ETV Bharat / bharat

Spurious Desi Ghee: ಕಲಬೆರಕೆ ತುಪ್ಪ: 14 ವರ್ಷಗಳ ನಂತರ ತೀರ್ಪು ಪ್ರಕಟಿಸಿದ ಕೋರ್ಟ್​

Spurious Desi Ghee Case: ಕಲಬೆರಕೆ ತುಪ್ಪ ತಯಾರಿಕೆ ಪ್ರಕರಣವೊಂದರಲ್ಲಿ ಐವರಿಗೆ ಉತ್ತರ ಪ್ರದೇಶದ ಬರೇಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

author img

By

Published : Aug 11, 2023, 9:48 PM IST

crime: life-imprisonment-to-five-guilty-making-Spurious Desi Ghee Case in bareilly, Up
ಕಲಬೆರಕೆ ತುಪ್ಪ ತಯಾರಿಕೆ... 14 ವರ್ಷಗಳ ನಂತರ ತೀರ್ಪು ಪ್ರಕಟಿಸಿದ ಕೋರ್ಟ್​

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ 14 ವರ್ಷಗಳ ಹಿಂದಿನ ಕಲಬೆರಕೆ ತುಪ್ಪ ಪ್ರಕರಣದಲ್ಲಿ ಐವರು ಅಪರಾಧಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಎಲ್ಲರಿಗೂ ತಲಾ 50 ಸಾವಿರ ರೂಪಾಯಿ ದಂಡ ಹಾಕಿದೆ. ಇದೇ ವೇಳೆ, ಇಬ್ಬರು ಖುಲಾಸೆಗೊಂಡಿದ್ದಾರೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಯಾದವ್ ಶುಕ್ರವಾರ ತೀರ್ಪು ನೀಡಿದ್ದಾರೆ. ಮಹೇಶ್, ಯೋಗೇಂದ್ರ, ಲೋಕಮಾನ್, ಸತ್ಯ ಪ್ರಕಾಶ್ ಮತ್ತು ಸುಬೋಧ್ ಎಂಬವರನ್ನು ದೋಷಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಮತ್ತೊಂದೆಡೆ, ಆರೋಪ ಸಾಬೀತಾಗದ ಕಾರಣ ರಜನೀಶ್ ಮತ್ತು ಅನುಪಮ್ ಅವರನ್ನು ನ್ಯಾಯಾಧೀಶರು ಖುಲಾಸೆಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಕಲಬೆರಕೆ ದಂಧೆಯಲ್ಲಿ ತೊಡಗಿಸಿಕೊಂಡವರಿಗೆ ವಿಧಿಸಿರುವ ಇದುವರೆಗಿನ ದೊಡ್ಡ ಶಿಕ್ಷೆ ಎಂದೇ ಪರಿಗಣಿಸಲಾಗಿದೆ.

14 ವರ್ಷಗಳ ಹಿಂದೆ 26 ಕ್ವಿಂಟಲ್ ನಕಲಿ ದೇಸಿ ತುಪ್ಪ ಪತ್ತೆ: 2009ರ ಅಕ್ಟೋಬರ್ 15ರಂದು ಸುಭಾಷ್ ನಗರ ಪೊಲೀಸರು ಸರ್ವೋದಯ ನಗರದ ಬಳಿಯ ಅನಂತ್ ಸಿಮೆಂಟ್ ಟ್ರೇಡರ್ಸ್​ನ ನೆಲಮಾಳಿಗೆಯಲ್ಲಿ ಪೊಲೀಸರು ದಾಳಿ ಮಾಡಿದ್ದರು. ನಕಲಿ ದೇಸಿ ತುಪ್ಪ ತಯಾರಿಸುತ್ತಿದ್ದ ಐವರನ್ನು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದರು. ಅಲ್ಯೂಮಿನಿಯಂ ಡ್ರಮ್‌ಗಳಲ್ಲಿ ಸಂಗ್ರಹಿಸಿದ್ದ ನಕಲಿ ದೇಸಿ ತುಪ್ಪ ಪತ್ತೆಯಾಗಿತ್ತು. ಸೀಲ್ ಮಾಡಿದ್ದ ತುಪ್ಪ ಹಾಗೂ ಸಂಸ್ಕರಿಸಿದ ಎಣ್ಣೆ, ದೇಸಿ ತುಪ್ಪದಲ್ಲಿ ಬೆರೆಸಲು ಇಟ್ಟಿದ್ದ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಒಟ್ಟಾರೆ ಸುಮಾರು 26 ಕ್ವಿಂಟಲ್ ನಕಲಿ ದೇಸಿ ತುಪ್ಪವನ್ನು ಪೊಲೀಸರು ಪತ್ತೆ ಮಾಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಎಂಟು ಮಂದಿ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ 14 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಶುಕ್ರವಾರ ಪ್ರಕರಣದ ಆದೇಶವನ್ನು ನ್ಯಾಯಾಧೀಶರು ಪ್ರಕಟಿಸಿ, ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ತೇಜ್ಪಾಲ್ ಸಿಂಗ್ ರಾಘವ್ ತಿಳಿಸಿದ್ದಾರೆ.

ಇದನ್ನೂ ಓದಿ: 37 ವರ್ಷಗಳ ಹಿಂದೆ 2 ರೂ. ಲಂಚ ಪಡೆದಿದ್ದ ಐವರು ಪೊಲೀಸರನ್ನು ಖುಲಾಸೆಗೊಳಿಸಿದ ಕೋರ್ಟ್​

ಇತ್ತೀಚೆಗೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಸುಮಾರು 37 ವರ್ಷಗಳ ಹಿಂದೆ ಪ್ರಕರಣದ ತೀರ್ಪು ಬಂದಿತ್ತು. ಇದರಲ್ಲಿ ಎರಡು ಲಂಚ ಪಡೆದ ಮೇಲೆ ಆರೋಪ ಹೊತ್ತಿದ್ದ ಐವರು ಪೊಲೀಸರನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿತ್ತು. 1986ರ ಜೂನ್ 10ರಂದು ರಾತ್ರಿ ವಾಹನ ತಪಾಸಣೆ ನಡೆಸುವ ಪೊಲೀಸರು ಸವಾರರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಆಗಿನ ಎಸ್​ಪಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಎಸ್​ಪಿ ಎರಡು ರೂಪಾಯಿ ಹಣ ಪಡೆಯುತ್ತಿದ್ದ ಐವರು ಪೊಲೀಸರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ 37 ವರ್ಷಗಳ ನಂತರ ಆದೇಶ ಹೊರಡಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.