ETV Bharat / bharat

ಲೂದಿಯಾನ ಹಣ ದರೋಡೆ ಪ್ರಕರಣ: ಐವರನ್ನು ಬಂಧಿಸಿದ ಪಂಜಾಬ್​ ಪೊಲೀಸರು - ಡಿಜಿಪಿಗೆ ಪತ್ರ ಬರೆದ ಲೂಧಿಯಾನ ಪೊಲೀಸ್ ಕಮಿಷನರ್​

ಲೂದಿಯಾನದಲ್ಲಿ ಸಿಎಂಎಸ್​ ಕಂಪನಿಗೆ ನುಗ್ಗಿದ ದರೋಡೆಕೋರರು ಸುಮಾರು 8.49 ಕೋಟಿ ರೂ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದ ಬೆನ್ನಟ್ಟಿದ ಲೂದಿಯಾನ ಪೊಲೀಸರು 10 ಆರೋಪಿಗಳ ಪೈಕಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Etv BharatLudhiana Cash Van Robbery Case: 5 arrested in Ludhiana robbery case, big revelations
Etv Bharatಲೂದಿಯಾನ ಹಣ ದರೋಡೆ ಪ್ರಕರಣ: ಐವರನ್ನು ಬಂಧಿಸಿದ ಪಂಜಾಬ್​ ಪೊಲೀಸರು
author img

By

Published : Jun 14, 2023, 7:51 AM IST

ಚಂಡೀಗಢ( ಪಂಚಾಬ್​): ಲೂಧಿಯಾನದ ಸಿಎಂಎಸ್ ಕಂಪನಿಯಲ್ಲಿ 8.49 ಕೋಟಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೂಧಿಯಾನ ಪೊಲೀಸರು ಐವರನ್ನು ಬಂಧಿಸಿದೆ. ಈ ಸಂಬಂಧ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.

"ಲೂಧಿಯಾನ ಕ್ಯಾಶ್ ವ್ಯಾನ್ ದರೋಡೆಯಲ್ಲಿ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ವಿವರಗಳು ಶೀಘ್ರದಲ್ಲೇ ನೀಡುತ್ತೇನೆ’’ ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡಿ ಈ ಪ್ರಕರಣದಲ್ಲಿ 5 ದರೋಡೆಕೋರರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅವರು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ.

ಡಿಜಿಪಿ ಟ್ವೀಟ್: "ಮಹತ್ವದ ಪ್ರಕರಣದಲ್ಲಿ ಲೂಧಿಯಾನ ಪೊಲೀಸರು ಗುಪ್ತಚರ ವಿಭಾಗದ ಸಹಾಯದಿಂದ 60 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಕ್ಯಾಶ್ ವ್ಯಾನ್ ದರೋಡೆ ಪ್ರಕರಣವನ್ನು ಭೇದಿಸಿದ್ದಾರೆ. ದರೋಡೆಯಲ್ಲಿ ಭಾಗಿಯಾಗಿರುವ 10 ಆರೋಪಿಗಳಲ್ಲಿ 5 ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ ಎಂದು ಅವರು ತಮ್ಮ ಟ್ವೀಟ್​​ ನಲ್ಲಿ ಹೇಳಿದ್ದಾರೆ.

ಡಿಜಿಪಿಗೆ ಪತ್ರ ಬರೆದ ಲೂಧಿಯಾನ ಪೊಲೀಸ್ ಕಮಿಷನರ್​: ಲೂಧಿಯಾನದ ಸಿಎಂಎಸ್ ಕಂಪನಿಯ ಕಚೇರಿಯಿಂದ 8.49 ಕೋಟಿ ರೂ ದರೋಡೆ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಮಂದೀಪ್ ಸಿಧು ಕಂಪನಿಯ ಪರವಾನಗಿ ರದ್ದುಗೊಳಿಸುವಂತೆ ಡಿಜಿಪಿ ಗೌರವ್ ಯಾದವ್ ಅವರಿಗೆ ಪತ್ರ ಬರೆದಿರುವುದು ಉಲ್ಲೇಖನೀಯ. ಕಂಪನಿಯಲ್ಲಿ ಭದ್ರತೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಕಂಪನಿಯು ಜುಗಾಡು ವ್ಯವಸ್ಥೆಯೊಂದಿಗೆ ಕೆಲಸ ಮಾಡುತ್ತಿತ್ತು. ಸೆಕ್ಯುರಿಟಿ ಗಾರ್ಡ್‌ಗಳನ್ನು ಓವರ್‌ಟೈಮ್ ಕೆಲಸ ಮಾಡುವಂತೆ ಮಾಡಲಾಗಿತ್ತು. ಕೋಟ್ಯಂತರ ರೂಪಾಯಿ ನಗದು ಹಣ ಇದ್ದರೂ ಕೇವಲ 2 ಸಿಬ್ಬಂದಿ ನಿಯೋಜಿಸಲಾಗಿತ್ತು ಎಂಬ ವಿಚಾರವನ್ನು ಕಮಿಷನರ್​​​​​​​​ ಡಿಜಿಪಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಸಿಸಿಟಿವಿ ವಿಡಿಯೋವನ್ನು ಸುರಕ್ಷಿತವಾಗಿರಿಸಲು ವಿಫಲ: ಪ್ರತಿ ಭದ್ರತಾ ಕಂಪನಿ ಸಿಸಿಟಿವಿ - ಡಿವಿಆರ್‌ಗಳನ್ನು ಆನ್‌ಲೈನ್ ಕ್ಲೌಡ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿದೆ. ಆದ್ದರಿಂದ ಎಂದಾದರೂ ದರೋಡೆ ಸಂಭವಿಸಿದರೆ, ಸಿಸಿಟಿವಿ ದೃಶ್ಯಗಳನ್ನು ಆನ್‌ಲೈನ್ ಕ್ಲೌಡ್‌ನಲ್ಲಿ ಉಳಿಸಲಾಗುತ್ತದೆ ಎಂಬ ಅಂಶವನ್ನು ಕಮಿಷನರ್​ ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಸಿಎಂಎಸ್ ಕಂಪನಿಯಲ್ಲಿ ಸುಮಾರು 50 ಸಿಸಿಟಿವಿ ಕ್ಯಾಮೆರಾಗಳು ಮತ್ತು ಐದು ಡಿವಿಆರ್‌ಗಳನ್ನು ಅಳವಡಿಸಲಾಗಿದೆ. ಈ ದುಷ್ಕರ್ಮಿಗಳು ಎಲ್ಲಾ ಡಿವಿಆರ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ಅವರ ದೃಶ್ಯಾವಳಿಗಳನ್ನು ಕ್ಲೌಡ್ ಸಿಸ್ಟಮ್‌ಗೆ ಲಿಂಕ್ ಮಾಡಲಾಗಿಲ್ಲ, ಇದರಿಂದಾಗಿ ಅವರನ್ನು ಗುರುತಿಸುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬ ವಿಚಾರವನ್ನು ಕಮಿಷನರ್​ ಡಿಜಿಪಿಗೆ ವಿವರಣೆ ನೀಡಿದ್ದಾರೆ.

ದರೋಡೆಕೋರರಿಗೆ ಲಾಭ ಮಾಡಿಕೊಟ್ಟ ಕೆಟ್ಟ ಸೆನ್ಸಾರ್ ವ್ಯವಸ್ಥೆ: ಸಿಎಂಎಸ್ ಕಂಪನಿಯ ಸೆನ್ಸಾರ್ ವ್ಯವಸ್ಥೆ ಅಷ್ಟೊಂದು ಸರಿಯಾಗಿಲ್ಲ. ಇದು ದರೋಡೆಕೋರರು ಕಂಪನಿ ಒಳಗೆ ಪ್ರವೇಶಿಸಲು ಸಹಾಯ ಮಾಡಿದೆ. ಸಂವೇದಕ ವ್ಯವಸ್ಥೆಯನ್ನು ಹೆಬ್ಬೆರಳು ಅಥವಾ ಡಿಜಿಟಲ್ ಕಾರ್ಡ್‌ನಿಂದ ಅನ್‌ಲಾಕ್ ಮಾಡಬೇಕು. ಸಂವೇದಕ ವ್ಯವಸ್ಥೆಯನ್ನು ಯಾರಾದರೂ ಟ್ಯಾಂಪರ್ ಮಾಡಿದರೆ ತಕ್ಷಣವೇ ಸೈರನ್ ಮೊಳಗಬೇಕು, ಆದರೆ ದರೋಡೆಕೋರರು ತಂತಿಗಳನ್ನು ಕತ್ತರಿಸಿದಾಗ, ಯಾವುದೇ ಮಾಹಿತಿಯು ಉನ್ನತ ಅಧಿಕಾರಿಗಳಿಗೆ ಅಥವಾ ಪೊಲೀಸ್ ನಿಯಂತ್ರಣಕ್ಕೆ ಸೆನ್ಸಾರ್​​​​ ತಲುಪಿಸಿಲ್ಲ. ಈ ಎಲ್ಲ ಎಡವಟ್ಟುಗಳಿಂದ ದರೋಡೆಕೋರರು ಸುಲಭವಾಗಿ ರಾಬರಿ ಮಾಡಿದ್ದಾರೆ ಎಂಬ ಅಂಶವನ್ನು ಲೂದಿಯಾನ ಪೊಲೀಸ್​ ಕಮಿಷನರ್​ ಪಂಜಾಬ್​ ಡಿಜಿಪಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:CoWIN app: ಟೆಲಿಗ್ರಾಮ್​ನಲ್ಲಿ ಕೋವಿನ್​ ಆ್ಯಪ್​ ಡೇಟಾ ಸೋರಿಕೆ: ಆರೋಪ ನಿರಾಕರಿಸಿದ ಕೇಂದ್ರ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.