ನವದೆಹಲಿ : ಸಾಲ ಪಡೆದಿದ್ದ 500 ರೂಪಾಯಿ ಹಣವನ್ನು ಹಿಂದಿರುಗಿಸದ ಹಿನ್ನೆಲೆಯಲ್ಲಿ ಯುವಕನೊಬ್ಬನನ್ನು ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಸಂಗಮ್ ವಿಹಾರದಲ್ಲಿ ಗುರುವಾರ ಘಟನೆ ನಡೆದಿದೆ. ಮೃತನನ್ನು ಫೈಜಾನ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಜೀರಾಬಾದ್ ಸಂಗಮ್ ವಿಹಾರ್‌ನ ಬೀದಿ ಸಂಖ್ಯೆ 5ರಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದನು. ಇತ್ತೀಚೆಗೆ ತನ್ನ ಸ್ನೇಹಿತರ ಜೊತೆ ಜಗಳ ಮಾಡಿಕೊಂಡಿದ್ದ.
ಇದನ್ನೂ ಓದಿ: Bengaluru crime: ಕುಂಟ ಎಂದು ರೇಗಿಸಿದ್ದಕ್ಕೆ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದು ಯುವಕನ ಹತ್ಯೆ.. ಇಬ್ಬರು ಸ್ನೇಹಿತರ ಬಂಧನ
ಹೀಗಾಗಿ ಇದರಲ್ಲಿ ಒಬ್ಬಾತ ಆತನ ಮನೆಗೆ ತೆರಳಿ ಫೈಜಾನ್‌ನನ್ನು ಕೊಲೆ ಮಾಡುವುದಾಗಿ ಮನೆಯವರಿಗೆ ಬೆದರಿಕೆ ಹಾಕಿದ್ದಾನೆ. ಸಂಬಂಧಿಕರು ಹೇಗೋ ಆತನನ್ನು ಸಮಾಧಾನಪಡಿಸಿದ್ದಾರೆ ಮತ್ತು ಫೈಜಾನ್ ಅವರೊಂದಿಗಿನ ತಪ್ಪು ತಿಳುವಳಿಕೆಯನ್ನು ನಿವಾರಿಸಲು ಮನವರಿಕೆ ಮಾಡಿದ್ದಾರೆ. ಇದಾದ ಬಳಿಕ ಫೈಜಾನ್ ಮನೆಯಿಂದ ಹೊರಟು ಹೋಗಿದ್ದಾನೆ.
ಇದನ್ನೂ ಓದಿ: ವಿಮಾನ ಹೈಜಾಕ್ ಕುರಿತು ದೂರವಾಣಿಯಲ್ಲಿ ಮಾತು.. ಏರ್ಪೋರ್ಟ್ನಲ್ಲಿ ಆರೋಪಿ ಬಂಧಿಸಿದ ಪೊಲೀಸರು
ಗುರುವಾರ ರಾತ್ರಿ ಫೈಜಾನ್ ಕೆಲಸ ಮುಗಿಸಿ ಮನೆಗೆ ಮರಳಿದಾಗ ಆತನ ಮನೆ ಮುಂದೆ ಮೂವರು ಯುವಕರು ಆತನಿಗಾಗಿ ಕಾದು ಕುಳಿತಿದ್ದರು. ಈತನನ್ನು ನೋಡಿದ ತಕ್ಷಣ ಹಿಡಿದು ಚಾಕುವಿನಿಂದ ಅವನ ಎದೆಗೆ ಇರಿದಿದ್ದಾರೆ. ಫೈಜಾನ್ ಮೆಟ್ಟಿಲು ಹತ್ತಿ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಆರೋಪಿಗಳು ಆತನನ್ನು ಅಡ್ಡಗಟ್ಟಿ ಮೂರ್ನಾಲ್ಕು ಬಾರಿ ಚಾಕುವಿನಿಂದ ಇರಿದಿದ್ದಾರೆ. ಫೈಜಾನ್ ತೀವ್ರ ರಕ್ತಸ್ರಾವವಾಗಿ ಮೆಟ್ಟಿಲುಗಳಿಂದ ಬಿದ್ದಿದ್ದಾನೆ. ಕಿರುಚಾಟ ಕೇಳಿದ ಸಂಬಂಧಿಕರು ಹೊರಗೆ ಧಾವಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತ ಮೃತಪಟ್ಟಿದ್ದ.
ಇದನ್ನೂ ಓದಿ: ಇಂದಿರಾ ಗಾಂಧಿಯಿಂದ ಜೈಲು ಪಾಲಾದ ನಾಯಕರು ರಾಹುಲ್‌ಗೆ ಸ್ವಾಗತ ಕೋರುತ್ತಿದ್ದಾರೆ: ಪ್ರತಿಪಕ್ಷಗಳಿಗೆ ಕುಟುಕಿದ ಬಿಜೆಪಿ
ಮೂವರು ಆರೋಪಿಗಳ ಬಂಧನ : ನಾನು ಯಾರಿಂದಲೂ ಹಣ ಪಡೆದಿಲ್ಲ ಎಂದು ಫೈಜಾನ್ ಹೇಳಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. "ಹಣ ತೆಗೆದುಕೊಳ್ಳದಿದ್ದರೂ ನಾವು ಹಣವನ್ನು ಹಿಂದಿರುಗಿಸಲು ಸಿದ್ಧರಿದ್ದೇವೆ. ಆದರೆ, ಆರೋಪಿಗಳು ನಮಗೆ ಹಣ ನೀಡಲು ಕಾಯದೆ ಹುಡುಗನನ್ನು ಕೊಂದರು" ಎಂದು ಸಂಬಂಧಿಕರು ಹೇಳಿದ್ದಾರೆ. ಘಟನೆಯ ಸಂಬಂಧ ಈಗಾಗಲೇ ಮೂವರನ್ನೂ ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.