ETV Bharat / bharat

ಪತ್ನಿ, ಮೂವರು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ! - ಈ ಟಿವಿ ಭಾರತ ಕರ್ನಾಟಕ ನ್ಯೂಸ್​

ಬಿಹಾರದ ಖಗಾಡಿಯಾದಲ್ಲಿ ತಂದೆಯೊಬ್ಬ ತನ್ನ ಮೂವರು ಹೆಣ್ಣುಮಕ್ಕಳು ಮತ್ತು ಹೆಂಡತಿ ಕತ್ತು ಹಿಸುಕಿ ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಪ್ರಕರಣ ನಡೆದಿದೆ.

Etv Bharatಪತ್ನಿ, ಮೂವರು ಹೆಣ್ಣುಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

author img

By

Published : Jun 14, 2023, 9:19 AM IST

ಖಗಾಡಿಯಾ( ಬಿಹಾರ): ಬಿಹಾರದ ಖಗಾಡಿಯಾದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಈ ಸುದ್ದಿ ಆ ಪ್ರದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಜಿಲ್ಲೆಯ ಮಾನ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಎಕಾನಿಯಾ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಬುಧವಾರ ಮುಂಜಾನೆ ವ್ಯಕ್ತಿಯೊಬ್ಬ ಕುಟುಂಬದ ಸದಸ್ಯರೆಲ್ಲರನ್ನೂ ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಭೀಕರ ಕೊಲೆಗಳ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿ ತೊಡಗಿದ್ದಾರೆ.

ಈಗಾಗಲೇ ಕೊಲೆ ಆರೋಪ ಎದುರಿಸುತ್ತಿದ್ದ ಆರೋಪಿ: ಈ ವ್ಯಕ್ತಿ ಈಗಾಗಲೇ ಮುನ್ನಾ ಯಾದವ್ ಎಂಬುವವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ನಿನ್ನೆ ರಾತ್ರಿ ಯಾವುದೋ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿದ್ದಾನೆ ಎನ್ನಲಾಗಿದೆ. ಜಗಳ ತಾರಕಕ್ಕೇರಿದ್ದರಿಂದ ಕೋಪಗೊಂಡ ವ್ಯಕ್ತಿ ಪತ್ನಿ ಹಾಗೂ ಮೂವರು ಪುತ್ರಿಯರನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಅಚ್ಚರಿಯ ಘಟನೆಯಲ್ಲಿ ಆತನ ಇಬ್ಬರು ಗಂಡು ಮಕ್ಕಳು ತಂದೆಯ ಈ ಕೃತ್ಯವನ್ನು ನೋಡಿ ಭಯಗೊಂಡು ಹೇಗೋ ಅಲ್ಲಿಂದ ತಪ್ಪಿಸಿಕೊಂಡು, ಜೀವ ಉಳಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರಕರಣದ ತನಿಖೆ ತೀವ್ರಗೊಳಿಸಿರುವ ಪೊಲೀಸರು: ಬುಧವಾರ ಬೆಳಗಿನ ಜಾವ 3 ರಿಂದ 4 ಗಂಟೆ ಸುಮಾರಿಗೆ ಈ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಾಮೂಹಿಕ ಕೊಲೆಯ ವಿಚಾರ ಗೊತ್ತಾಗುತ್ತಿದ್ದಂತೆ ಮಾನಸಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ಬಗ್ಗೆ ಸದರ್ ಎಸ್‌ಡಿಪಿಒ ಸುಮಿತ್ ಕುಮಾರ್ ತನಿಖೆ ಆರಂಭಿಸಿದ್ದಾರೆ.

ಪತ್ನಿ ಮತ್ತು ಮೂವರು ಪುತ್ರಿಯರ ಕೊಲೆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಭಾಗಲ್ಪುರದಿಂದ ವಿಧಿವಿಜ್ಞಾನ ತನಿಖಾ ತಂಡವನ್ನು ಕರೆಸಲಾಗಿದೆ. ಅದೇ ಸಮಯದಲ್ಲಿ ಮೃತರನ್ನು ಆರೋಪಿ ತಂದೆ ಮುನ್ನಾ ಯಾದವ್ (40 ವರ್ಷ), ಪತ್ನಿ ಪೂಜಾ ದೇವಿ (32 ವರ್ಷ) ಮತ್ತು ಹೆಣ್ಣು ಮಕ್ಕಳಾದ- ಸುಮನ್ ಕುಮಾರಿ (18 ವರ್ಷ), ಆಂಚಲ್ ಕುಮಾರಿ (16 ವರ್ಷ), ರೋಶನಿ ಕುಮಾರಿ (15 ವರ್ಷ) ಎಂದು ಗುರುತಿಸಲಾಗಿದೆ.

ಕೊಲೆಗೆ ಕಾರಣ ಏನು ಎಂಬ ನಿಖರವಾದ ಕಾರಣ ಗೊತ್ತಾಗಿಲ್ಲ. ತಂದೆಯಿಂದ ರಕ್ಷಿಸಿಕೊಳ್ಳಲು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿರುವ ಗಂಡು ಮಕ್ಕಳ ವಿಚಾರಣೆ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಶವಗಳ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ತಂಡದ ವರದಿ ಬಳಿಕ ಕೊಲೆಗೆ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ:NIA: ಬಿಹಾರ ಕೊಲೆ ಪ್ರಕರಣದ ಮೂವರ ವಿರುದ್ಧ 2ನೇ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.