ETV Bharat / bharat

Gang rape: ಪಾರ್ಟಿ ಬಳಿಕ ಸ್ನೇಹಿತರಿಂದಲೇ ಬಾಲಕಿ ಮೇಲೆ ಗ್ಯಾಂಗ್​ರೇಪ್​.. ತಿಂಗಳಲ್ಲಿ 2ನೇ ಕೇಸ್​! - ಪಾಟಿ ಬಳಿಕ ಗ್ಯಾಂಗ್​ರೇಪ್​

ಜಾರ್ಖಂಡ್​ನ ರಾಜಧಾನಿ ರಾಂಚಿಯಲ್ಲಿ ತಿಂಗಳ ಅಂತರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ಸ್ನೇಹಿತರೇ ಗ್ಯಾಂಗ್​ರೇಪ್​ ಮಾಡಿದ ಆಘಾತಕಾರಿ ಪ್ರಕರಣ ಇದಾಗಿದೆ.

ಬಾಲಕಿ ಮೇಲೆ ಗ್ಯಾಂಗ್​ರೇಪ್
ಬಾಲಕಿ ಮೇಲೆ ಗ್ಯಾಂಗ್​ರೇಪ್
author img

By

Published : Jul 17, 2023, 5:40 PM IST

ರಾಂಚಿ: ಪಾರ್ಟಿ ಬಳಿಕ ಸ್ನೇಹಿತರೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ಜಾರ್ಖಂಡ್​ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ರಾಜಧಾನಿಯ ಡೊರಾಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಾಲಾ ಬಾಲಕಿ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿದ ಬಳಿಕ ಮನೆಗೆ ವಾಪಸ್​ ತೆರಳುತ್ತಿದ್ದಳು. ಆಕೆಯನ್ನೇ ಹಿಂಬಾಲಿಸಿಕೊಂಡು ಬಂದ ಸ್ನೇಹಿತರು ಮತ್ತು ಇತರ ಬಾಲಕರು ಅಪ್ರಾಪ್ತೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಅತ್ಯಾಚಾರಿ ಆರೋಪಿಗಳು ಕೂಡ ಅಪ್ರಾಪ್ತರಾಗಿದ್ದಾರೆ. ಅಲ್ಲದೇ, ಪಾರ್ಟಿಯಲ್ಲಿ ಭಾಗವಹಿಸಿದ ಇತರರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರೇಪ್​ ಮಾಡಿದವರಲ್ಲಿ ಸಂತ್ರಸ್ತೆಯ ಸ್ನೇಹಿತರೂ ಇದ್ದಾರೆ. ಇದನ್ನು ಬಾಲಕಿ ಗುರುತಿಸಿದ್ದಾಳೆ. ಹೀಗಾಗಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕ್ಷಿಪ್ರ ಕಾರ್ಯಾಚರಣೆ: ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ 6 ಗಂಟೆ ಹೊತ್ತಿಗೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಲಭಿಸಿದೆ. ಮಾಹಿತಿ ತಿಳಿದ ತಕ್ಷಣ ಹಟಿಯಾ ಪೊಲೀಸ್​ ಠಾಣೆ ಡಿಎಸ್​ಪಿ ರಾಜ್​ಕುಮಾರ್ ಮಿತ್ರಾ, ಪುಂಡಗ ಠಾಣೆಯ ಪ್ರಭಾರಿ ವಿವೇಕ್ ಕುಮಾರ್, ಡೊರಾಂಡಾ ಪೊಲೀಸ್ ಠಾಣೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 10 ಬಾಲಕರನ್ನು ಬೆಳಗ್ಗೆ 9 ಗಂಟೆಗೆ ವಶಕ್ಕೆ ತೆಗೆದುಕೊಂಡರು. ಈ ಪೈಕಿ ಮೂವರನ್ನು ಸಂತ್ರಸ್ತೆ ಗುರುತಿಸಿದ್ದಾಳೆ.

ಬರ್ತಡೇ ಪಾರ್ಟಿ ಬಳಿಕ ರೇಪ್​: ಇದಕ್ಕೂ ಮುನ್ನ ಅಂದರೆ, ಜುಲೈ 14 ರಂದು ರಾಜಧಾನಿ ರಾಂಚಿಯ ಸದರ್ ಪ್ರದೇಶದಲ್ಲಿ ಸ್ನೇಹಿತನ ಬರ್ತಡೇ ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದ ಶಾಲಾ ಬಾಲಕಿಯ ಮೇಲೆ ಆಕೆಯ ಸ್ನೇಹಿತರೇ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿತ್ತು. ಪಾರ್ಟಿಯಲ್ಲಿದ್ದ ನಾಲ್ವರು ಬಾಲಕರು, ಬಾಲಕಿಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿ ನಂತರ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು.

ಘಟನೆ ಬಳಿಕ ಹೇಗೋ ಮನೆಗೆ ತೆರಳಿದ್ದ ಬಾಲಕಿ ಪೋಷಕರಿಗೆ ಈ ಬಗ್ಗೆ ವಿಷಯ ತಿಳಿಸಿದ್ದಳು. ಪೋಷಕರು ಅಂದು ತಡರಾತ್ರಿ ಮಗಳೊಂದಿಗೆ ಸದರ್ ಠಾಣೆಗೆ ಆಗಮಿಸಿ ದೂರು ನೀಡಿದ್ದರು. ಪ್ರಕರಣದ ಬೆನ್ನತ್ತಿದ ಪೊಲೀಸರು ಇಬ್ಬರು ಬಾಲಕರನ್ನು ಬಂಧಿಸಿದ್ದರು. ಬಾಲಕಿ ಕೂಡ ಅತ್ಯಾಚಾರಿಗಳನ್ನು ಗುರುತಿಸಿದ್ದಳು. ಅದರಲ್ಲಿ ಬರ್ತಡೇ ಆಚರಿಸಿಕೊಂಡ ಬಾಲಕ ಕೂಡ ಇದ್ದ ಎನ್ನುವುದು ಆಘಾತಕಾರಿ ಸಂಗತಿ.

ಇದನ್ನೂ ಓದಿ: ಅಂಗಳದಲ್ಲಿ ಆಟವಾಡುತ್ತಿದ್ದ ಮಗುವಿಗೆ ಚಾಕಲೇಟ್​ ಆಸೆ ತೋರಿಸಿ ಅಪ್ರಾಪ್ತರಿಂದ ಅತ್ಯಾಚಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.