹಿಳೆ ಮಾತ್ರ ಪತ್ತೆಯಾಗಿಲ್ಲ.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮಹಿಳೆ ಅನ್ಪರಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಇದಾದ ಬಳಿಕ ಆಕೆ ಇಲ್ಲಿಂದ ಹೊರಟು ಹೋಗಿದ್ದಾಳೆ. ನಂತರ ಆಕೆ ಕರ್ನಾಟಕದ ಯುವಕನನ್ನು ಮದುವೆಯಾದಳು. ಯಾವುದೋ ಪ್ರಕರಣದಲ್ಲಿ ಯುವಕ ಜೈಲಿಗೆ ಹೋದ ಬಳಿಕ ಆಕೆ ನಗದು, ಚಿನ್ನಾಭರಣಗಳೊಂದಿಗೆ ಮನೆಯಿಂದ ಓಡಿ ಹೋಗಿದ್ದಳು. ಅದೇ ಮಹಿಳೆಯ ಹುಡುಕಾಟದಲ್ಲಿ ಕರ್ನಾಟಕ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಪ್ರದೀಪ್ ಸಿಂಗ್ ಚಾಂಡೆಲ್ ಮಾಹಿತಿ ನೀಡಿದ್ದಾರೆ.

ಅನ್ಪರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಳಿ ಮಾಡಿದ ನಂತರ, ಕರ್ನಾಟಕ ಪೊಲೀಸರು ಕರ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೂ ದಾಳಿ ಮಾಡಿ ಮಹಿಳೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ವಿಫಲಾಗಿದೆ. ಇದರಿಂದ ಕರ್ನಾಟಕ ಪೊಲೀಸರು ಬರಿಗೈಯಲ್ಲಿ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ನೌಕರಿಯಲ್ಲಿ ಹಿಂಬಡ್ತಿ, 6 ತಿಂಗಳಿಂದ ವೇತನ ಸಿಗದೆ ಸರ್ಕಾರಿ ನೌಕರ ನಾಪತ್ತೆ: ಪೊಲೀಸರಿಗೆ ದೂರು ನೀಡಿದ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.