ETV Bharat / bharat

Dowry case: ₹30 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು ಮದುವೆ ಮುಂದೂಡಿದ ವರ; ನೊಂದು ವಿಡಿಯೋ ಮಾಡಿಟ್ಟು ವಧು ಆತ್ಮಹತ್ಯೆ

author img

By

Published : Aug 14, 2023, 7:28 PM IST

Bride committed suicide: ಸರ್ಕಾರಿ ಉದ್ಯೋಗಿಯೊಬ್ಬ ಮದುವೆಗೆ 20 ದಿನ ಮೊದಲು ಹೆಚ್ಚುವರಿ ವರದಕ್ಷಿಣೆ ಹಣ ಕೇಳಿ ಮದುವೆ ಮುಂದೂಡಿದ ಕಾರಣ ಯುವತಿ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ವರದಕ್ಷಿಣೆಗೆ ಯುವತಿ ಆತ್ಮಹತ್ಯೆ
ವರದಕ್ಷಿಣೆಗೆ ಯುವತಿ ಆತ್ಮಹತ್ಯೆ

ಬದೌನ್ (ಉತ್ತರಪ್ರದೇಶ) : ವರದಕ್ಷಿಣೆ ಪಡೆಯುವುದು ಕಾನೂನುರೀತ್ಯಾ ಅಪರಾಧವಾಗಿದ್ದರೂ ಅದಕ್ಕೆ ಇನ್ನೂ ಕಡಿವಾಣ ಇಲ್ಲವಾಗಿದೆ. ಹೀಗಾಗಿ ಅದೆಷ್ಟೋ ಜೀವಗಳು ದುರಂತ ಅಂತ್ಯ ಕಾಣುತ್ತಿವೆ. ಉತ್ತರಪ್ರದೇಶದ​ಲ್ಲೂ ಇಂಥದ್ದೇ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಉದ್ಯೋಗಿಯಾಗಿದ್ದ ವರ ಮದುವೆಗೆ 30 ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಇದನ್ನು ಪೂರೈಸಲು ಶಕ್ತವಾಗದ ಕಾರಣ ಯುವತಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನೆಯ ವಿವರ : ಯುವಕ ಆದಾಯ ತೆರಿಗೆ ಕಚೇರಿಯಲ್ಲಿ ಗುಮಾಸ್ತನಾಗಿದ್ದ. ಈತನಿಗೆ ಕರಿಯಮಾಯಿ ಎಂಬ ಗ್ರಾಮದ ಯುವತಿ ಜೊತೆಗೆ ವಿವಾಹ ನಿಶ್ಚಯಿಸಲಾಗಿತ್ತು. ಏಪ್ರಿಲ್​ 20 ರಂದು ವಿವಾಹ ಮುಹೂರ್ತ ನಿಗದಿ ಮಾಡಲಾಗಿತ್ತು. ಆದರೆ, ವರದಕ್ಷಿಣೆ ಆಸೆಗಾಗಿ ಯುವಕ 30 ಲಕ್ಷ ಹಣ ಮತ್ತು ಕಾರು ಗಿಫ್ಟ್​ ನೀಡಲು ಯುವತಿ ಕುಟುಂಬದ ಎದುರು ಬೇಡಿಕೆ ಇಟ್ಟಿದ್ದಾನೆ.

ಈ ಮೊದಲೇ ನಿರ್ಧರಿಸಿದಂತೆ 20 ಲಕ್ಷ ಹಣ ನೀಡಲು ಯುವತಿ ಕುಟುಂಬ ಮುಂದಾಗಿತ್ತು. ಆದರೆ, ಯುವಕನ ಹಣದ ದಾಹ ಹೆಚ್ಚಾಗಿತ್ತು. ವಿವಾಹಕ್ಕೆ 20 ದಿನ ಮುಂಚಿತವಾಗಿ ವರ ವರಾತ ತೆಗೆದಿದ್ದು, 30 ಲಕ್ಷ ರೂಪಾಯಿ ನೀಡಲು ಒತ್ತಾಯಿಸಿದ್ದಾನೆ. ಅದಾಗಲೇ ಯುವತಿ ಕಡೆಯವರು ಎಲ್ಲ ಬಂಧುಗಳಿಗೆ ಆಮಂತ್ರಣ ಪತ್ರಿಕೆ ವಿತರಿಸಿದ್ದರು. ಅಷ್ಟು ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಯುವತಿ ಕುಟುಂಬಸ್ಥರು ಹೇಳಿದಾಗ್ಯೂ ಯುವಕ ಇದಕ್ಕೆ ಒಪ್ಪದೇ ಮದುವೆ ಮುಂದೂಡುತ್ತಲೇ ಬಂದಿದ್ದ. ಇತ್ತ ಯುವತಿ ಕುಟುಂಬ ಮದುವೆ ದಿನಾಂಕ ಮುಗಿದಿದ್ದು, ಅವಮಾನಕ್ಕೀಡಾಗಿತ್ತು.

ವಿಡಿಯೋ ಮಾಡಿ ಯುವತಿ ಆತ್ಮಹತ್ಯೆ: ವಿವಾಹ ಮುಂದೂಡಿಕೆಯಿಂದ ಸಮಾಜದಲ್ಲಿ ಯುವತಿ ಮತ್ತು ಆಕೆಯ ಕುಟುಂಬ ಅವಮಾನಕ್ಕೀಡಾಗಿತ್ತು. ಇದರಿಂದ ತೀವ್ರ ನೊಂದಿದ್ದ ವಧು ಭಾನುವಾರ ರಾತ್ರಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

"ತನಗೆ ಏಪ್ರಿಲ್ 22, 2023 ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಆಮಂತ್ರಣ ಪತ್ರಗಳನ್ನೂ ವಿತರಿಸಲಾಗಿದೆ. ಮದುವೆ ತಯಾರಿ ಪೂರ್ಣವಾಗಿತ್ತು. ಈ ನಡುವೆ ವರ ಹೆಚ್ಚುವರಿ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದ. ನಮ್ಮ ಕುಟುಂಬಸ್ಥರು ಇದು ಕಷ್ಟ ಎಂದು ಹೇಳಿದ್ದರು. ಆದರೆ, ಇದಕ್ಕೆ ವರ ಒಪ್ಪಲಿಲ್ಲ. ಬಳಿಕ ಮಾನಸಿಕ ಕಿರುಕುಳ ನೀಡುತ್ತಿದ್ದ. ವಿವಾಹವನ್ನು ಮುಂದೂಡುತ್ತಲೇ ಬಂದಿದ್ದ. ಮದುವೆಯಾಗದ ಕಾರಣ ಸಮಾಜ ಅವಮಾನಕ್ಕೀಡಾಗಿದ್ದೇನೆ. ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅಪ್ಪ, ಅಮ್ಮ ನನ್ನನ್ನು ಕ್ಷಮಿಸಿ" ಎಂದು ನೋವಿನಿಂದ ಯುವತಿ ವಿಡಿಯೋದಲ್ಲಿ ಹೇಳುತ್ತಿರುವುದು ಇದೆ.

ಮಗಳಿಗೆ ನ್ಯಾಯ ಕೊಡಿಸಿ: ಮದುವೆಗೆ ಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿತ್ತು. 20 ಲಕ್ಷ ವರದಕ್ಷಿಣೆ ನೀಡಲು ಒಪ್ಪಲಾಗಿತ್ತು. ಬಳಿಕ ವರ ಹೆಚ್ಚುವರಿ ಹಣ ಕೇಳಿ ಮದುವೆ ನಿಲ್ಲಿಸಿದ್ದ. ಇದೀಗ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಯುವತಿಯ ತಂದೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಮದುವೆಗೆ 20 ದಿನ ಮುಂಚಿತವಾಗಿ ಯುವಕ 30 ಲಕ್ಷ ರೂಪಾಯಿ ಮತ್ತು ಕಾರಿಗೆ ಬೇಡಿಕೆ ಇಟ್ಟಿದ್ದ. ಇದು ಕಷ್ಟಕರವಾದ ಮೊತ್ತ ಎಂದು ಹೇಳಿದರೂ ಆತ ಕೇಳದೇ ವಿವಾಹ ಮುಂದೂಡಿದ್ದ ಎಂದು ತಂದೆ ಆರೋಪಿಸಿದ್ದಾರೆ.

ಯುವತಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಪೊಲೀಸರು ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ತನಿಖೆಯ ಹಂತದಲ್ಲಿದೆ.

ಇದನ್ನೂ ಓದಿ: Mysore accident: ಭೀಕರ ರಸ್ತೆ ಅಪಘಾತ.. ಮೀಸಲು ಪಡೆಯ ಇಬ್ಬರು ಕಾನ್ಸ್​ಟೇಬಲ್​ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.