ETV Bharat / bharat

ಜಮ್ಮು ಕಾಶ್ಮೀರದ ಶಾಲೆಯಲ್ಲಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ; ಶಿಕ್ಷಕನ ಬಂಧನ - ಎಫ್‌ಐಆರ್ ದಾಖಲು

4 ಹಾಗೂ 5ನೇ ತರಗತಿಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ಗುರೇಜ್ ಬಂಡಿಪೋರಾ ಮೂಲದವ. ಪ್ರಸ್ತುತ ಹೈದರ್ಪೋರಾದಲ್ಲಿ ವಾಸಿಸುತ್ತಿದ್ದಾನೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Teacher molests minor girls in Srinagar
ಶಾಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕ ಅರೆಸ್ಟ್..!
author img

By

Published : Jun 15, 2023, 8:15 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದ ಶ್ರೀನಗರ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಇಬ್ಬರು ಬಾಲಕಿಯರಿಗೆ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದ ಮೇಲೆ ಅರೇಬಿಕ್ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಶ್ರೀನಗರ ಪೊಲೀಸ್ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಆರೋಪಿಯ ಹೆಸರು ಸತಾರ್ ಬೇಗ್(42). ಈತ ಉತ್ತರ ಕಾಶ್ಮೀರದ ಬಂಡಿಪೋರಾದ ಗುರೆಜ್ ಜಿಲ್ಲೆಯ ನಿವಾಸಿ. ಪ್ರಸ್ತುತ ಹೈದರ್‌ಪೋರಾ ಶ್ರೀನಗರದಲ್ಲಿ ನೆಲೆಸಿದ್ದು ನಬರ್ ಬೇಗ್ ಎಂಬವರ ಪುತ್ರ.

ಶ್ರೀನಗರದ ಅಪ್‌ಟೌನ್‌ನ ರಾವಲ್‌ಪೋರಾದಲ್ಲಿರುವ ಹೋಲಿ ಫೇಯ್ತ್ ಶಾಲೆಯ ಶಿಕ್ಷಕನಾದ ಈತ 4 ಮತ್ತು 5 ನೇ ತರಗತಿಯ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಶ್ರೀನಗರದ ಸದರ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಕಲಂಗಳಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • One Arabic teacher in Holy Faith School, Rawalpora namely Satar Beigh (42) S/o Nabar Beigh R/o Gurez, Bandipora (a/p staying at Hyderpura) arrested for molesting & sexually assaulting 2 minor girl students of class 4th & 5th in school. FIR Registered under POSCO act in Sadar PS. pic.twitter.com/C5mDBS3TQc

    — Srinagar Police (@SrinagarPolice) June 14, 2023 " class="align-text-top noRightClick twitterSection" data=" ">

ಲೈಂಗಿಕ ಕಿರುಕುಳ ಪ್ರಕರಣ- ಪ್ರಾಂಶುಪಾಲರ ಬಂಧನ: ಶ್ರೀನಗರದ ಹೊರವಲಯದಲ್ಲಿ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಶಾಲೆಯ ಪ್ರಾಂಶುಪಾಲನನ್ನು ಬಂಧಿಸಿದ ಒಂದು ವಾರದ ನಂತರ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಶ್ರೀನಗರದ ಝಾಡಿಬಲ್ ಪ್ರದೇಶದ ನಿವಾಸಿ ಗುಲಾಮ್ ರಸೂಲ್ ಮಿರ್ ಎಂಬವರ ಪುತ್ರ ಶಬೀರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದೆ. ಶ್ರೀನಗರದ ಹೊರವಲಯದಲ್ಲಿರುವ ಗುಂಡ್ ಹಸ್ಸಿ ಭಟ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿ ಮಿರ್ ಕಾರ್ಯನಿರ್ವಹಿಸುತ್ತಿದ್ದರು.

ಆರೋಪಿಯನ್ನು ಬಂಧಿಸಿ ಎಫ್‌ಐಆರ್ ನಂ 31/2023 U/s 354D, 294 & 506 IPC ಯ ಶಾಲ್ಟೆಂಗ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಆರೋಪಿ ಪ್ರಾಂಶುಪಾಲ ಮಿರ್ ತನ್ನನ್ನು ಬೆದರಿಸಿ, ಹಿಂಬಾಲಿಸಿದ್ದಾರೆ. ನನ್ನ ವಿರುದ್ಧ ಅಶ್ಲೀಲ ಪದಗಳನ್ನು ಬಳಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಬಾಲಕಿಯ ಮೇಲೆ ಅತ್ಯಾಚಾರ: ಇತ್ತೀಚಿನ ದಿನಗಳಲ್ಲಿ ಮನುಕುಲವೇ ತಲೆ ತಗ್ಗಿಸುವಂತಹ ಒಂದರ ಮೇಲೊಂದರಂತೆ ಹೇಯ ದುಷ್ಕೃತ್ಯಗಳು ಜರುಗುತ್ತಿವೆ. ಇದೇ ರೀತಿಯ ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿತ್ತು. ಇತ್ತೀಚೆಗೆ ಎಂಟು ವರ್ಷದ ಬಾಲಕಿ ಮೇಲೆ ಬಾಲಕ ಅತ್ಯಾಚಾರ ಎಸಗಿದ್ದ ಪ್ರಕರಣ ನಡೆದಿತ್ತು. ಈ ಪ್ರಕರಣ ಕಾಸ್ಗಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿತ್ತು. ಅಪ್ರಾಪ್ತೆ ಮೇಲೆ 15 ವರ್ಷದ ಆರೋಪಿ ಬಾಲಕ ಅತ್ಯಾಚಾರವೆಸಗಿದ್ದನು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ್ದ ಪೊಲೀಸರು ಅತ್ಯಾಚಾರ ಎಸಗಿದ ಆರೋಪಿಯನ್ನು ಅರೆಸ್ಟ್​ ಮಾಡಿದ್ದರು.

ಇದನ್ನೂ ಓದಿ: Crime news: ಪತ್ನಿಗೆ ಚಾಕುವಿನಿಂದ ಇರಿದು‌ ರಸ್ತೆಯಲ್ಲಿ ಮಲಗಿದ ಪತಿ.. ಗಲಾಟೆಗೆ ಕಾರಣ ನಿಗೂಢ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.